RNI NO. KARKAN/2006/27779|Thursday, November 7, 2024
You are here: Home » breaking news » ಬೆಳಗಾವಿ:ಹೋಟಲ್ ಮಾಲಿಕನಿಂದ ಪೊಲೀಸರ ಮೇಲೆ ಹಲ್ಲೆ : ಖಾನಾಪುರ ಪಟ್ಟಣದಲ್ಲಿ ಘಟನೆ

ಬೆಳಗಾವಿ:ಹೋಟಲ್ ಮಾಲಿಕನಿಂದ ಪೊಲೀಸರ ಮೇಲೆ ಹಲ್ಲೆ : ಖಾನಾಪುರ ಪಟ್ಟಣದಲ್ಲಿ ಘಟನೆ 

ಹೋಟಲ್ ಮಾಲಿಕನಿಂದ ಪೊಲೀಸರ ಮೇಲೆ ಹಲ್ಲೆ : ಖಾನಾಪುರ ಪಟ್ಟಣದಲ್ಲಿ ಘಟನೆ

ಬೆಳಗಾವಿ ಆ 30: ಹೊಟೇಲನಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಬಂದ ಹಿನ್ನಲೆಯಲ್ಲಿ ತಪಾಸಣೆಗೆ ತೆರಳಿದ್ದ ಪೊಲೀಸರ ಮೇಲೆ ಹೋಟೆಲ್ ಮಾಲಿಕ ಹಲ್ಲೆ ನಡೆಸಿರುವ ಆರೋಪ ಪ್ರಕರಣ ಖಾನಾಪುರ ಪಟ್ಟಣದಲ್ಲಿ ತಡವಾಗಿ ಬೆಳಕಿಗೆ ಬಂದಿದೆ

ಖಾನಾಪುರದ ಶಾಂತಿಸಾಗರ ಹೋಟೆಲ್‌ ತಪಾಸಣೆ ವೇಳೆ ಮಾಲೀಕ ಶರತ್‌ ಶೆಟ್ಟಿ ಎಂಬಾತ ಪೊಲೀಸರ ಮೇಲೆ ಹಲ್ಲೆ ನಡೆಸಿರುವುದು ಬಳಿಕ, ಪೊಲೀಸರು ಹೋಟೆಲ್‌ ಸಿಬ್ಬಂದಿಯನ್ನು ಥಳಿಸಿದ್ದಾರೆ ಎನ್ನಲಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ಅಕ್ಟೋಬರ್ 21 ರ ಮಧ್ಯರಾತ್ರಿ ನಡೆದ ಘಟನೆ‌ ನಡೆದಿದ್ದು, ಶರತ್‌ ಶೆಟ್ಟಿ ವಿರುದ್ಧ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ವಿರುದ್ಧವೂ ಕೂಡ ಶರತ್‌ಶೆಟ್ಟಿ ಹಲ್ಲೆ ಪ್ರಕರಣ ದಾಖಲಿಸಿದ್ದಾರೆ. 

ಮಲಗಿದ್ದ ಸಿಬ್ಬಂದಿಯನ್ನು ಥಳಿಸಿ ಹಲ್ಲೆ ಮಾಡಲಾಗಿದೆ ಎಂಬ ಆರೋಪವನ್ನು ಖಾನಾಪುರ ಪೊಲೀಸರು ತಳ್ಳಿಹಾಕಿದ್ದಾರೆ.

ಇನ್ನು, ಬಂಧಿತ ಶರತ್‌ ಶೆಟ್ಟಿಯನ್ನು ಹಿಂಡಲಗಾ ಜೈಲಿನಲ್ಲಿರಸಲಾಗಿದೆ. ಪೊಲೀಸರ ವಿರುದ್ಧವೂ ಪ್ರಕರಣ ದಾಖಲಾಗಿರುವುದರಿಂದ ಬೈಲಹೊಂಗಲ ಡಿ.ವೈ.ಎಸ್.ಪಿ ಕಲ್ಯಾಣ ಶೆಟ್ಟಿ ನೇತೃತ್ವದಲ್ಲಿ ತನಿಖೆಗೆ ಬೆಳಗಾವಿ ಎಸ್.ಪಿ. ರವಿಕಾಂತೇಗೌಡ ಆದೇಶಿಸಿದ್ದಾರೆ

Related posts: