ಗೋಕಾಕ:ರಾಜ್ಯ ಸರಕಾರಿ ನೌಕರರಿಗೆ “ವೇತನ ಭಾಗ್ಯ”ನೀಡುವಂತೆ ಒತ್ತಾಯ : ಮುಖ್ಯಮಂತ್ರಿಗಳಿಗೆ ಮನವಿ
ರಾಜ್ಯ ಸರಕಾರಿ ನೌಕರರಿಗೆ “ವೇತನ ಭಾಗ್ಯ”ನೀಡುವಂತೆ ಒತ್ತಾಯ : ಮುಖ್ಯಮಂತ್ರಿಗಳಿಗೆ ಮನವಿ
ಗೋಕಾಕ ಅ 25: ರಾಜ್ಯ ಸರಕಾರಿ ನೌಕರರಿಗೆ 6ನೇ ವೇತನ ಆಯೋಗ ಜಾರಿಗೊಳಿಸುವಂತೆ ಒತ್ತಾಯಿಸಿ ರಾಜ್ಯ ಸರಕಾರಿ ನೌಕರರ ಸಂಘ ಗೋಕಾಕ ತಾಲೂಕ ಘಟಕದ ಆಶ್ರಯದಲ್ಲಿ ಪ್ರತಿಭಟನೆ ನಡೆಯಿಸಿ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು
ಗುರುವಾರದಂದು ಮುಂಜಾನೆ ತಹಶೀಲ್ದಾರ್ ಕಛೇರಿ ಎದುರು ಸೇರಿದ ಸಂಘದ ಪಧಾಧಿಕಾರಿಗಳು ಕೇಂದ್ರ ಸರ್ಕಾರ ಈಗಾಗಲೇ ಅಲ್ಲಿನ ನೌಕರರಿಗೆ 7ನೇ ವೇತನ ಆಯೋಗ ಜಾರಿಗೊಳಿಸಿದೆ. ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಸರ್ಕಾರದ ಕ್ರಮವನ್ನು ಖಂಡಿಸಿ ರಾಜ್ಯ ಸರಕಾರದ ಇತರ ಯೋಜನೆಗಳಂತೆ ನಮ್ಮಗೂ ವೇತನ ಭಾಗ್ಯ ನೀಡ ಸಹಕರಿಸಬೇಕೆಂದು ಸರಕಾರವನ್ನು ಒತ್ತಾಯಿಸಿ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿ ಅವರಿಗೆ ಮನವಿ ಅರ್ಪಿಸಿದರು
ಈ ಸಂದರ್ಭದಲ್ಲಿ ನೌಕರರ ಸಂಘದ ಉಪಾಧ್ಯಕ್ಷ ಎಂ.ಜಿ ಮಾವಿನಗಿಡದ , ಕಾರ್ಯದರ್ಶಿ ಎಂ.ಎನ.ಹಸರಂಗಿ , ಮೂಡಲಗಿ ವಲಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ವಾಯ್. ಸಣ್ಣಕ್ಕಿ , ಗೋಕಾಕ ವಲಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಶ್ರೀಮತಿ ಎಸಾ.ಎಸ್.ನೇಗಳಿ , ಆರ್.ಎಂ.ಮಹಾನಿಂಗಪುರ , ಸತೀಶ ಹೇರೂರ , ಎಸ.ಎಸ.ಮಾಳಗಿ , ಎಸ.ಎ.ನಾಯಿಕ ,ಕೊಪ್ಪದ , ಎಸ.ಜಿ.ದೊಡ್ಡಮನಿ , ಕರ್ನಾಟಕ ರಾಜ್ಯ ನೌಕರ ಸಂಘದ ಎಲ್ಲ ಸದಸ್ಯರು , ಮಿನಿ ವಿಧಾನಸಭಾದಲ್ಲಿರು ಎಲ್ಲ ಇಲಾಖೆಗಳ ಸರ್ವ ನೌಕರರು ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು