ಗೋಕಾಕ:ಗೋಕಾಕ ಮತ್ತು ಮೂಡಲಗಿ ತಾಲ್ಲೂಕಿನ ಸರಕಾರದಿಂದ ನಿರೀಕ್ಷಿತ ಬೆಂಬಲ ಸಿಗುತ್ತಿಲ್ಲ : ಡಾ.ಮಹಾಂತೇಶ ಕಡಾಡಿ
ಗೋಕಾಕ ಮತ್ತು ಮೂಡಲಗಿ ತಾಲ್ಲೂಕಿನ ಸರಕಾರದಿಂದ ನಿರೀಕ್ಷಿತ ಬೆಂಬಲ ಸಿಗುತ್ತಿಲ್ಲ : ಡಾ.ಮಹಾಂತೇಶ ಕಡಾಡಿ
ಗೋಕಾಕ ಜು 4 : ಗೋಕಾಕ ಮತ್ತು ಮೂಡಲಗಿ ತಾಲ್ಲೂಕಿನ ಸರಕಾರದಿಂದ ನಿರೀಕ್ಷಿತ ಬೆಂಬಲ ಸಿಗುತ್ತಿಲ್ಲ ಎಂದು ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಡಾ.ಮಹಾಂತೇಶ ಕಡಾಡಿ ಆರೋಪಿಸಿದ್ದಾರೆ.
ಗುರುವಾರದಂದು ನಗರದ ತಮ್ಮ ಕಛೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಜೂ 30ರಂದು ಆಸ್ಪತ್ರೆಯಲ್ಲಿ 7 ತಿಂಗಳ 3 ದಿನಗಳಿಗೆ ಮಗುವಿನ ಹೆರಿಗೆಯಾಗಿದ್ದು, ಹೆರಿಗೆ ಸಮಯದಲ್ಲಿ ಮಗು 1 ಕಿಲೋ 300 ಗ್ರಾಂ ಗ್ರಾತದಾಗಿತ್ತು. ದಿನಗಳು ಪೂರ್ಣ ತುಂಬದ ಪರಿಣಾಮ ಮಗುವಿನ ಆರೋಗ್ಯದಲ್ಲಿ ಹೇರುಪೇರಾಗಿ ಪ್ಲೇಟ್ಲೆಟ್ ಕಡಿಮೆ , ಉಸಿರಾಟ ತೊಂದರೆಯಾಗಿ ಮಗುವನ್ನು ಆಕ್ಸಿಜನ್ ಮೇಲೆ ಹಿಡಲಾಗಿತ್ತು, ಇಂತಹ ಸಂದರ್ಭದಲ್ಲಿ ಮಗುವಿಗೆ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲು ಆಗುವುದಿಲ್ಲ ಎಂಬ ವಿಷಯವನ್ನು ಪಾಲಕರಿಗೆ ಮೊದಲೇ ಮನವರಿಕೆ ಮಾಡಿಕೊಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಗು ತಿರಿಕೊಂಡಿದೆ. ಇದನ್ನು ಸಹ ಪಾಲಕರಿಗೆ ಮಗುವಿನ ಆರೋಗ್ಯದ ಬಗ್ಗೆ ತಿಳಿಹೇಳಿ ಮನವರಿಕೆ ಮಾಡಿಕೊಡಲಾಗಿತ್ತು ಆದರೆ ಶಾಸಕರ ಬೆಂಬಲಿಗರಾದ ಬೆನಚಿನಮರಡಿ ಗ್ರಾಮದ ಲಕ್ಕಪ್ಪ ಮಾಳಗಿ, ವಿಠಲ ಗುಂಡಿ, ಬಾಳಪ್ಪ ಗಿಡ್ಡನವರ ಸೇರಿದಂತೆ ಸುಮಾರು 30 ರಿಂದ 35 ಜನರು ಆಸ್ಪತ್ರೆಯ ಮೇಲೆ ದಾಳಿ ಮಾಡಿದ್ದಾರೆ. ಈ ಪ್ರಕರಣ ಮಗುವಿನ ಸಾವಿನಕ್ಕಿಂತ ಇದು ರಾಜಕೀಯ ಪ್ರೇರಿತವಾಗಿದೆ ಎಂದ ಅವರು, ಇವರ ಮೇಲೆ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ ಎಂದು ಹೇಳಿದರು.
ಗೋಕಾಕದಲ್ಲಿ ರಾಜಕೀಯದಲ್ಲಿ ಶಾಸಕರ ಕುಟುಂಬಕ್ಕೆ ವಿರೋಧ ಮಾಡಿದರವರಿಗೆ ಧಮಕಿ ಹಾಕಿ , ಅವರ ಉದ್ಯೋಗ ಬಂದ ಮಾಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ದಲಿತನಾಯಕರಿಂದಲೂ ಸಹ ಕೇಸ ಹಾಕುವ ಕಾರ್ಯ ನಡೆಯುತ್ತಿದೆ. ಗೋಕಾಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ.ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಎಂಪಿ ಕ್ಯಾಂಡಿಡೇಟ್ ಮೃಣಾಳ ಮತ್ತು ನನ್ನ ಮೇಲೆ ಹಲ್ಲೆ ಮಾಡಲು ಮುಂದಾದವರ ಮೇಲೆ ಈಗಾಗಲೇ ಎಫ್ಐಆರ್ ದಾಖಲು ಮಾಡಿದರು ಸಹ ಪೊಲೀಸರು ಏನು ಕ್ಥಮ ಕೈಗೊಂಡಿಲ್ಲ. ಈ ಕುರಿತು ಸಿಎಂ ಮತ್ತು ಡಿಸಿಎಂ ಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಲಾಗಿದೆ.
ಕಳೆದ ಒಂದು ವರ್ಷದಿಂದ ಗೋಕಾಕ ತಾಲೂಕಿನ ಸುತ್ತ ಮರಳು ದಂಧೆ ಮಾಡುತ್ತಿದ್ದವರ ವಿರುದ್ಧ ನಾನು ದೂರು ನೀಡಿದ್ದರಿಂದ ನನಗೆ ಇವರು ಈ ರೀತಿ ಮಾಡುತ್ತಿದ್ದಾರೆ. ನಾನು ಮುಂದೆ ರಾಜಕೀಯ ಮಾಡಬಾರದು ಎಂಬ ಕಾರಣಕ್ಕೆ ಇದನ್ನು ಮಾಡಿದ್ದಾರೆ.
ಕನಸಗೇರಿ ಗ್ರಾಮದಲ್ಲಿ ಕುಲಷಿತ ನೀರು ಕುಡಿದು 3 ಜನ ಸಾವನ್ನಪ್ಪಿದ್ದಾರೆ ಇದರ ಬಗ್ಗೆ ನಾವು ಮೇಲಾಧಿಕಾರಿ ಅವರ ಗಮನಕ್ಕೆ ತಂದಾಗಾ ನನಗೆ ಧಮಕಿ ಹಾಕಿದ್ದಾರೆ. ನನ್ನ ವಿರುದ್ಧ ಗ್ಯಾಂಗ್ ರೆಡಿ ಮಾಡಿ ನನ್ನ ಮೇಲೆ ಹಲ್ಲೆ ಮಾಡಲು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ರಿಂದಲೂ ನಿರೀಕ್ಷಿತ ಬೆಂಬಲ ವಿಲ್ಲಾ : ಕಳೆದ ಒಂದು ವರ್ಷದಿಂದ ನನ್ನ ಮೇಲೆ ನಿರಂತರವಾಗಿ ಹಲ್ಲೆಗೆ ಯತ್ನ ಮಾಡಿದಂತಹ ಪ್ರಯತ್ನಗಳು ನಡೆದ ಬಗ್ಗೆ ಜಿಲ್ಲಾ ಮಂತ್ರಿ ಸತೀಶ ಜಾರಕಿಹೊಳಿ, ಹೆಬ್ಬಾಳಕರ ಸೇರಿದಂತೆ ಅನೇಕರಿಗೆ ದೂರು ನೀಡಿದರು ಏನು ಪ್ರಯಾಜನವಾಗಿಲ್ಲ. ರಾಜ್ಯದ ಇತರೆ ಸಚಿವರು ಮತ್ತು ಶಾಸಕರಿಗೆ ಇದರ ಬಗ್ಗೆ ಹೇಳಿದಾಗ ಗೋಕಾಕ ಉಸಾಬರಿ ನಮ್ಮಗೆ ಬೇಡಾ ಬಿಡ್ಡಪ್ಪ ಎಂದು ಹಾರೈಕೆ ಉತ್ತರ ಕೋಡುತ್ತಾರೆ. ಹಾಗಾಗಿ ಸರಕಾರದಿಂದಲೂ ಜಾರಕಿಹೊಳಿ ದುರಾಡಳಿತ ವಿರುದ್ಧ ಯಾವುದೇ ಕ್ರಮಕೈಗೊಳ್ಳದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಡಾ.ಮಹಾಂತೇಶ ಕಡಾಡಿ ನಿತ್ಸಾಯಕವಾಗಿ ಹೇಳಿದರು.
ಕೃಷಿಯೇತರ ಜಮೀನು (ಎನ್.ಎ) ಮಾಡಲು ಕ್ರಮ : ನಗರದಲ್ಲಿ ಕಾನೂನು ರೀತಿ ಎಲ್ಲವನ್ನು ಹೊಂದಿದ್ದರೆ ಕೃಷಿ ಜಮೀನ್ನು , ಕೃಷಿಯೇತರ ಜಮೀನು ( ಎನ್.ಎ) ಮಾಡಿಕೊಡಲು ನಾವು ಬದ್ದರಾಗಿದ್ದು, ನಗಯ ಯೋಜನಾ ಪ್ರಾಧಿಕಾರ ನಮ್ಮ ಕೈಯಲ್ಲಿದ್ದು, ಸಾರ್ವಜನಿಕರು ಯಾವುದೇ ಭಯಪಡದೆ ನೇರವಾಗಿ ನಮ್ಮನ್ನು ಸಂಪರ್ಕಿಸಿದರೆ ದಾಖಲಾತಿಗಳನ್ನು ಪರಿಶೀಲಿಸಿ ಎನ್.ಎ ಮಾಡಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಶಿಂಳಾಪೂರ ಟೆಕ್ಕೆಯಲ್ಲಿ ಈಗಾಗಲೇ ಕೆಲವರು ಎನ್.ಎ ಆಗದ ಜಮೀನನ್ನು ಬಾಂಡ ಕಾಗದದ ಮೇಲೆ ಖರೀದಿ ನೀಡುತ್ತಿದ್ದಾರೆ ಇದು ಕಾನೂನು ಬಾಹಿರವಾಗಿದ್ದು ಇದರ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ದೂರು ನೀಡಲಾಗಿದ್ದು, ಸಾರ್ವಜನಿಕರು ಶಿಂಗಳಾಪೂರ ಹದ್ದೆಯಲ್ಲಿ ಜಮೀನು ಖರೀದಿಸಬೇಕೆಂದರೆ ಜಾಗೃತವಾಗಿ ಜಮೀನು ಖರೀಸಿದ ಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು