RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ತಕ್ಷಣವೇ ಬೆಳೆ ಪರಿಹಾರ ಬಿಡುಗಡೆ ಮಾಡಿ : ಮುಖ್ಯಮಂತ್ರಿಗಳಿಗೆ ಶಾಸಕ ಬಾಲಚಂದ್ರ ಮನವಿ

ಗೋಕಾಕ:ತಕ್ಷಣವೇ ಬೆಳೆ ಪರಿಹಾರ ಬಿಡುಗಡೆ ಮಾಡಿ : ಮುಖ್ಯಮಂತ್ರಿಗಳಿಗೆ ಶಾಸಕ ಬಾಲಚಂದ್ರ ಮನವಿ 

ತಕ್ಷಣವೇ ಬೆಳೆ ಪರಿಹಾರ ಬಿಡುಗಡೆ ಮಾಡಿ : ಮುಖ್ಯಮಂತ್ರಿಗಳಿಗೆ ಶಾಸಕ ಬಾಲಚಂದ್ರ ಮನವಿ

ಗೋಕಾಕ ಅ 5 : ಪ್ರವಾಹದಿಂದ ಸಾಕಷ್ಟು ಹಾನಿಯಾಗಿದ್ದು, ತಕ್ಷಣವೇ ಬೆಳೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದೇನೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಸೋಮವಾರದಂದು ಲೋಳಸೂರ ಸೇತುವೆ ಬಳಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ನೀಡಲು ಬಂದ ಸಂದರ್ಭದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪದೇ ಪದೇ ಪ್ರವಾಹ ಬರುವುದರಿಂದ ಅರಭಾವಿ ಕ್ಷೇತ್ರದಲ್ಲಿ ಸಾಕಷ್ಟು ಗ್ರಾಮಗಳಿಗೆ ಹಾನಿ ಯಾಗುತ್ತಿದ್ದು, ಸರಕಾರ ಒಂದು ಕಮಿಟಿ ನೇಮಿಸಿ ಶಾಶ್ವತವಾಗಿ ಪ್ರವಾಹ ಪೀಡಿತ ಗ್ರಾಮಗಳಿಗೆ ಪುನರ್ವಸತಿ ಕಲ್ಪಿಸಲು ಕ್ರಮಕೈಗೊಳ್ಳಬೇಕು. ಹಿಂದಿನ ಬಿಜೆಪಿ ಸರಕಾರ ಇದ್ದಾಗ ನಮ್ಮ ಕ್ಷೇತ್ರದಲ್ಲಿ 900 ಹೊಸ ಮನೆಗಳನ್ನು ಕಟ್ಟಿಕೊಟ್ಟಿದರು. ನಮ್ಮ ಸರಕಾರ ಇದ್ದಾಗ 5 ಲಕ್ಷ ಮನೆಗಳನ್ನು ಕಟ್ಟಿಕೊಟ್ಟಿದ್ದರು, ಈಗ ಈ ಸರಕಾರ ಎಷ್ಟು ಕಟ್ಟಿಕೊಡುತ್ತದೆ ನೋಡಬೇಕು ಎಂದು ಹೇಳಿದರು

ಕಾಂಗ್ರೆಸ್ ಸರಕಾರದಲ್ಲಿ ಪ್ರವಾಹ ಸಂತ್ರಸ್ತರಿಗೆ ನೀಡಲು ಹಣ ಇಲ್ಲ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಈಗ ಸಿಎಂ ಸಿದ್ದರಾಮಯ್ಯ ಅವರೆ ಬಂದಿದ್ದಾರೆ ಅವರನ್ನೇ ಕೇಳಿ, ನಾನು ಹಣಕಾಸು ಮಂತ್ರಿನೂ ಅಲ್ಲ ,ಹಣಕಾಸು ಇಲಾಖೆಯ ಕಾರ್ಯದರ್ಶಿಯು ಅಲ್ಲ ಎಂದ ಅವರು ಅಭಿವೃದ್ಧಿ ವಿಚಾರದಲ್ಲಿ ಗ್ಯಾರಂಟಿಗಳಿಂದ ಸ್ವಲ್ಪ ಹೊಡೆತ ಬಿದಿದ್ದೆ ಎಂದು ಕಾಂಗ್ರೆಸ್ ಶಾಸಕರೆ ಹೇಳುತ್ತಿದ್ದಾರೆ ಎಂದು ಹೇಳಿದರು.

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾದಯಾತ್ರೆ ನಡೆದಿದೆ ಬಾಲಚಂದ್ರ ಜಾರಕಿಹೊಳಿ ಅವರು ಹೋಗಿಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಅಷ್ಟೇ ಅಲ್ಲ ಬಹಳಷ್ಟು ಶಾಸಕರು ಹೋಗಿಲ್ಲ, ಕೆಲವರು ಪ್ರವಾಹ ಸಂಬಂಧ, ಕೆಲವರು ಅವರ ಕ್ಷೇತ್ರದಲ್ಲಿ ಇರುವ ಕೆಲಸಗಳ ನಿಮಿತ್ತ , ಇನ್ನು ಕೆಲವರು ಪೂರ್ವ ನಿಗದಿತ ಕೆಲಸಗಳು ಇರುವ ಕಾರಣ ಹೋಗಿಲ್ಲ ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ . ನಾಳೆ ನಮ್ಮ ಕ್ಷೇತ್ರದಿಂದ 100 ಜನರು ಪಾದಯಾತ್ರೆಯಲ್ಲಿ ಭಾಗವಹಿಸಲು ತೆರಳುತ್ತಿದ್ದಾರೆ. ಪ್ರವಾಹ ಕಡಿಮೆ ಆದ ಮೇಲೆ ನಾನು ಹೋಗಿ ಪಾದಯಾತ್ರೆ ಭಾಗವಹಿಸುತ್ತೇನೆ ಎಂದು ಹೇಳಿದರು.

Related posts: