RNI NO. KARKAN/2006/27779|Thursday, November 21, 2024
You are here: Home » breaking news » ಗೋಕಾಕ:ವ್ಯಸನಿಗಳನ್ನು ದುಶ್ಚಟಗಳಿಂದ ಮುಕ್ತಗೊಳಿಸಿ : ಸುವರ್ಣ ಹೋಸಮಠ

ಗೋಕಾಕ:ವ್ಯಸನಿಗಳನ್ನು ದುಶ್ಚಟಗಳಿಂದ ಮುಕ್ತಗೊಳಿಸಿ : ಸುವರ್ಣ ಹೋಸಮಠ 

ವ್ಯಸನಿಗಳನ್ನು ದುಶ್ಚಟಗಳಿಂದ ಮುಕ್ತಗೊಳಿಸಿ : ಸುವರ್ಣ ಹೋಸಮಠ

ಗೋಕಾಕ ನ 7 : ವ್ಯಸನಿಗಳನ್ನು ದುಶ್ಚಟಗಳಿಂದ ಮುಕ್ತಗೊಳಿಸಿ ಅವರನ್ನು ಸನ್ಮಾರ್ಗಕ್ಕೆ ತರುವ ಮೂಲಕ ಅವರ ಕುಟುಂಬವನ್ನು ರಕ್ಷಣೆ ಮಾಡುವ ವಿರೇಂದ್ರ ಹೆಗಡೆ ಅವರ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದು ಇಲ್ಲಿನ ಜ್ಞಾನ ಮಂದಿರದ ಧರ್ಮದರ್ಶಿ ಸುವರ್ಣ ಹೋಸಮಠ ಹೇಳಿದರು.
ಬುಧವಾರದಂದು ನಗರದ ಜ್ಞಾನ ಮಂದಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತ ವೇದಿಕೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ, ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ , ನಗರಸಭೆ ಮತ್ತು ಶೌರ್ಯ ವಿಪತ್ತು ನಿರ್ವಾಹಣ ಘಟಕ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ 1882ನೇ ಮಧ್ಯ ವರ್ಜಿನಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುವ ಪೀಳಿಗೆ ದುಶ್ಚಟಗಳಿಂದ ದೂರವಿದ್ದು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ವ್ಯಸನಿಗಳಾಗದೆ ಉದ್ಯೋಗಗಳಲ್ಲಿ ಸಕ್ರಿಯವಾಗಿ ತಮ್ಮ ಬದುಕನ್ನು ರೂಪಿಸಿಕೊಳ್ಳಿ ಯುವ ಶಕ್ತಿಯೇ ದೇಶದ ಆಸ್ತಿಯಾಗಿದ್ದು, ಉತ್ತಮ ನಾಗರಿಕರಾಗಿ ಬಲಿಷ್ಠ ಭಾರತ ನಿರ್ಮಿಸುವಂತೆ ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಪ್ರಕಾಶ್ ಮುರಾರಿ, ಗಣ್ಯರಾದ ಅಶೋಕ ಪೂಜಾರಿ, ಸೋಮಶೇಖರ್ ಮಗದುಮ್ಮ, ನರಸಿಂಹ ಪೂಜಾರಿ, ಸುಭಾಷ್ ಅನಸಿ , ಡಾ.ರವೀಂದ್ರ ಅಂಟಿನ, ಡಾ.ರಮೇಶ ಪಟಗುಂದಿ, ಎಚ್.ಆರ್.ಲವಕುಮಾರ, ತಿಮ್ಮೇಶಿ, ಮಹಾಂತೇಶ ಪೂಜೇರಿ, ಭಾಸ್ಕರ್, ನಾಗಲಾಂಗ ಪೋತೇದಾರ, ನ್ಯಾಯವಾದಿ ಬಿ.ಬಿ.ಬಿರನಗಡ್ಡಿ, ಸುರೇಶ ಇದ್ದರು.

Related posts: