ಗೋಕಾಕ:ಅಲೆಮಾರಿಗಳು ಶಿಕ್ಷಣದೊಂದಿಗೆ ಸರಕಾರದ ಸೌಲಭ್ಯಗಳನ್ನು ಪಡೆದುಕೊಂಡು ಮುಖ್ಯವಾಹಿನಿಗೆ ಬರಬೇಕು : ಪಲ್ಲವಿ ಜಿ
ಅಲೆಮಾರಿಗಳು ಶಿಕ್ಷಣದೊಂದಿಗೆ ಸರಕಾರದ ಸೌಲಭ್ಯಗಳನ್ನು ಪಡೆದುಕೊಂಡು ಮುಖ್ಯವಾಹಿನಿಗೆ ಬರಬೇಕು : ಪಲ್ಲವಿ ಜಿ
ಗೋಕಾಕ ಅ 30 : ಅಲೆಮಾರಿಗಳು ಶಿಕ್ಷಣದೊಂದಿಗೆ ಸರಕಾರದ ಸೌಲಭ್ಯಗಳನ್ನು ಪಡೆದುಕೊಂಡು ಮುಖ್ಯವಾಹಿನಿಗೆ ಬರಬೇಕು ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಹೇಳಿದರು.
ಗುರುವಾರದಂದು ನಗರದ ಎ.ಪಿ.ಎಂ.ಸಿ ಬಳಿ ಇರುವ ಅಲೆಮಾರಿ ಜನಾಂಗದ ಗುಡಿಸಲುಗಳಿಗೆ ಬೇಟಿನೀಡಿ ಅವರ ಸ್ಥಿತಿ,ಗತಿ ಅವಲೋಕಿಸಿ ಅಲೆಮಾರಿ ಸಮುದಾಯವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಶಿಕ್ಷಣ ಇಲ್ಲದೆ, ಮೌಢ್ಯದಲ್ಲಿ ಬದುಕುತ್ತಿರುವ ಅಲೆಮಾರಿ ಸಮುದಾಯವನ್ನು ಮುಂದೆ ತರಲು ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅಧಿಕಾರಿಗಳು ಅದನ್ನು ಸಮುದಾಯದ ಫಲಾನುಭವಿಗಳಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನಾಡಬೇಕು ಈಗಾಗಲೇ ಕಳೆದ ಎರೆಡು ವರ್ಷಗಳಲ್ಲಿ ಸರಕಾರದಿಂದ ಬೆಳಗಾವಿ ಜಿಲ್ಲೆಯ ಅಲೆಮಾರಿ ಜನಾಂಗದ ಶೇಯೋಭಿವೃದ್ದಿಗಾಗಿ 6.20 ಕೋಟಿ ರೂ ಬಿಡುಗಡೆಯಾಗಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅದು ಬಳಕೆಯಾಗದ ಹಾಗೆ ಉಳಿದುಕೊಂಡಿದೆ ಶೀಘ್ರದಲ್ಲೇ ಅದನ್ನು ಜಿಲ್ಲೆಯ ಅಲೆಮಾರಿ ಜನಾಂಗದ ಫಲಾನುಭವಿಗಳಿಗೆ ತಲುಪಿಸುವ ಕಾರ್ಯಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಿಳಂಬವಾದರೆ ಅವರ ಮೇಲೆ ಸೂಕ್ತ ಕ್ರಮಕೈಗೊಳ್ಳಲಾಗುವುದಲ್ಲದೆ ಮುಖ್ಯಮಂತ್ರಿಗಳಿಗೂ ದೂರು ಸಲ್ಲಿಸಲಾಗುವುದು ಎಂದು ಹೇಳಿದರು.
ಅಲೆಮಾರಿ ಸಮುದಾಯವನ್ನು ಪ್ರತಿನಿಧಿಸುವ ಸಂಘಟನೆಗಳು ಮುತುವರ್ಜಿ ವಹಿಸಿಕೊಂಡು ಸರಕಾರ ಯೋಜನೆಗಳ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ. ಶಿಕ್ಷಣದಿಂದ ದೂರವಿರುವ ಅಲೆಮಾರಿ ಮಕ್ಕಳನ್ನು ಸಮಿಪದ ಸರಕಾರಿ ಟೆಂಟ್ ಶಾಲೆಗಳಲ್ಲಿ ದಾಖಲಿಸಿಕೊಂಡು ಅವರಿಗೆ ಅಕ್ಷರ ಜ್ಞಾನವನ್ನು ನೀಡುವ ಕಾರ್ಯ ಶಿಕ್ಷಣ ಇಲಾಖೆ ಮಾಡಬೇಕು ಎಂದ ಅವರು ಸಮುದಾಯದ ಅಭಿವೃದ್ಧಿಗಾಗಿ ಸರಕಾರ ಮತ್ತು ನಿಗಮ ಬದ್ದವಾಗಿದ್ದು, ಅಲೆಮಾರಿಗಳು ಇದರ ಸದುಪಯೋಗ ಪಡೆದುಕೊಂಡು ಸಾವಲಂಭಿ ಬದುಕನ್ನು ಬದುಕಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಆನಂದ ಕುಮಾರ್ , ಸಮಾಜ ಕಲ್ಯಾಣ ಅಧಿಕಾರಿ ಅಶೋಕ ಮಲ್ಲಬನ್ನವರ ಸೇರಿದಂತೆ ಇಲಾಖೆಯ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.