ಗೋಕಾಕ:ನಿರಂತರ ಯೋಗಾಭ್ಯಾಸ ಮಾಡುವುದರಿಂದ ಯಾವುದೆ ರೋಗ ಬಾರದಂತೆ ನಮ್ಮ ದೇಹ ಬಲಿಷ್ಠವಾಗುತ್ತದೆ : ವಿಶ್ವಾನಾಥ್ ಕಡಕೋಳ
ನಿರಂತರ ಯೋಗಾಭ್ಯಾಸ ಮಾಡುವುದರಿಂದ ಯಾವುದೆ ರೋಗ ಬಾರದಂತೆ ನಮ್ಮ ದೇಹ ಬಲಿಷ್ಠವಾಗುತ್ತದೆ : ವಿಶ್ವಾನಾಥ್ ಕಡಕೋಳ
ಗೋಕಾಕ ಶಿಕ್ಷಣ ಸಂಸ್ಥೆಯಲ್ಲಿ 10ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ
ಗೋಕಾಕ ಜೂ 21 : ನಿರಂತರ ಯೋಗಾಭ್ಯಾಸ ಮಾಡುವುದರಿಂದ ನಮ್ಮ ಮನಸ್ಸು ಸದೃಡಗೊಳ್ಳುವ ಜೊತೆಗೆ ಯಾವುದೆ ರೋಗ ಬಾರದಂತೆ ನಮ್ಮ ದೇಹ ಬಲಿಷ್ಠವಾಗುತ್ತದೆ ಎಂದು ಗೋಕಾಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ್ ಕಡಕೋಳ ಅಭಿಪ್ರಾಯಪಟ್ಟರು.
ಶುಕ್ರವಾರದಂದು ನಗರದ ಗೋಕಾಕ ಶಿಕ್ಷಣ ವಿದ್ಯಾ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ 10ನೇ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆಧುನಿಕ ಜೀವನ ಶೈಲಿಯಲ್ಲಿ ಹಲವಾರು ರೋಗಗಳಿಂದ ಮನುಷ್ಯ ಬಳಲುತ್ತಿದ್ದಾನೆ. ಇದಕ್ಕೆ ಪರಿಹಾರ ನಿತ್ಯ ಯೋಗಾಸನ ಮಾಡುವುದು. ಇದರಿಂದ ನಮ್ಮ ಆರೋಗ್ಯ ಮತ್ತು ಮನಸ್ಸನ್ನು ಸದೃಢಗೊಳಿಸಬಹುದು. ಆದ್ದರಿಂದ ಮಕ್ಕಳು ಬೆಳಗಿನ ಸಮಯದಲ್ಲಿ ಸರಳವಾದ ಪ್ರಾಣಯಾಮ, ಸೂರ್ಯನಮಸ್ಕಾರ ಮಾಡಬೇಕು. ಇದರಿಂದ ಮುಖದ ಕಾಂತಿ ಹೆಚ್ಚುವುದರ ಜತೆಗೆ ನೆನಪಿನ ಶಕ್ತಿ ವೃದ್ಧಿಸುತ್ತದೆ. ಕಲಿಕೆಯಲ್ಲಿ ಆಸಕ್ತಿಯುಂಟಾಗುತ್ತದೆ ಎಂದರು.
ಇದೇ ವೇಳೆ ಯೋಗ ತರಬೇತಿದಾರೆ ಶ್ರೀಮತಿ ಅನುಷಾ ಶಹಾ ಅವರು ವಿದ್ಯಾರ್ಥಿಗಳಿಗೆ ಸೂರ್ಯ ನಮಸ್ಕಾರ, ಉತ್ಕಟಾಸನ, ಅರ್ಧಕಡಿ ಚಕ್ರಾಸನ, ಪದ್ಮಾಸನದಂತಹ ಆಸನಗಳನ್ನು ಮಾಡಿಸಿ, ನಿತ್ಯ ಸೂರ್ಯೋದಯಕ್ಕೂ ಮುನ್ನ ಮತ್ತು ನಂತರ ಯೋಗಾಭ್ಯಾಸ ಮಾಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ ಮಹಾಂತೇಶ ತಾವಂಶಿ , ಕಾರ್ಯದರ್ಶಿ ಆರ್.ಎಂ.ವಾಲಿ, ಪ್ರಾಚಾರ್ಯ ಬಿ.ಎಸ್.ತುರಡಗಿ, ಶ್ರೀಮತಿ ರಾಜೆಶ್ರೀ ಬಿರಾದಾರ, ಎ.ಎಂ.ಶೆಟೆನ್ನವರ, ಎಸ್.ಕೆ.ಮಠದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.