ಗೋಕಾಕ:ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನ : ಡಾ: ಆರ್.ಎಸ್.ಬೆಣಚಿನಮರಡಿ
ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನ : ಡಾ: ಆರ್.ಎಸ್.ಬೆಣಚಿನಮರಡಿ
ಗೋಕಾಕ ಅ 27 : ನೇತ್ರದಾನ, ರಕ್ತದಾನ ಹಾಗೂ ದೇಹದಾನ ಇವು ಎಲ್ಲ ದಾನಗಳಲ್ಲಿ ಶ್ರೇಷ್ಠವಾಗಿವೆ. ಮಣ್ಣಲ್ಲಿ ಮಣ್ಣಾಗಿ ಹೋಗುವ ದೇಹದ ಅಂಗಾಗಳನ್ನು ದಾನ ಮಾಡುವುದರಿಂದ ಮತ್ತೊಂದು ಜೀವಿಗೆ ಅನೂಕೂಲವಾಗುತ್ತದೆ ಎಂದು ಗೋಕಾಕ ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ: ಆರ್.ಎಸ್.ಬೆಣಚಿನಮರಡಿ ನುಡಿದರು.
ಕಲ್ಲೋಳಿಯ ಪಟ್ಟಣ ಪಂಚಾಯ್ತಿ, ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕ, ರೆಡ್ ಕ್ರಾಸ್, ರೆಡ್ ರಿಬ್ಬನ್ ಕ್ಲಬ್, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸ್ಥಳಿಯ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾದ ಬೆಳಗಾವಿ ಬಿಮ್ಸ್ ರಕ್ತ ಭಂಡಾರದ ವೈದ್ಯಾಧಿಕಾರಿಗಳಾದ ಡಾ: ಸಿ.ವ್ಹಿ. ಹೊಸಪೇಟಿ ಮಾತನಾಡಿ, ರಕ್ತದಾನ ಮಾಡುವುದರಿಂದ ಇನ್ನೋಬ್ಬ ರೋಗಿಗೆ ಅನುಕೂಲವಾಗುವುದರ ಜೊತೆಗೆ ದಾನಿಗೂ ಅನೂಕೂಲವಾಗುತ್ತದೆ. ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಾಗಬಹುದು ಎಂದರು.
ಪಟ್ಟಣ ಪಂಚಾಯ್ತಿಯ ಅಧ್ಯಕ್ಷರಾದ ಶ್ರೀಮತಿ ಬ. ಕುರಬೇಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳಾದ ಡಾ: ರಾಮಚಂದ್ರ ಹೊರಟ್ಟಿ, ಡಾ: ಲಕ್ಷ್ಮಣ ಖವಟಕೊಪ್ಪ, ಪ.ಪಂ. ಸದಸ್ಯರಾದ ವೀರಣಗೌಡ ಪಾಟೀಲ, ಬಸಪ್ಪ ಯಾದಗೂಡ, ಶಂಕರ ಮಕ್ಕಳಗೇರಿ, ಮಲ್ಲಪ್ಪ ಹೆಬ್ಬಾಳ, ರುಕ್ಮವ್ವ ನಾವಿ, ರಮೇಶ ಗಾಣಿಗೇರ, ವಕೀಲರಾದ ಮಲ್ಲಪ್ಪ ಕಡಾಡಿ, ಗ್ರಾಮಲೇಕ್ಕಾಧಿಕಾರಿ ಎಮ್.ಎ.ಹಂಚನಾಳ, ರೆಡ್ ಕ್ರಾಸ್ ಕಾರ್ಯದರ್ಶಿ ಎಂ.ಬಿ.ಕುಲಮೂರ, ಆಶಾ ಕಾರ್ಯಕರ್ತೆಯರು, ಕಾಲೇಜಿನ ಎನ್.ಎಸ್.ಎಸ್. ಸ್ವಯಂ ಸೇವಕರು ಹಾಗೂ ಪಟ್ಟಣ ಪಂಚಾಯ್ತಿ ಸಿಬ್ಬಂಧಿ ವರ್ಗದವರು ಪಾಲ್ಗೊಂಡಿದ್ದರು.
ಒಟ್ಟು 111 ಜನ ರಕ್ತದಾನ ಮಾಡಿದರು.
ಶ್ರೀ ಬಸಗೌಡ ಈರವ್ವಗೋಳ ನಿರೂಪಸಿದರು, ಮುಖ್ಯಾಧಿಕಾರಿ ಅರುಣಕುಮಾರ ಸ್ವಾಗತಿಸಿದರು. ಶ್ರೀ ಆರ್.ಜಿ.ಬಸ್ಸಾಪೂರ ಪ್ರಾಸ್ತಾವಿಕ ಮಾತನಾಡಿದರು, ಶ್ರೀಮತಿ ದೀಪಾ ಪತ್ತಾರ ಪ್ರಾರ್ಥಿಸಿದರು, ಎನ್.ಎಸ್.ಎಸ್. ಅಧಿಕಾರಿ ಶಂಕರ ನಿಂಗನೂರ ವಂದಿಸಿದರು.