ಗೋಕಾಕ:ರೋಟರಿ ಕ್ಲಬ್ ಉತ್ತಮ ಸೇವೆಗಳನ್ನು ಸಲ್ಲಿಸುವ ಮೂಲಕ ಸಮಾಜದಲ್ಲಿತನ್ನದೇ ಛಾಪು ಮೂಡಿಸಿದೆ : ಅವಿನಾಶ್ ಪೋತದಾರ
ರೋಟರಿ ಕ್ಲಬ್ ಉತ್ತಮ ಸೇವೆಗಳನ್ನು ಸಲ್ಲಿಸುವ ಮೂಲಕ ಸಮಾಜದಲ್ಲಿತನ್ನದೇ ಛಾಪು ಮೂಡಿಸಿದೆ : ಅವಿನಾಶ್ ಪೋತದಾರ
ಗೋಕಾಕ ಜು 14 : ರೋಟರಿ ಕ್ಲಬ್ ಉತ್ತಮ ಸೇವೆಗಳನ್ನು ಸಲ್ಲಿಸುವ ಮೂಲಕ ಸಮಾಜದಲ್ಲಿತನ್ನದೇ ಛಾಪು ಮೂಡಿಸಿದೆ ಎಂದು ರೋಟರಿ ಕ್ಲಬ್ ಪದಗ್ರಹಣ ಅಧಿಕಾರಿ ಅವಿನಾಶ್ ಪೋತದಾರ ಹೇಳಿದರು.
ರವಿವಾರದಂದು ನಗರದ ರೋಟರಿ ರಕ್ತ ಭಂಡಾರ ಸಭಾಂಗಣದಲ್ಲಿ ರೋಟರಿ ಸಂಸ್ಥೆ ಮತ್ತು ಇನರ್ ವ್ಹಿಲ್ ಸಂಸ್ಥೆಯ 2024-25 ನೇ ಸಾಲಿನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನರ ಕಷ್ಟಗಳಿಗೆ ಸ್ಪಂದಿಸುವುದು ಹಾಗೂ ಸೇವಾ ಮನೋಭಾವವೇ ರೋಟರಿ ಸಂಸ್ಥೆಯ ಮುಖ್ಯ ಉದ್ದೇಶವಾಗಿದ್ದು,ಜನರಿಗೆ ಸಹಾಯ, ಸಹಕಾರ ನೀಡುವುದರ ಮೂಲಕ ಸಮುದಾಯಕ್ಕೆ ಸಹಾಯಹಸ್ತ ನೀಡುವುದು ಗುರಿಯಾಗಿದೆ. ಸಮಾಜದಲ್ಲಿ ನೊಂದ ಕುಟುಂಬಗಳನ್ನು ಗುರುತಿಸಿ, ಅವರಿಗೆ ಆರ್ಥಿಕ ನೆರವು, ಆರೋಗ್ಯ, ಶಿಕ್ಷಣ, ಸ್ವ–ಉದ್ಯೋಗ ಕಲ್ಪಿಸಲಾಗುವುದು. ಇದರೊಂದಿಗೆ ಸಾಮಾಜಿಕ ಸೇವೆಯ ತೃಪ್ತಿ ಕಾಣಬಹುದು’ ಎಂದ ಅವರು ಸಮಾಜದಲ್ಲಿ ರೋಟರಿ ಸಂಸ್ಥೆಯೂ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿದೆ. ಮುಂದಿನ ದಿನದಲ್ಲಿಮತ್ತಷ್ಟು ಸೇವೆ ಸಲ್ಲಿಸುವಂತಾಗಬೇಕು ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಘೋಡಗೇರಿಯ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.
ರೋಟರಿ ಸಂಸ್ಥೆಯ ಅಧ್ಯಕ್ಷರಾಗಿ ಡಾ.ಸಿದ್ಧಣ ಕಮತ್, ಕಾರ್ಯದರ್ಶಿ ರಾಜಶೇಖರ ಮುನ್ನೋಳಿಮಠ, ಖಜಾಂಚಿಯಾಗಿ ಸಚಿನ ಜಾಧವ್ ಅಧಿಕಾರ ಸ್ವೀಕರಿಸಿದರೆ, ಇನರವ್ಹಿಲ್ ಸಂಸ್ಥೆಯ ಅಧ್ಯಕ್ಷರಾಗಿ ಜಯಶ್ರೀ ಕಮತ, ಕಾರ್ಯದರ್ಶಿಯಾಗಿ ಅನುಪಾ ಕೌಶಿಕ, ಖಜಾಂಚಿಯಾಗಿ ಗಿರಿಜಾ ಮುನ್ನೋಳಿಮಠ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ರೂಪಾ ಪೋತದಾರ, ಮಹೇಶ ಬೆಲ್ಲದ , ರೋಟರಿ ಸಂಸ್ಥೆಯ ಮಲ್ಲಿಕಾರ್ಜುನ ಈಟಿ, ಗಿರೀಶ್ ಝಂವರ ಉಪಸ್ಥಿತರಿದ್ದರು