RNI NO. KARKAN/2006/27779|Thursday, November 7, 2024
You are here: Home » breaking news » ಬೈಲಹೊಂಗಲ:ರೈತನ ಸಾಧನೆಗೆ ಸಾಥ್ ನೀಡಿದ ಚಂಡು ಹೂ.

ಬೈಲಹೊಂಗಲ:ರೈತನ ಸಾಧನೆಗೆ ಸಾಥ್ ನೀಡಿದ ಚಂಡು ಹೂ. 

ರೈತನ ಸಾಧನೆಗೆ ಸಾಥ್ ನೀಡಿದ ಚಂಡು ಹೂ.
ಶಿವಾನಂದ ಮೇಟ್ಯಾಲ : ನೇಗಿನಹಾಳ (ಬೈಲಹೊಂಗಲ)
ಇತ್ತಿಚಿಗೆ ಹೂ ಕೇವಲ ಪೂಜೆ, ಜಾತ್ರೆ, ಹಬ್ಬ, ಇನ್ನಿತರ ಶುಭ ಕಾರ್ಯಗಳಿಗೆ ಅಷ್ಟೇ ಅಲ್ಲದೆ ಔಷದಿ ಮತ್ತು ಬಣ್ಣಗಳ ತಯಾರಿಕೆಗೆ ಅತ್ಯಂತ ಅವಶ್ಯಕವಾಗಿದ್ದು ಚಂಡು ಹೂವಿನ ಬೆಳೆಗೆ ತುಂಬಾ ಬೇಡಿಕೆ ಕಂಡುಬರುತ್ತಿದೆ. ಕೇರಳ ಮೂಲದ ಎ.ವಿ.ಟಿ ಎಂಬ ಕಂಪನಿಯವರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ಸುಮಾರು 150 ಎಕರೆ ಜಮೀನಿನಲ್ಲಿ ತಮ್ಮ ಕಂಪನಿಯಲ್ಲಿ ತಯಾರಿಸುವ ಔಷಧಿ ಮತ್ತು ಬಣ್ಣಗಳಿಗಾಗಿ ನೇರವಾಗಿ ರೈತರೊಂದಿಗೆ ಒಪ್ಪಂದ ಮಾಡಿಕೊಂಡು ಚಂಡು ಹೂವಿನ ಬೆಳೆಯನ್ನು ಬೆಳೆಸುತ್ತಿದ್ದಾರೆ.
ಸಾವಯವ ಬೆಳೆ :

ಸಾವಯವ ಗೊಬ್ಬರದಿಂದ ಬೆಳೆಯುವುದರಿಂದ ಔಷಧಿ ತಯಾರಿಕಾ ಕಂಪನಿಗಳು ಚಂಡಹೂವಿನ ಬೆಳೆಗೆ ಬಾರೀ ಬೇಡಿಕೆ ನೀಡುತ್ತಿದ್ದಾರೆ ಕಂಪನಿಯವರು ಖುದ್ದಾಗಿ ರೈತರ ಜಮೀನುಗಳಿಗೆ ಬಂದು ನಿಲ್ಲುತ್ತಿದ್ದಾರೆ ಮತ್ತು ಬಣ್ಣಗಳ ತಯಾರಿಕಾ ಕಂಪನಿಗಳು ರೈತರ ಬಾಗಿಲಿಗೆ ಬಂದು ಚಂಡು ಹೂವಿನ ಮಹತ್ವ ಅದರಿಂದ ಬರುವ ಲಾಭ ವಿವರಿಸುತ್ತ ನೀರಾವರಿ ಹೊಂದಿರುವ ರೈತನ ಭೂಮಿಯನ್ನು ಆಯ್ದುಕೊಂಡು ಬೀಜ, ಗೊಬ್ಬರ, ಔಷದಿಗಳನ್ನು ನೀಡುತ್ತಿದ್ದಾರೆ.

ಭೂಮಿಗೆ ಸಿದ್ದತೆ ಸಸಿ ತಯಾರಿಕೆ : ಭೂಮಿಯನ್ನು ನೇಗಿಲನಿಂದ ಉಳಿಮೆ ಮಾಡಿ ನಾಲ್ಕು ಅಡಿಗೆ ಒಂದು ಸಾಲುಗಳಂತೆ ಹದಗೊಳಿಸಿ ಸುಮಾರು ಎಂಟು ಇಂಚಿಗೆ ಒಂದು ಗಿಡ ನೆಡಲಾಗುವುದು. ಕಂಪನಿಯವರು ನೀಡಿದ ಬೀಜಗಳನ್ನು ಪಲವತ್ತಾದ ಮಣ್ಣಿನಲ್ಲಿ ಸಾವಯವ ಗೊಬ್ಬರ ಮಿಶ್ರಣ ಮಾಡಿ ಚಿಕ್ಕ ಚಿಕ್ಕ ಮಡಿಗಳಲ್ಲಿ ಬೀಜ ಹಾಕಿ ಜಾರಿಯಿಂದ ಸೂಕ್ಷ್ಮರೀತಿಯಲ್ಲಿ ನೀರು ಹಣಿಸಿವ ಮುಖಾಂತರ ಸಸಿ ಬೆಳೆಸಲಾಗುವುದು.
ಹೂವಿನ ಬೆಳೆಯುವ ವಿಧಾನ :

ರೈತರು ಚಂಡು ಹೂವಿನ ಬೀಜಗಳು ಸಸಿ ಹಾಕಿ ನಂತರ ಹೊಲದಲ್ಲಿ ನಾಟಿ ಮಾಡಿ ಸರಿಯಾದ ಪ್ರಮಾಣದಲ್ಲಿ ಸಾವಯವ ಗೊಬ್ಬರ ಮತ್ತು ಔಷದಿ, ನೀರು ನೀಡಿ ಬೆಳೆಸಲು ಸೂಕ್ತ ಸಲಹೆ ನೀಡಿ ಬೆಳೆಯ ಮೆಲ್ವೀಚಾರಣೆಯನ್ನು ಕಂಪನಿಗಳೆ ಕುದ್ದಾಗಿ ನೂಡಿಕೊಳ್ಳುತ್ತಿವೆ. ನಂತರ ಚಂಡ ಹೂವಿನ ಸಸಿಗಳನ್ನು 3 ರಿಂದ 4 ಅಡಿಯ ಸಾಲುಗಳಲ್ಲಿ 2 ಅಡಿಗೆ ಒಂದರಂತೆ ಒಂದು ಎಕರೆಯಲ್ಲಿ ಸುಮಾರು 6,500 ದಿಂದ 8,000 ಗಿಡಗಳ ನೆಡಬಹುದು. 4 ತಿಂಗಳಿಗೊಮ್ಮೆ ಅಂತೆ ಸುಮಾರು 8 ರಿಂದ 10 ಟನ್‍ವರಿಗೆ ಒಂದು ವರ್ಷಕ್ಕೆ 35 ರಿಂದ 40ಟನ್ ಇಳುವರಿ ತೆಗೆಯಬಹುದು

.
ಔಷಧಿ ಮತ್ತು ಬಣ್ಣ ತಯಾರಿಕೆಗೆ ಉಪಯೋಗ :
ಕೇರಳ ಮೂಲದ ಎ.ವಿ.ಟಿ ಎಂಬ ಕಂಪನಿಯವರು ಮನುಷ್ಯನ ಚರ್ಮರೋಗಗಳಿಗೆ, ವಿದೇಶದಲ್ಲಿ ಚಿಕ್ಕಮಕ್ಕಳ ಕಣ್ಣಿಗೆ ಹಾಕುವ ಎಣ್ಣೆ, ಕೋಳಿಯ ಆಹಾರದಲ್ಲಿ ಮಿಕ್ಸ್ ಮಾಡುಲಾಗುತ್ತದೆ ಇದರಿಂದ ಎಗ್ಗ್‍ವೆಟ್ ಪ್ರಮಾಣ ಹೆಚ್ಚುತ್ತದೆ. ಇತರ ಔಷದಿ ತಯಾರಿಕೆಗಾಗಿ ಬಳೆಸಲಾಗುತ್ತದೆ. ಕಂಪನಿಯವರು ರೈತರೊಂದಿಗೆ ಒಪ್ಪಂದದ ಮೂಲಕ ಪ್ರತಿನಿದಿಗಳು ರೈತರಿಗೆ ಹೂವಿಗೆ ಬೀಜ, ಸಾವಯವ ಗೊಬ್ಬರ, ಔಷಧಿಗಳನ್ನು ತಾವೇ ಖುದ್ಧಾಗಿ ನೀಡುತ್ತಾರೆ. ಕಂಪನಿಯ ಒಪ್ಪಂದದ ಪ್ರಕಾರ ಬೆಳೆಯುವ ಹೂವಿನ ಬೆಳೆಗೆ ಬೇರೆ ಯಾವುದೇ ರೀತಿಯ ಔಷಧಿ, ಗೊಬ್ಬರಗಳನ್ನು ಉಪಯೋಗಿಸಬಾರದು ಮತ್ತು ಅಲ್ಲಿ ಬೆಳೆದ ಹೂವನ್ನು ಬೇರೆ ಕಡೆ ಮಾರಾಟ ಮಾಡುವಂತಿಲ್ಲಾ. ಜೊತೆಗೆ ಬೆಳೆದಂತಹ ಹೂವನ್ನು ಆಯಾ ಕಂಪನಿಯವರು ರೈತರ ಹೊಲಗಳಿಗೆ ಬಂದು ಅಲ್ಲಿಯೇ ಹೂವು ತೆಗೆದುಕೊಂಡು ಹೋಗುತ್ತಾರೆ.

ವೆಚ್ಛ ಮತ್ತು ಆದಾಯ :

ವರ್ಷದಲ್ಲಿ ಕನಿಷ್ಠ 3 ರಿಂದ 4 ತಿಂಗಳಿಗೆ ಒಮ್ಮೆಯಂತೆ 3 ಬಾರಿ ಬೆಳೆಯಬಹುದು ಅದಕ್ಕೆ ಪ್ರತಿಬಾರಿ 35,000 ರಿಂದ 40,000 ರೂ ವೆಚ್ಛ ತಗುಲಬಹುದು. ಇದು ವರ್ಷಕ್ಕೆ 1.5 ಲಕ್ಷವರೆಗೂ ವೆಚ್ಚಬರುತ್ತದೆ.
ಪ್ರತಿ 3-4 ತಿಂಗಳಿಗೆ 8 ರಿಂದ 10 ಟನ್ ಹೂ ಬೆಳೆಯಬಹುದು. ಒಂದು ಟನ್ ಹೂವಿಗೆ ಕನಿಷ್ಠ 9,000 ಒಂದು ಬೀಡಿನಲ್ಲಿ 70 ರಿಂದ 80 ಸಾವಿರ ಗಳಿಸಬಹುದು. ವರ್ಷಕ್ಕೆ ಕನಿಷ್ಠ ಅಂದಾಜು 2 ಲಕ್ಷದವರಿಗೆ ಆದಾಯ ಪಡೆಬಹುದಾಗಿದೆ. ಹೂವು ತೆಗೆದುಕೊಂಡ ಹೊದ 15 ರಿಂದ 20 ದಿನಗಳಲ್ಲಿ ಚಕ್ ಮುಖಾಂತರ ಹಣ ನೀಡುತ್ತಾರೆ.

ಚಂಡ ಹೂವಿನ ಬೆಳೆಗೆ ಎದುರಾಗುವ ಸಮಸ್ಯೆಗಳು
ಮಣ್ಣಿನ ಗುಣಲಕ್ಷಣಗಳ ಆಧರಿಸಿ ಹಲವಾರು ಬಗೆಯ ರೋಗಗಳು ಬರುತ್ತವೆ ಅವುಗಳೆಂದರೆ ಕೀಡೆಬಾದೆ, ಎಲೆಯಮೇಲೆ ನಾಗರಾಳ (ಲಿಪ್‍ಮೈನರ್), ಎಲೆಚಿಕ್ಕಿ, ಹೀಗೆ ಮುಂತಾದ ರೋಗಗಳಿಂದ ಬೆಳೆಯ ಪ್ರಮಾಣ ಕುಂಠಿತಗೊಳ್ಳುವ ಸಾದ್ಯತೆಗಳು ಸಹ ಇರುತ್ತದೆ. ಹೂವಿನ ಕೊಯೈಲು ಮಾಡಲು ಹೆಚ್ಚಿನ ಪ್ರಮಾಣದಲ್ಲಿ ಕಾರ್ಮಿಕರ ಅವಶ್ಯಕತೆ ಇದೆ.
ಶ್ರೀ ಮಂಜುನಾಥ ಮರಿತಮ್ಮನವರ.:
ಯುವ ಉತ್ಸಾಹಿ ರೈತ
ಔಷದಿ ಮತ್ತು ಮತ್ತು ಬಣ್ಣಗಳ ತಯಾರಿಕಾ ಕಂಪನಿಯವರು ನಮ್ಮ ಹೊಲಗಳಿಗೆ ಬಂದು ನೀರಿನ ಸವಲತ್ತು, ಮಣ್ಣು ಪರೀಕ್ಷಿಸಿ ಒಪ್ಪಂದದ ಮೇರೆಗೆ ಚಂಡು ಹೂವಿನ ಬೀಜ, ಗೊಬ್ಬರ, ಔಷಧಿಗಳನ್ನು ವಿತರಿಸಿ ಬೆಳೆಯಲು ಸಲಹೆ ನೀಡುತ್ತಾ ಅವರೇ ಖುದ್ಧಾಗಿ ಹೂವಿನ ಗಿಡಗಳ ಮೇಲ್ಮಿಚಾರಣೆ ವಹಿಸುವುದರಿಂದ ನಮ್ಮ ರೈತರಿಗೆ ಯಾವುದೇ ಹಾನಿಯಾಗಲಾರದು.. ಬೆಳೆದ ಬೆಳೆಯನ್ನು ತಾವು ನಮ್ಮ ಹೊಲಗಳಿಗೆ ಬಂದು ತೆಗೆದುಕೊಂಡು ಹೊಗುವುದರಿಂದ ನಮಗೆ ಮಾರುಕಟ್ಟಿಗಳಿಗೆ ಹೋಗುವ ತೊಂದರೆ ತಪ್ಪುತ್ತದೆ.

Related posts: