ಗೋಕಾಕ:ಗುಂಪು ಕಲಾವಿದರ ಬಳಗದ ವತಿಯಿಂದ ಹಚ್ಚೇವು ಕನ್ನಡದ ದೀಪ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ
ಗುಂಪು ಕಲಾವಿದರ ಬಳಗದ ವತಿಯಿಂದ ಹಚ್ಚೇವು ಕನ್ನಡದ ದೀಪ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ
ಗೋಕಾಕ ನ 27 : ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಇಲ್ಲಿನ ಗುಂಪು ಕಲಾವಿದರ ಬಳಗದವರು ಮಂಗಳವಾರದಂದು ನಗರದ ಬಸವ ನಗರದಲ್ಲಿರುವ ಸಂಗೀತಾಲಯದಲ್ಲಿ ಹಮ್ಮಿಕೊಂಡ 196ನೇ ಮಾಸಿಕ ಕಾರ್ಯಕ್ರಮ ” ಹಚ್ಚೇವು ಕನ್ನಡದ ದೀಪ” ಕಾರ್ಯಕ್ರಮವನ್ನು ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ದೀಪ ಬೆಳಗಿಸುವ ಮೂಲಕ ಮಂಗಳವಾರದಂದು ನೀಡಿದರು.
ಇದೇ ಸಂದರ್ಭದಲ್ಲಿ ಸಂಗೀತ ಕಲಾವಿದರು ಕನ್ನಡಪರ ಗೀತೆಗಳನ್ನು ಹಾಡಿ ಮನರಂಜಿಸಿದರು.
ಈ ಸಂದರ್ಭದಲ್ಲಿ ಹಿರಿಯ ಕಲಾವಿದ ಜಿ.ಕೆ.ಕಾಡೇಶಕುಮಾರ , ಡಾ ಸುಶ್ರೂತ ಕಡಲಗಿಕರ, ಬಸವರಾಜ ಮಠಪತಿ, ಶಂಕರ ಮಠಪತಿ, ಶಿಲ್ಪಾ ಹಳದಿಪುರ, ಪ್ರತೀಕ್ಷಾ ತಳವಾರ, ಶಿವಾಣಿ ಹಿರೇಮಠ, ನಿತ್ಯಶ್ರೀ ಹಿರೇಮಠ, ಜಾಗೃತಿ ಹಡಗಿನಾಳ, ಗಾಯತ್ರಿ ಪಾಟೀಲ,ಸಾನ್ವಿ ಹಳದಿಪುರ, ಸಮರ್ಥ ಹುಳ್ಳಿ ಉಪಸ್ಥಿತರಿದ್ದರು