ಗೋಕಾಕ: ಸಮಾಜ ಪರಿವರ್ತನೆ ಆಗಬೇಕಾದರೆ ಪರಿಸರ ಚನ್ನಾಗಿ ಇರಬೇಕು : ಎಚ್ ಆರ್ ಲವಕುಮಾರ
ಸಮಾಜ ಪರಿವರ್ತನೆ ಆಗಬೇಕಾದರೆ ಪರಿಸರ ಚನ್ನಾಗಿ ಇರಬೇಕು : ಎಚ್ ಆರ್ ಲವಕುಮಾರ
ಗೋಕಾಕ ನ 13 : ಪರಿವರ್ತನೆ ಆಗಬೇಕಾದರೆ ಪರಿಸರ ಚನ್ನಾಗಿ ಇರಬೇಕು ಅಂತಹ ಪರಿಸರವನ್ನು ನಿರ್ಮಿಸುವ ಕಾರ್ಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ ಎಂದು ಯೋಜನಾ ನಿರ್ದೇಶಕ ಎಚ್ ಆರ್ ಲವಕುಮಾರ
ಬುಧವಾರದಂದು ನಗರದ ಜ್ಞಾನ ಮಂದಿರದಲ್ಲಿ ಸುಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರ , ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ , ನರಗಸಭೆ ಹಾಗೂ ಶೌರ್ಯ ವಿಪತ್ತು ನಿರ್ವಾಹನ ಘಟಕ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ 1882ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು .
ಜನರ ಕಷ್ಟಗಳಿಗೆ ಸ್ವಂದಿಸುವ ನಿಟ್ಟಿನಲ್ಲಿ ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ಮಾಡುತ್ತಿದ್ದು, ಇದು ಕರ್ನಾಟಕ ರಾಜ್ಯಾದ್ಯಂತ ನಿರಂತರವಾಗಿ ನಡೆಯುತ್ತಿರುತ್ತದೆ. ಧರ್ಮಸ್ಥಳ ವ್ಯಸನ ಮುಕ್ತ ಕೇಂದ್ರದಲ್ಲಿ ಪ್ರತಿ ತಿಂಗಳಲ್ಲಿ 2 ಶಿಬಿರಗಳು ನಡೆಯುತ್ತವೆ. ಜ್ಜಾನದಾಸೋಹ ದಿಂದ ಮಾತ್ರ ಜೀವನ ಪಾವನ ವಾಗಲು ಸಾಧ್ಯ ಎಂಬ ಯೋಚನೆಯಿಂದ ಈ ಯೋಜನೆ ಧರ್ಮಾಧಿಕಾರಿ ವಿರೇಂದ್ರ ಹೆಗಡೆ ಪ್ರಾರಂಭ ಮಾಡಿದ್ದು, ಈ ಯೋಜನೆ ಸ್ವಾಥ್ಯ ಸಮಾಜ ನಿರ್ಮಾಣ ಸಂಕಲ್ಪ ಹೊಂದಿದೆ ಎಂದ ಅವರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹುಟ್ಟಿ ಹಾಕಿ ಅದರ ಮೂಲಕ ಸಮಾಜವನ್ನು ಸೇರಿಸಿಕೊಂಡು ಮಧ್ಯ ವ್ಯಸನದಂತಹ ದುಶ್ಚಟಗಳನ್ನು ಬಿಡಿಸಲು ಶಿಬಿರಗಳನ್ನು ಹಮ್ಮಿಕೊಂಡು ಇದನ್ನು ಪ್ರಾರಂಭಿಸಿದ್ದೇವೆ ಇದರಲ್ಲಿ ಭಾಗವಹಿಸಿ ಹಲವರು ವ್ಯಸನ ಮುಕ್ತರಾಗಿದ್ದಾರೆ.
ಈ ಶಿಬಿರ ನಡೆಯಬೇಕಾದರೆ ಸ್ಥಳೀಯ ಎಲ್ಲಾ ಇಲಾಖೆಗಳು ಸಹಕಾರ ನೀಡುತ್ತವೆ ಹಾಗಾಗಿ ಶಿಬಿರಗಳು ಯಶಸ್ವಿಯಾಗಿ ಸಂಪನ್ನಗೊಳ್ಳಲು ಸಾಧ್ಯ. ಇದರಿಂದ ತಮ್ಮ ಬದುಕು ಬದಲಾಗಬೇಕು. ಮಧ್ಯೆ ವ್ಯಸನಿ ಮುಕ್ತ ಸಮಾಜ ನಿರ್ಮಿಸಲು ನಾವೆಲ್ಲರೂ ಪಣತೊಡಬೇಕು ಇದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮ ದಿವ್ಯ ಸಾನಿಧ್ಯವನ್ನು ಘೋಡಗೇರಿಯ ಶ್ರೀ ಮಲಯ್ಯ ಮಹಾಸ್ವಾಮಿಗಳು ವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮದ್ಯವರ್ಜನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನರಸಿಂಹ ಪೂಜಾರಿ ವಹಿಸಿದ್ದರು.
ವೇದಿಕೆಯಲ್ಲಿ ತಹಶೀಲ್ದಾರ್ ಡಾ. ಮೋಹನ ಭಸ್ಮೆ, ಅಶೋಕ್ ಪೂಜಾರಿ, ಸುವರ್ಣ ಹೋಸಮಠ, ಸೋಮಶೇಖರ್ ಮಗದುಮ್ಮ, ಈಶ್ವರ ಮಮದಾಪೂರ, ರಾಮಚಂದ್ರ ಕಾಕಡೆ, ಶ್ರೀಮತಿ ಶಕುಂತಲಾ ಮುರಾರಿ, ಮಹಾಂತೇಶ ಪೂಜಾರಿ, ತಿಮ್ಮೇಶಿ ಎಂ.ಸಿ., ಭಾಸ್ಕರ್ ಎನ್, ನಾಗೇಂದ್ರ ಉಪಸ್ಥಿತರಿದ್ದರು.