ಬೈಲಹೊಂಗಲ:ಸಂಪಗಾವಿಯಲ್ಲಿ ನೂತನ ವಿಠ್ಠಲ ರುಕ್ಮೀಣಿ ಮೂರ್ತಿ ಭವ್ಯ ಮೆರವಣಿಗೆ
ಸಂಪಗಾವಿಯಲ್ಲಿ ನೂತನ ವಿಠ್ಠಲ ರುಕ್ಮೀಣಿ ಮೂರ್ತಿ ಭವ್ಯ ಮೆರವಣಿಗೆ
ಬೈಲಹೊಂಗಲ ಅ 21: ಸಂಪಗಾವಿ ಗ್ರಾಮ ಶರಣರ, ಸಂತರ, ಮಹಾನ್ ಪುರಷರು ನೆಲೆಸಿ ಅನುಷ್ಠಾನಗೊಂಡ ಇತಿಹಾಸ ಪ್ರಸಿದ್ಧವಾಗಿದೆ. ಗ್ರಾಮವು ಹಿಂದೂ, ಮುಸ್ಲಿಂ ಸಮುದಾಯಗಳು ಭಾವೈಕ್ಯತೆಯ ಕೇಂದ್ರವಾಗಿದ್ದು ನೂತನ ಮೂರ್ತಿ ಪ್ರತಿಷ್ಠಾಪನೆಯಲ್ಲಿ ಸರ್ವಧರ್ಮೀಯರು ಭಾಗಿಯಾಗಿ ವಿಜೃಂಬನೆಯಿಂದ ಉತ್ಸವ ಮಾಡುತ್ತಿರುವುದು ತುಂಬಾ ಸಂತಸದ ವಿಷಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಾಬಾಸಾಹೇಬ ಪಾಟೀಲ ಹೇಳಿದರು.
ಸಮೀಪದ ಸಂಪಗಾವಿ ಗ್ರಾಮದ ಐತಿಹಾಸಿಕ ಪ್ರಸಿದ್ಧ ವಿಠ್ಠಲ ರುಕ್ಮೀಣಿ ಮಂದಿರದ ಜಿರ್ನೋದ್ಧಾರ ಮತ್ತು ನೂತನ ವಿಠ್ಠಲ ರುಕ್ಮೀಣಿ ಮೂರ್ತಿ ಪ್ರತಿಷ್ಠಾಪಿಸುತ್ತಿರುವ ಹಿನ್ನಲೆಯಲ್ಲಿ ಗ್ರಾಮಕ್ಕೆ ತೆರಳಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ನೂತನ ಮೂರ್ತಿ ಪ್ರತಿಷ್ಠಾಪನೆಯಿಂದ ಗ್ರಾಮದ ಜನತೆಯ ಭಕ್ತಿ-ಭಾವ ಇಮ್ಮುಡಿಗೊಳಿಸಿದೆ, ದೇವರು ಮಳೆ, ಬೆಳೆ ಚನ್ನಾಗಿ ನೀಡಲೆಂದು ಹರಿಸಿದರು. ಗ್ರಾಮದ ಕಲ್ಲಯ್ಯಜ್ಜನ ದೇವಸ್ಥಾನದಿಂದ ಪ್ರಮುಖ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅತ್ಯಂತ ವಿಜೃಂಭನೆಯಿಂದ ಮೆರವಣಿಗೆ ಸಾಗಿತು. ಮೆರವಣಿಗೆಯಲ್ಲಿ ಕನ್ನಡ ಮತ್ತು ಸಾಂಸ್ಕ್ರತಿಕ ಇಲಾಖೆಯ ಗುಂಡಾನಟ್ಟಿಯ ಜನಪದ ಕಲಾವಿದರು, ಡೊಳ್ಳು ಕುಣಿತ, ಕರಡಿಮಜಲು, ಬ್ಯಾಂಡ್ ಮೇಳ, ಹಾಗೂ ಇತರ ಹಲವಾರು ಕಲಾ ತೋಡಗಳು ಭಾಗವಹಿಸಿದ್ದವು. ಬೈಲಹೊಂಗಲ ಬೆಳಗಾವಿ ರಸ್ತೆಯಿಂದ ಸಂಚರಿಸಿ ದೇವಸ್ಥಾನಕ್ಕೆ ತೆರಳಲಾಯಿತು. ಮಹಾಪ್ರಸಾದ ವ್ಯವಸ್ಥೆ ಕೈಗೊಳ್ಳಲಾಗಿತು. ಸಂಪಗಾವಿ-ಕರಡಿಗುದ್ದಿಯ ಕಠಾರಿಪುರಿಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಸಾನಿದ್ಯ ವಹಿಸಿದ್ದರು. ಗ್ರಾ.ಪಂ ಅದ್ಯಕ್ಷ ಬಸವರಾಜ ನೇಸರಗಿ, ಮಹಾಂತೇಶ ನಂದೇನ್ನವರ, ಮಂಜುನಾಥ ಶೀಡ್ಲೆವಗೋಳ, ಬಸವರಾಜ ಪುಟ್ಟಿ, ರುದ್ರಪ್ಪಾ ಬಾರ್ಕಿ, ಮಂಜುನಾಥ ಉಳವಿ, ಈರಪ್ಪ ಚಿಟ್ಟಿ, ಸುಭಾಷ ಚಿಟ್ಟಿ, ಶಿಕ್ಷಕರಾದ ಶ್ರೀಕಾಂತ ಉಳ್ಳಗಡ್ಡಿ ಗ್ರಾಮದ ಹಲವಾರು ಗಣ್ಯಮಾನ್ಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.