RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಮೂಡಲಗಿಯಲ್ಲಿ ತಾಲೂಕಾ ಮಟ್ಟದ ಕಛೇರಿಗಳ ಆರಂಭಕ್ಕೆ ಒತ್ತು : ಶಾಸಕ ಬಾಲಚಂದ್ರ

ಗೋಕಾಕ:ಮೂಡಲಗಿಯಲ್ಲಿ ತಾಲೂಕಾ ಮಟ್ಟದ ಕಛೇರಿಗಳ ಆರಂಭಕ್ಕೆ ಒತ್ತು : ಶಾಸಕ ಬಾಲಚಂದ್ರ 

ಮೂಡಲಗಿಯಲ್ಲಿ ತಾಲೂಕಾ ಮಟ್ಟದ ಕಛೇರಿಗಳ ಆರಂಭಕ್ಕೆ ಒತ್ತು : ಶಾಸಕ ಬಾಲಚಂದ್ರ

ಗೋಕಾಕ ಅ 25: ಮೂಡಲಗಿ ಹೊಸ ತಾಲೂಕು ಕೇಂದ್ರವಾಗಿ ಘೋಷಣೆಯಾಗಿರುವುದರಿಂದ ತಾಲೂಕಾ ಮಟ್ಟದ ಸರ್ಕಾರಿ ಕಛೇರಿಗಳಿಗೆ ಅಗತ್ಯವಿರುವ ಕಟ್ಟಡಗಳನ್ನು ಗುರುತಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳವಾರ ಸಂಜೆ ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಕರೆಯಲಾಗಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಹೊಸ ತಾಲೂಕಾಗಿ ಪರಿವರ್ತನೆಗೊಂಡಿದ್ದರಿಂದ, ಮೂಡಲಗಿಯಲ್ಲಿ ತಾಲೂಕಾ ಮಟ್ಟದ ಕಛೇರಿಗಳ ಆರಂಭಕ್ಕೆ ಒತ್ತು ನೀಡಲಾಗಿದೆ. ಈ ಸಂಬಂಧ ಪಟ್ಟಣದಲ್ಲಿ ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳನ್ನು ಗುರುತಿಸಿ ಅಲ್ಲಿ ಕಛೇರಿಗಳನ್ನು ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಮೂಡಲಗಿ ಪುರಸಭೆ ಕಟ್ಟಡದಲ್ಲಿ ತಹಶೀಲ್ದಾರ ಕಾರ್ಯಾಲಯ, ಉಪನೋಂದಣಾಧಿಕಾರಿಗಳ ಕಾರ್ಯಾಲಯವನ್ನು ತೆರೆಯಲು ನಿರ್ಧರಿಸಲಾಗಿದೆ. ಉಳಿದಂತೆ ಖಾಸಗಿ ಸ್ವಾಮ್ಯಕ್ಕೆ ಸೇರಿರುವ ಕಟ್ಟಡಗಳಲ್ಲಿ ಇತರೇ ತಾಲೂಕು ಮಟ್ಟದ ಕಛೇರಿಗಳನ್ನು ತಾತ್ಕಾಲಿಕವಾಗಿ ತೆರೆಯುವಂತೆ ಸೂಚನೆ ನೀಡಲಾಗಿದ್ದು, ಜನೇವರಿ 1 ರಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಎಲ್ಲ ಕಛೇರಿಗಳು ಮೂಡಲಗಿಯಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಅವರು ಹೇಳಿದರು.

ಮೂಡಲಗಿಯ ಈರಣ್ಣಾ ಗುಡಿ ಹತ್ತಿರ 3 ಎಕರೆ ಜಮೀನಿನಲ್ಲಿ ಮಿನಿ ವಿಧಾನಸೌಧ ಕಟ್ಟಡವನ್ನು ನಿರ್ಮಿಸಲಾಗುವುದು ಎಂದು ಹೇಳಿದರು.
ಕಳೆದ ಸೋಮವಾರದಂದು ಮೂಡಲಗಿಗೆ ಶಿವಬೋಧರಂಗ ಮಠದ ಶ್ರೀಪಾದಬೋಧ ಸ್ವಾಮೀಜಿಯವರನ್ನು ಭೇಟಿ ಮಾಡಿ ಮೂಡಲಗಿಗೆ ಅಗತ್ಯವಿರುವ ಸರ್ಕಾರಿ ಕಛೇರಿಗಳ ಬಗ್ಗೆ ಚರ್ಚೆ ನಡೆಸಿರುವುದಾಗಿ ಅವರು ತಿಳಿಸಿದರು.

ತಹಶೀಲ್ದಾರ ಜಿ.ಎಸ್.ಮಳಗಿ, ಉಪತಹಶೀಲ್ದಾರ ಲಕ್ಷ್ಮಣ ಭೋವಿ, ಮೂಡಲಗಿ ಪುರಸಭೆ ಉಪಾಧ್ಯಕ್ಷ ರವೀಂದ್ರ ಸೋನವಾಲ್ಕರ, ಮೂಡಲಗಿ ಪುರಸಭೆ ಮುಖ್ಯಾಧಿಕಾರಿ ಬಿ.ಎಸ್.ಗೋರೋಶಿ, ಮುಂತಾದ ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Related posts: