ಗೋಕಾಕ:ಭಾರತೀಯ ಪರಂಪರೆಯಲ್ಲಿ ಧಾರ್ಮಿಕ ಆಚರಣೆಗಳಿಗೆ ಹೆಚ್ಚಿನ ಮಹತ್ವವಿದೆ : ಶಾಸಕ ರಮೇಶ್
ಭಾರತೀಯ ಪರಂಪರೆಯಲ್ಲಿ ಧಾರ್ಮಿಕ ಆಚರಣೆಗಳಿಗೆ ಹೆಚ್ಚಿನ ಮಹತ್ವವಿದೆ : ಶಾಸಕ ರಮೇಶ್
ಗೋಕಾಕ ಸೆ, 16 ;- ಭಾರತೀಯ ಪರಂಪರೆಯಲ್ಲಿ ಧಾರ್ಮಿಕ ಆಚರಣೆಗಳಿಗೆ ಹೆಚ್ಚಿನ ಮಹತ್ವವಿದ್ದು, ಹಬ್ಬ ಉತ್ಸವಗಳು ನಮ್ಮ ಸಂಸ್ಕ್ರತಿಯ ಭಾಗವಾಗಿವೆ ಎಂದು ಶಾಸಕ ರಮೇಶ ಜಾರಕಿಹೊಳಿ ಅವರು ಹೇಳಿದರು.
ರವಿವಾರದಂದು ನಗರದ ಮರಾಠಾ ಗಲ್ಲಿಯಲ್ಲಿ ಮರಾಠಾ ಸಮಾಜ ಬಾಂಧವರು ಆಯೋಜಿಸಿದ್ದ ಶಾಸಕ ರಮೇಶ ಜಾರಕಿಹೊಳಿ ಹಾಗೂ ನೂತನ ಅಧ್ಯಕ್ಷ ಪ್ರಕಾಶ ಮುರಾರಿ ಅವರ ಸತ್ಕಾರ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಡುತ್ತಿದ್ದರು.
ದೇವರ ಅನುಗ್ರಹದಿಂದಲೇ ದೇಶ ಸುಖ ಶಾಂತಿಯಿಂದ ಸಮೃದ್ಧವಾಗಿದೆ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವದರಿಂದ ದೇವರ ಅನುಗೃಹದೊಂದಿಗೆ ಪರಸ್ಪರಲ್ಲಿ ಪ್ರೀತಿ ವಿಶ್ವಾಸ ಹೆಚ್ಚುವುದರೊಂದಿಗೆ ಮಾನಸಿಕ ನೆಮ್ಮದಿಯು ದೊರೆಯುತ್ತದೆ. ದೇವರ ಕೃಪೆಯಿಂದ ದೇಶ ಸುಖ ಶಾಂತಿಯಿಂದ ಸಮೃದ್ಧವಾಗಿದೆ. ಇಂದಿನ ಯುವಪೀಳಿಗೆ ಹಿರಿಯರ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ಹೆಚ್ಚು ಪಾಲ್ಗೊಂಡು ಈ ಪರಂಪರೆಯನ್ನು ಮುಂದುವರೆಸುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ ಪ್ರಕಾಶ ಮುರಾರಿ ಅವರನ್ನು ಸಮಾಜದ ವತಿಯಿಂದ ಸತ್ಕರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮರಾಠಾ ಸಮಾಜದ ಅಧ್ಯಕ್ಷ ದಶರಥ ಗುಡ್ಡದಮನಿ, ಡಾ. ಈ.ಆರ್.ಸೂರ್ಯವಂಶಿ, ಜಿತೇಂದ್ರ ಮಾಂಗಳೇಕರ, ವಿಜಯ ಜಾಧವ, ರಾಜು ಪವಾರ, ಶಿವಾಜಿ ಕಲ್ಲೋಳ್ಳಿ, ರಾಮ ಪಾಟೀಲ, ಸುಭಾಷ ಘೋರ್ಪಡೆ, ಸತ್ತೆಪ್ಪ ಸುಭಂಜಿ ಸೇರಿದಂತೆ ಸಮಾಜ ಬಾಂಧವರು ಉಪಸ್ಥಿತರಿದ್ದರು.