ಗೋಕಾಕ:ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದ ಮಕ್ಕಳ ಶೈಕ್ಷಣಿಕ ಕಾಳಜಿ : ಎಂ.ಬಿ.ಬಳಗಾರ ಅವರಿಂದ ವಿನೂತನ ಪ್ರಯೋಗ
ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದ ಮಕ್ಕಳ ಶೈಕ್ಷಣಿಕ ಕಾಳಜಿ : ಎಂ.ಬಿ.ಬಳಗಾರ ಅವರಿಂದ ವಿನೂತನ ಪ್ರಯೋಗ
ಗೋಕಾಕ ಜು 30 : ಮಳೆ ಕಡಿಮೆಯಾದ ಪರಿಣಾಮ ಪ್ರವಾಹ ಸ್ಥಿತಿ ಕಡಿಮೆಯಾಗಿದ್ದು, ನಗರದ 200 ಕ್ಕೂ ಹೆಚ್ಚು ಕುಟುಂಬಗಳು ಇನ್ನು ಕಾಳಜಿ ಕೆಂದ್ರಗಳಲ್ಲಿಯೆ ಆಶ್ರಯ ಪಡೆದಿದ್ದಾರೆ.
ಮಂಗಳವಾರದಂದು ನಗರದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆಶ್ರಯ ಪಡೆದಿರುವ ಮಕ್ಕಳಿಗಾಗಿ ವಿಶೇಷ ತರಗತಿಗಳನ್ನು ಆಯೋಜಿಸಿ ಮಕ್ಕಳಿಗೆ ಪಾಠದ ಜೊತೆಗೆ ಚಟುವಟಿಕೆಯ ಮುಖಾಂತರ ಅಕ್ಷರಭ್ಯಾಸ ಮಾಡಿಸಲಾಯಿತು .
ಈ ಸಂದರ್ಭದಲ್ಲಿ ಮಾತನಾಡಿದ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದ ಉಪ ಪ್ರಾಚಾರ್ಯ ಮಹೆಬೂಬ ಬಳಗಾರ ಪ್ರವಾಹ ಸಂಬಂಧ ಶಾಲೆಗಳಿಗೆ ರಜೆ ಇರುವ ಕಾರಣ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಮಕ್ಕಳ ಸಮಯವನ್ನು ಸದ್ಬಳಕೆ ಮಾಡಿಕೊಂಡು ಅವರಿಗೆ ಆಟದ ಜೊತೆಗೆ, ಚಟುವಟಿಕೆಗಳ ಮುಖಾಂತರ ನಮ್ಮ ಶಿಕ್ಷಕರಿಂದ ವಿಶೇಷ ತರಗತಿಯನ್ನು ನಡೆಸಿ ಎಲ್ಲಾ ಹಂತದ ಮಕ್ಕಳಿಗೆ ಪಾಠ ಬೋಧಿಸಲಾಗುತ್ತಿದ್ದು, ಕಾಳಜಿ ಕೇಂದ್ರದಲ್ಲಿ ಅವರಿಗೆ ಯಾವುದೇ ತೊಂದರೆಯಾಗದಂತೆ ಮುತುವರ್ಜಿ ವಹಿಸಿಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಪನ್ಮೂಲ ಅಧಿಕಾರಿ ಎಂ.ಬಿ.ಪಾಟೀಲ, ಬಿ.ಆರ್.ಸಿ. ವೆಂಕಟಾಪುರ, ಶಿಕ್ಷರುಗಳಾದ ಶ್ರೀಮತಿ ಅತ್ತಾರ, ಶ್ರೀಮತಿ ಗುಮ್ಮತಿ ಅವರು ಮಕ್ಕಳಿಗೆ ಮನೋರಂಜನೆ ಜೊತೆಗೆ ಪಾಠವನ್ನು ಬೋಧಿಸಿದರು.