RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ದಿ.9 ಮತ್ತು 10ರಂದು ಭಗೀರಥ ಪೀಠದ ಪೀಠಾಧಿಪತಿ ಡಾ.ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳವರ 25ನೇ ವರ್ಷದ ಪಟ್ಟಾಭಿಷೇಕದ ರಜತ ಮಹೋತ್ಸವ

ಗೋಕಾಕ:ದಿ.9 ಮತ್ತು 10ರಂದು ಭಗೀರಥ ಪೀಠದ ಪೀಠಾಧಿಪತಿ ಡಾ.ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳವರ 25ನೇ ವರ್ಷದ ಪಟ್ಟಾಭಿಷೇಕದ ರಜತ ಮಹೋತ್ಸವ 

ದಿ.9 ಮತ್ತು 10ರಂದು ಭಗೀರಥ ಪೀಠದ ಪೀಠಾಧಿಪತಿ ಡಾ.ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳವರ 25ನೇ ವರ್ಷದ ಪಟ್ಟಾಭಿಷೇಕದ ರಜತ ಮಹೋತ್ಸವ

ಗೋಕಾಕ ಫೆ 2 : ಅನಿವಾರ್ಯ ಕಾರಣಗಳಿಂದ ಫೆಬ್ರುವರಿ 10 ಮತ್ತು 11ರಂದು ನಡೆಯ ಬೇಕಿದ್ದ ಭಗೀರಥ ಪೀಠದ ಪೀಠಾಧಿಪತಿ ಡಾ.ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳವರ 25ನೇ ವರ್ಷದ ಪಟ್ಟಾಭಿಷೇಕದ ರಜತ ಮಹೋತ್ಸವ ಹಾಗೂ ಶ್ರೀ ಉಪವೀರ ಜರು ವಿದ್ಯಾ ಸಂಸ್ಥೆಯ 50ನೇ ವರ್ಷದ ಸುವರ್ಣ ಮಹೋತ್ಸವ ಮತ್ತು ಧಾರ್ಮಿಕ ಸಮಾರಂಭವು ದಿ.9 ಮತ್ತು 10ರಂದು ಹೊಸದುರ್ಗದ ಸುಕ್ಷೇತ್ರ ಬ್ರಹ್ಮವಿದ್ಯಾನಗರದಲ್ಲಿ ಜರುಗಲಿದೆ ಎಂದು ಶ್ರೀ ಭಗೀರಥ ಉಪ್ಪಾರ ಸಂಘದ ತಾಲೂಕಾಧ್ಯಕ್ಷ ಶಿವಪುತ್ರ ಜಕಬಾಳ ತಿಳಿಸಿದ್ದಾರೆ.
ಅವರು, ಶುಕ್ರವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಡಾ. ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳವರ ಪಟ್ಟಾಭಿಷೇಕ ಹಾಗೂ ಸುವರ್ಣ ಮಹೋತ್ಸವದ ನಿಮಿತ್ಯ ಕರೇದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ದಿ. 9ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ, ಸಚಿವರಾದ ಸತೀಶ ಜಾರಕಿಹೊಳಿ, ಡಿ ಸುಧಾಕರ, ಶಿವರಾಜ ತಂಗಡಗಿ, ಕೆ ಎನ್ ರಾಜಣ್ಣ, ಮಧು ಬಂಗಾರಪ್ಪ ಸೇರಿದಂತೆ ಕೇಂದ್ರ ಹಾಗೂ ರಾಜ್ಯದ ಸಚಿವರುಗಳು ಮತ್ತು ಮಠಾಧೀಶರು ಭಾಗವಹಿಸಲಿದ್ದಾರೆ. ದಿ.9 ಮತ್ತು 10ರಂದು ನಡೆಯಲಿರುವ ಭಗೀರಥ ಉಪ್ಪಾರ ಸಮಾಜದ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಮಾರಂಭದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು.
ಪತ್ರಿಕಾಗೊಷ್ಠಿಯಲ್ಲಿ ಉಪಾಧ್ಯಕ್ಷರುಗಳಾದ ಅಡಿವೆಪ್ಪ ಕಿತ್ತೂರ, ಕುಶಾಲ ಗುಡೆನ್ನವರ, ಸೇರಿದಂತೆ ಅನೇಕರು ಇದ್ದರು.

Related posts: