RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ತಮ್ಮಲ್ಲಿರುವ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಬೇಕು : ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ:ತಮ್ಮಲ್ಲಿರುವ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಬೇಕು : ಶಾಸಕ ಬಾಲಚಂದ್ರ ಜಾರಕಿಹೊಳಿ 

ತಮ್ಮಲ್ಲಿರುವ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಬೇಕು : ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ ಅ 28: ತಮ್ಮಲ್ಲಿರುವ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಬೇಕು. ಇದರಿಂದ ಅಭಿವೃದ್ಧಿಯ ಜೊತೆಗೆ ಸಂಘಟನೆಯು ಹೆಚ್ಚು ಬಲವರ್ಧನೆಯಾಗುತ್ತದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮುಖಂಡರಿಗೆ ಸಲಹೆ ಮಾಡಿದರು.

ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದ ಆವರಣದಲ್ಲಿ ಶುಕ್ರವಾರ ರಾತ್ರಿ ನಡೆದ ಮೂಡಲಗಿ ನಗರದ ಮುಖಂಡರ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಸಂಘಟನೆಗೆ ಹೊಡೆತ ಬೀಳುತ್ತದೆ. ನಿಮ್ಮಲ್ಲಿರುವ ಒಡಕಿನ ಲಾಭವನ್ನು ವಿರೋಧಿಗಳು ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.

ಮೂಡಲಗಿ ತಾಲೂಕು ಹೋರಾಟದಲ್ಲಿ ಭಾಗಿಯಾದ ಪ್ರಾಮಾಣಿಕ ಹೋರಾಟಗಾರರನ್ನು ಗೌರವಿಸುತ್ತೇನೆ. ಕೆಲವರು ಹೋರಾಟದ ನೆಪದಲ್ಲಿ ರಾಜಕೀಯ ಮಾಡಿದ್ದಾರೆ. ಕೆಲವರು ಅಸಂವಿಧಾನಿಕ ಪದಗಳನ್ನು ಬಳಕೆ ಮಾಡಿದ್ದಾರೆ. ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ಮೊದಲಿನಿಂದಲೂ ಸೌಮ್ಯ ಸ್ವಭಾವದಿಂದ ಬಂದವನು ನಾನು. ಯಾರ ಮನಸ್ಸನ್ನು ನೋಯಿಸುವ ವ್ಯಕ್ತಿತ್ವ ನನ್ನದಲ್ಲ. ಮನಸ್ಸಿಗೆ ಬಂದಂತಹ ಶಬ್ಧಗಳನ್ನು ಬಳಸಿದ್ದರೂ ಎಲ್ಲವನ್ನು ಸಹಿಸಿಕೊಂಡು ಬಂದಿದ್ದೇನೆ. ಸಹನೆಗೂ ಒಂದು ಮಿತಿ ಇದೆ. ಇಷ್ಟಾಗಿಯೂ ನಾನು ಸುಮ್ಮನಿದ್ದೇನೆ ಎಂದರೇ ಅದು ನನ್ನ ವೀಕ್ನೆಸ್ ಅಲ್ಲ. ಕಾಲ ಕೂಡಿ ಬಂದಾಗ ಎಲ್ಲದಕ್ಕೂ ಉತ್ತರ ನೀಡುತ್ತೇನೆಂದು ಹೇಳಿದ ಅವರು, ತಾಲೂಕು ಹೋರಾಟದ ಸಂದರ್ಭದಲ್ಲಿ ನನ್ನ ವಿರುದ್ಧ ಮಾತನಾಡಿದವರನ್ನು ನಮ್ಮ ಸಂಘಟನೆಯಲ್ಲಿ ಎಂದಿಗೂ ಕರೆದುಕೊಳ್ಳುವುದಿಲ್ಲ. ಅಂತಹ ವ್ಯಕ್ತಿಗಳ ಬಗ್ಗೆ ಯಾರೂ ಶಿಫಾರಸ್ಸು ಮಾಡಬೇಡಿ ಎಂದು ಮುಖಂಡರಿಗೆ ತಾಕೀತು ಮಾಡಿದರು.

ನ. 18ಕ್ಕೆ ಬಿಜೆಪಿ ಪರಿವರ್ತನಾ ಯಾತ್ರೆ :

ನವಕರ್ನಾಟಕ ಪರಿವರ್ತನಾ ಯಾತ್ರೆಯು ನ.18 ರಂದು ನಿಗಧಿಯಾಗಿದೆ. ಅರಭಾವಿ ಮತಕ್ಷೇತ್ರದಲ್ಲಿ ಬಹು ಅದ್ಧೂರಿಯಾಗಿ ಪರಿವರ್ತನಾ ಯಾತ್ರೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಪಕ್ಷದ ಹಲವು ನಾಯಕರು ಇದರಲ್ಲಿ ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮವನ್ನು ಯಾವ ಸ್ಥಳದಲ್ಲಿ ನಡೆಸಬೇಕೆಂಬುದನ್ನು ವಾರದೊಳಗೆ ಎಲ್ಲ ಮುಖಂಡರ ಅಭಿಪ್ರಾಯ ಪಡೆದು ಕಾರ್ಯಕ್ರಮದ ಸ್ಥಳವನ್ನು ನಿಗದಿ ಮಾಡಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಮೂಡಲಗಿ ಪುರಸಭೆ ಉಪಾಧ್ಯಕ್ಷ ಆರ್.ಪಿ.ಸೋನವಾಲ್ಕರ, ವೀರಣ್ಣಾ ಹೊಸೂರ, ಎಂ.ಎಚ್.ಸೋನವಾಲ್ಕರ, ಡಿ.ಬಿ.ಪಾಟೀಲ, ಜಿ.ಟಿ. ಸೋನವಾಲ್ಕರ, ಬಿ.ಎಚ್.ಸೋನವಾಲ್ಕರ, ರವಿ ಸಣ್ಣಕ್ಕಿ, ಅಜೀಜ ಡಾಂಗೆ, ಅಪ್ಪಾಸಾಹೇಬ ಹೊಸಕೋಟಿ, ಬಸವಪ್ರಭು ನಿಡಗುಂದಿ, ಲಾಲಸಾಬ ಸಿದ್ಧಾಪೂರ, ಮಲೀಕ ಹುಣಶ್ಯಾಳ, ಜಯಪ್ಪ ಪಾಟೀಲ, ಸಂತೋಷ ಸೋನವಾಲ್ಕರ, ಮರೆಪ್ಪ ಮರೆಪ್ಪಗೋಳ, ಅನ್ವರ ನದಾಫ, ಶಿವು ಚಂಡಕಿ, ಇರ್ಷಾದ ಫಿರಜಾದೆ, ಡಾ.ಎಸ್.ಎಸ್.ಪಾಟೀಲ, ರಾಮಣ್ಣಾ ಹಂದಿಗುಂದ, ಈರಣ್ಣಾ ಬನ್ನೂರ, ಪ್ರಕಾಶ ಈರಪ್ಪನವರ, ಮಲ್ಲು ಢವಳೇಶ್ವರ, ಹುಸೇನಸಾಬ ಶೇಖ, ರಮೇಶ ಸಣ್ಣಕ್ಕಿ, ರಾಜು ನಾಶಿ, ರಾಚಪ್ಪ ಬೆಳಕೂಡ, ಸುನೀಲ ಸತರಡ್ಡಿ ಮುಂತಾದವರು ಉಪಸ್ಥಿತರಿದ್ದರು.

Related posts: