ಗೋಕಾಕ:ನವ ಜೀವನ ಆಸ್ಪತ್ರೆಗೆ ಉಪವಿಭಾಗಾಧಿಕಾರಿ ಪ್ರಭಾವತಿ ಅನಿರೀಕ್ಷಿತ ಭೇಟಿ : ಸೋನೋಗ್ರಾಫೀ ಯಂತ್ರ ಸೀಜ್
ನವ ಜೀವನ ಆಸ್ಪತ್ರೆಗೆ ಉಪವಿಭಾಗಾಧಿಕಾರಿ ಪ್ರಭಾವತಿ ಅನಿರೀಕ್ಷಿತ ಭೇಟಿ : ಸೋನೋಗ್ರಾಫೀ ಯಂತ್ರ ಸೀಜ್
ಗೋಕಾಕ ಜು 5 : ಉಪ ವಿಭಾಗಾಧಿಕಾರಿ ಪ್ರಭಾವತಿ ಪಕೀರಪುರ ಅವರು ಇಲ್ಲಿನ ನವ ಜೀವನ ಖಾಸಗಿ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ
ಭೇಟಿ ನೀಡಿ, ರೋಗಿಗಳ ಸ್ಥಿತಿ ಹಾಗೂ ಆಸ್ಪತ್ರೆಯಲ್ಲಿರುವ (ಲ್ಯಾಬೋರೇಟರಿ )ಯಂತ್ರಗಳನ್ನು ಪರಿಶೀಲಿಸಿ, ದೋಷಕಂಡು ಬಂದ ಕಾರಣ ಸೋನೋಗ್ರಾಫೀ ಯಂತ್ರವನ್ನು ಸೀಜ್ ಮಾಡಿದ ಘಟನೆ ಮಧ್ಯಾಹ್ನ ನಗರದಲ್ಲಿ ನಡೆದಿದೆ.
ಶುಕ್ರವಾರದಂದು ನಗರದಲ್ಲಿ ಆಯೋಜನೆಯಾಗಿದ್ದ ಜನಸ್ಪಂದನ ಕಾರ್ಯಕ್ರಮಕ್ಕೆ ಬಂದಿದ್ದ ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ ಅವರು ನಗರದಲ್ಲಿರುವ ನವಜೀವನ್ ಖಾಸಗಿ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ ಆಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಸೋನೋಗ್ರಾಫೀ ಯಂತ್ರದಲ್ಲಿ ನೂನ್ಯತೆ ಕಂಡು ಬಂದ ಪರಿಣಾಮ ಅದನ್ನು ಸೀಜ್ ಮಾಡಿ ಆಸ್ಪತ್ರೆಯ ವೈದ್ಯರಿಗೆ ನೋಟಿಸಿ ನೀಡಿ,ಸೋನೋಗ್ರಾಫೀ ಯಂತ್ರವನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗುವುದು ಎಂದು ಪತ್ರಿಕೆಗೆ ತಿಳಿಸಿದ್ದಾರೆ.