RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ತಂತ್ರಜ್ಞಾನದ ಭರದಲ್ಲಿ ಸಿಲುಕಿ ಕನ್ನಡ ಭಾಷೆ ಸೊರಗುತ್ತಿದೆ : ಬಸವರಾಜ ಖಾನಪ್ಪನವರ

ಗೋಕಾಕ:ತಂತ್ರಜ್ಞಾನದ ಭರದಲ್ಲಿ ಸಿಲುಕಿ ಕನ್ನಡ ಭಾಷೆ ಸೊರಗುತ್ತಿದೆ : ಬಸವರಾಜ ಖಾನಪ್ಪನವರ 

ತಂತ್ರಜ್ಞಾನದ ಭರದಲ್ಲಿ ಸಿಲುಕಿ ಕನ್ನಡ ಭಾಷೆ ಸೊರಗುತ್ತಿದೆ : ಬಸವರಾಜ ಖಾನಪ್ಪನವರ

 

ಗೋಕಾಕ ನ 1: ಇಂದಿನ ತಂತ್ರಜ್ಞಾನದ ಯುಗದ ಭರಕ್ಕೆ ಸಿಲುಕಿ ಕನ್ನಡ ಭಾಷೆ ಸೊರಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು

ಅವರು ಬುಧವಾರದಂದು 62ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲುಕು ಘಟಕ ನಗರದ ಉಪ ಕಾರಾಗೃಹದಲ್ಲಿ ಹಮ್ಮಿಕೊಂಡಿದ್ದ ವಿಚಾರಣಾಧೀನ ಕೈದಿಗಳೊಂದಿಗೆ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು

ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತು ದಶಕಗಳು ಕಳೆದರು ಸಹ ಕನ್ನಡ ಭಾಷೆಗೆ ಸಿಗಬೇಕಾದ ಸೂಕ್ತ ಸ್ಥಾನಮಾನ ದೊರೆಯುತ್ತಿಲ್ಲದಿರುವುದು ನಮ್ಮ ದುರ್ದೈವ ಕನ್ನಡಪರ ಸಂಘಟನೆಗಳು ಎಚ್ಚೆತ್ತುಕೊಂಡು ಇಂದು ಕನ್ನಡ ಭಾಷೆಗೆ ಸಿಗಬೇಕಾದ ಸೂಕ್ತ ಸ್ಥಾನಮಾನ ದೊರೆಕಿಸಿಕೊಡಬೇಕಾಗಿದೆ ಆ ದೀಸೆಯಲ್ಲಿ ನಾವೆಲ್ಲ ಮುಂದಾಗಬೇಕಾಗಿದೆ

ಕನ್ನಡ ಭಾಷೆಯನ್ನು ಬದುಕಿನ ಭಾಷೆಯನ್ನಾಗಿ ಬೆಳಸುವ ಮಹತ್ತರ ಜವಾಬ್ದಾರಿ ಪ್ರತಿಯೋಬ್ಬ ಕನ್ನಡಿಗರ ಮೇಲಿದೆ , ಯುವಕರಲ್ಲಿ ಕನ್ನಡ ಭಾಷೆಯ ಅಭಿಮಾನ ಮುಡಿಸುವ ನೀಟ್ಟಿನಲ್ಲಿ ಕನ್ನಡದ ಕಾರ್ಯಗಳು ನಿರಂತರವಾಗಿ ನಡೆಯಬೇಕಾಗಿದೆ ಅಭಿಮಾನ ಶೂನ್ಯವಾಗಿರದೆ ಇಂದು ನಾವು ಅಭಿಮಾನದಿಂದ ಭಾಷೆಯನ್ನು ಬೆಳೆಸಲು ಕಂಕಣಬದ್ದರಾಗಬೇಕಾಗಿದೆ ಎಂದು ಖಾನಪ್ಪನವರ ಹೇಳಿದರು

ಬಸವಯೋಗಿ ಮಂಟಪ ಬಳೋಬಾಳದ ಸಂಗನಬಸವ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆರ್ಶಿವಚನ ನೀಡಿದರು

ಉಪನ್ಯಾಸಕರಾದ ಪ್ರೋ.ರಾಜು ಕಂಬಾರ , ಎಸ್.ಎಂ.ಪೀರಜಾದೆ ಅವರು ಕನ್ನಡ ಭಾಷೆಯು ಬೆಳೆದು ಬಂದ ಇತಿಹಾಸವನ್ನು ವಿವರಿಸಿದರು

ಉಪ ಕಾರಾಗೃಹದ ಮುಖ್ಯ ವೀಕ್ಷಕ ಶ್ರೀ ಶಕೀಲ ಜಕಾತಿ ಪ್ರಾಸ್ತಾವಿಕವಾಗಿ ಮಾತನಾಡಿದರು

ವೇದಿಕೆ ಮೇಲೆ ಉಪ ಕಾರಾಗೃಹದ ಅಧೀಕ್ಷರಾದ ಶಿವಾನಂದ ಶಿವಾಪುರ , ಗೋಕಾಕ ವಲಯ ಅರಣ್ಯಾಧಿಕಾರಿ ಕೆ.ಎನ್.ವಣ್ಣೂರ , ತೋಟಗಾರಿಕೆ ಅಧಿಕಾರಿ ಜನ್ಮಟ್ಟಿ , ವನಪಾಲಕರಾದ ಶ್ರೀ ಎಚ.ಎಸ್.ಇಂಗಳಗಿ ಉಪಸ್ಥಿತರಿದ್ದರು

ಈ ಸಂದರ್ಭದಲ್ಲಿ ಕರವೇ ಕಾರ್ಯದರ್ಶಿ ಸಾದಿಕ ಹಲ್ಯಾಳ , ದೀಪಕ ಹಂಜಿ , ಹನೀಪಸಾಬ ಸನದಿ, ಮುಗಟು ಪೈಲವಾನ, ಕೃಷ್ಣ ಖಾನಪ್ಪನವರ , ಮಹಾದೇವ ಮಕ್ಕಳಗೇರಿ , ನಿಜಾಮ ನಧಾಪ, ಕೆಂಪಣ್ಣ ಕಡಕೋಳ, ಬಸವರಾಜ ಗಾಡಿವಡ್ಡರ, ಮಲ್ಲು ಸಂಪಗಾರ , ಲಕ್ಕಪ್ಪಾ ನಂದಿ , ರಾಮಣ್ಣ ಸನಲಗ್ಮನ್ನವರ, ರಮೇಶ ಕಮತಿ , ಶಂಕರ ಹುಲಿಕಟ್ಟಿ , ಅಬ್ಬಾಸ ದೇಸಾಯಿ , ನಿಯಾಜ ಪಟೇಲ , ಮಲ್ಲಪ್ಪ ತೆಲೆಪ್ಪಗೋಳ , ರಮೇಶ ಖಾನಪ್ಪನವರ, ಫಕಿರಪ್ಪ ಗಣಾಚಾರಿ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು

ನಂತರ ಉಪಕಾರಗೃಹದ ಎಲ್ಲ ವಿಚಾರಣಾಧೀನ ಕೈದಿಗಳಿಗೆ ಕರವೇ ವತಿಯಿಂದ ಸಿಹಿ ಹಂಚಲಾಯಿತು

ಕಾರ್ಯಕ್ರಮವನ್ನು ಕಾರಾಗೃಹದ ಮುಖ್ಯ ವೀಕ್ಷಕ ಶಕೀಲ ಜಕಾತಿ ನಿರೂಪಿಸಿ ವಂದಿಸಿದರು

ಕಾರ್ಯಕ್ರಮದ ಮೊದಲಿಗೆ ಗೋಕಾಕ ನಾಡಿನ ಹಿರಿಯ ಸಾಹಿತಿ ಬಾಳೇಶ ಲಕ್ಷಟ್ಟಿ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾರೈಸಿ ಒಂದು ನಿಮಿಷ ಮೌನಾಚರಣೆ ಮಾಡಿ ಗೌರವ ಸಲ್ಲಿಸಲಾಯಿತು

 

ವಿಚಾರಣಾಧೀನ ಕೈದಿಗಳಿಗೆ ಸಹಿ ಹಂಚುತ್ತಿರುವ ಗಣ್ಯರು

 

Related posts: