RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಗೋಕಾಕ ತಾಲೂಕಿನಲ್ಲಿ ನಕಲಿ ವೈದ್ಯರ ಹಾವಳಿ

ಗೋಕಾಕ:ಗೋಕಾಕ ತಾಲೂಕಿನಲ್ಲಿ ನಕಲಿ ವೈದ್ಯರ ಹಾವಳಿ 

ಗೋಕಾಕ ತಾಲೂಕಿನಲ್ಲಿ ನಕಲಿ ವೈದ್ಯರ ಹಾವಳಿ
ನಮ್ಮ ಬೆಳಗಾವಿ ಇ -ವಾರ್ತೆ
ಬೆಳಗಾವಿ ಜಿಲ್ಲೆಯಾದ್ಯಂತ ನಕಲಿ ವೈದ್ಯರ ಹಾವಳಿ ಹೆಚ್ಚುತ್ತಿದ್ದು ಇದರಿಂದ ಅನೇಕ ರೋಗಿಗಳ ಸಾವಿಗೂ ಕೂಡ ಕಾರಣರಾಗುತ್ತಿದ್ದಾರೆ ಇದೀಗ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಸಾವಳಗಿ ನಂದಗಾವ ಗ್ರಾಮದಲ್ಲಿ ನಕಲಿ ವೈದ್ಯರ ಹಾವಳಿ ಶಬ್ದ ಮಾಡುತ್ತಿದ್ದು, ಸಾವಳಗಿ ಗ್ರಾಮದಲ್ಲಿ ಚಿಕಿತ್ಸೆ ಕೊಡುವ ನಕಲಿ ವೈದ್ಯರ ಮೇಲೆ ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ಎಸ್.ಕೊಪ್ಪದ ದಾಳಿ ಮಾಡಿ ಅವರನ್ನು ಜೈಲಿಗೆ ಅಟ್ಟುವ ಕಾರ್ಯಮಾಡಬೇಕಾಗಿದೆ.

ಹೌದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಗೋಕಾಕ ತಾಲೂಕಿನಲ್ಲಿ ಬಿಡು ಬಿಟ್ಟಿರುವ ನಕಲಿ ವೈದ್ಯರ ಬಗ್ಗೆ ಸಾಕಷ್ಟು ದೂರು ಬಂದರು ಸಹ ಆರೋಗ್ಯ ಇಲಾಖೆ ದಾಳಿ ಮಾಡಲು ಹಿಂದೆಟ್ಟು ಹಾಕುತ್ತಿದೆ.
ಬರುವ ಸೋಮವಾರದಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ನಮ್ಮ ಬೆಳಗಾವಿ ವಾರ್ತೆ ವತಿಯಿಂದ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿ ಅವರ ಮೇಲೆ ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಗುವುದು. ಆರೋಗ್ಯ ಇಲಾಖೆಯ ಅಧಿಕಾರಿಗಳು ಗೋಕಾಕ ತಾಲೂಕಿನಲ್ಲಿ ಹೆಚ್ಚುತ್ತಿರುವ ನಕಲಿ ವೈದ್ಯರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಕಳೆದ ವರ್ಷ ನಕಲಿ ವೈದ್ಯರ ಬಗ್ಗೆ ದೂರು ಬಂದ ಹಿನ್ನೆಲೆ ಖಚಿತ ಮಾಹಿತಿಯ ಮೇರೆಗೆ ಮೂಡಲಗಿ ತಾಲೂಕಿನಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ಕ್ಲಿನಿಕ್ ಗಳ ಮೇಲೆ ಆರೋಗ್ಯ ಅಧಿಕಾರಿಗಳು ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ ಅವರೆಲ್ಲರೂ ನಕಲಿ ವೈದ್ಯರು ಎಂದು ದಾಳಿಯ ವೇಳೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿದುಬಂದಿತ್ತು. ಆ ಸಂದರ್ಭದಲ್ಲಿ ಅಧಿಕಾರಿಗಳು ಒಟ್ಟು ನಾಲ್ಕು ಆಸ್ಪತ್ರೆಗಳನ್ನು ಸೀಜ್​ ಮಾಡಿದ್ದರು. ಈಗಲೂ ಸಹ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಾವಳಗಿ ಗ್ರಾಮದಲ್ಲಿ ನಕಲಿ ವೈದ್ಯರ ಮೇಲೆ ದಾಳಿ ನಡೆಸಿ ಅವರ ಆಸ್ಪತ್ರೆಗಳನ್ನು ಸೀಜ್ ಮಾಡಿ ಅವರನ್ನು ಜೈಲಿಗೆ ಅಟ್ಟಬೇಕಾಗಿದೆ. ಮುಂದೆ ಅವರು ಏನು ಮಾಡುತ್ತಾರೆ ಕಾಯ್ದು ನೋಡಬೇಕಷ್ಟೆ.

Related posts: