RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಭಾರತೀಯ ಚಿಂತನೆಗಳನ್ನು ಜಗತ್ತಿನ ಎಲ್ಲ ವಿಜ್ಞಾನಿಗಳು ಒಪ್ಪಿಕೊಳ್ಳುತ್ತಾರೆ : ನಿರ್ಭಯಾನಂದ ಮಹಾಸ್ವಾಮಿಜಿ

ಗೋಕಾಕ:ಭಾರತೀಯ ಚಿಂತನೆಗಳನ್ನು ಜಗತ್ತಿನ ಎಲ್ಲ ವಿಜ್ಞಾನಿಗಳು ಒಪ್ಪಿಕೊಳ್ಳುತ್ತಾರೆ : ನಿರ್ಭಯಾನಂದ ಮಹಾಸ್ವಾಮಿಜಿ 

ಭಾರತೀಯ ಚಿಂತನೆಗಳನ್ನು ಜಗತ್ತಿನ ಎಲ್ಲ ವಿಜ್ಞಾನಿಗಳು ಒಪ್ಪಿಕೊಳ್ಳುತ್ತಾರೆ : ನಿರ್ಭಯಾನಂದ ಮಹಾಸ್ವಾಮಿಜಿ

ಗೋಕಾಕ ನ 4: ಆಧುನಿಕ ವಿಜ್ಞಾನದ ಮೂಲ ಭಾರತ ದೇಶವಾಗಿದ್ದು ವೈಜ್ಞಾನಿಕ ಹಾಗೂ ವಿಶಾಲ ದೃಷ್ಠಿಕೋನದ ಪ್ರವಚನಕ್ಕೆ ಪ್ರಾಶ್ಚಿಮಾತ್ಯರು ಸ್ಪಂದಿಸುತ್ತಿದ್ದಾರೆಂದು ಗದಗ ಹಾಗೂ ವಿಜಯಪುರದ ರಾಮಕೃಷ್ಣ ಆಶ್ರಮದ ಶ್ರೀ ನಿರ್ಭಯಾನಂದ ಮಹಾಸ್ವಾಮಿಜಿ ಹೇಳಿದರು.

ಅವರು ಶುಕ್ರವಾರದಂದು ಸಂಜೆ ತಮ್ಮ ನಾಲ್ಕು ತಿಂಗಳ ಅಮೇರಿಕಾ ಪ್ರವಾಸ ಮುಗಿಸಿ ನಗರಕ್ಕೆ ಆಗಮಿಸಿ ಇಲ್ಲಿಯ ಶಾರದಾ ಶಕ್ತಿಪೀಠದಲ್ಲಿ ಪ್ರಾರ್ಥನಾ ಮಂದಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಭಾರತೀಯ ಚಿಂತನೆಗಳನ್ನು ಜಗತ್ತಿನ ಎಲ್ಲ ವಿಜ್ಞಾನಿಗಳು ಒಪ್ಪಿಕೊಳ್ಳುತ್ತಾರೆ. ಪ್ರಪಂಚದ ಬಹಳಷ್ಟು ಸಮಸ್ಯೆಗಳಿಗೆ ಭಾರತೀಯ ಸಂಸ್ಕøತಿಯಲ್ಲಿ ಉತ್ತರಗಳಿವೆ. ಭಾರತೀಯರು ಅಧ್ಯಾತ್ಮೀಕಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುವುದರಿಂದ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಅಮೇರಿಕನ್ನರು ನಮ್ಮ ಸಂಸ್ಕøತಿಗೆ ಮಾರು ಹೋಗಿ ಅಲ್ಲಿಯ ಅಧ್ಯಾತ್ಮೀಕ ಕೇಂದ್ರಗಳಲ್ಲಿ ಮುಖ್ಯಸ್ಥರಾಗಿ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲಿಯ ನಮ್ಮ ಮಕ್ಕಳು ಸಾಮಥ್ರ್ಯದಲ್ಲಿ ಅಮೇರಿಕನ್ನ ಮಕ್ಕಳನ್ನು ಮೀರಿಸುತ್ತಿದ್ದಾರೆ. ನಮ್ಮ ದೇಶದ ಮಕ್ಕಳಿಗೂ ಸರಿಯಾದ ಪಾಲನೆ ಹಾಗೂ ಸೂಕ್ತ ಮಾರ್ಗದರ್ಶನ ನೀಡಿದರೆ ಅವರು ಸಹ ಜಗತ್ತಿನಲ್ಲಿಯೇ ಸಾಮಥ್ರ್ಯ ಉಳ್ಳವರಾಗುತ್ತಾರೆ ಎಂದು ತಿಳಿಸಿದರು.

ಮಹಾನ್ ವ್ಯಕ್ತಿಗಳ ತಾಯಂದಿರೆಲ್ಲ ಪಂಡಿತರಾಗಿರಲಿಲ್ಲ. ಅವರು ಪ್ರಪಂಚವನ್ನು ಬೆರಗುಗೊಳಿಸುವ ಮಕ್ಕಳನ್ನು ಜಗತ್ತಿಗೆ ನೀಡಿದ್ದಾರೆ. ಅಂತಹ ಶಕ್ತಿ ನಮ್ಮ ಭಾರತೀಯರ ನಾರಿಯರಲ್ಲಿದೆ. ನಿಮ್ಮದ್ದಲ್ಲದ ವಸ್ತುಗಳಿಗೆ ಆಸೆ ಪಡದೇ ಪ್ರಾಮಾಣಿಕವಾಗಿ ದುಡಿದು ಸಂಪಾದಿಸಬೇಕು. ಗಳಿಸಿದ ಒಂದು ಭಾಗ ತಪಸ್ವಿಗಳಿಗೆ ನೀಡಿದರೆ ತಪಸ್ವಿಗಳ ಒಂದು ಭಾಗ ನಿಮಗೆ ಲಭಿಸುತ್ತಿದೆ. ಅಧ್ಯಾತ್ಮೀಕ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ದಿವ್ಯವಾದ ಬದಲಾವಣೆಯಿಂದ ನಮ್ಮ ಮನೆ ಸ್ವರ್ಗವಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಿವಮಯಿ ಮಾತಾಜಿ, ಪ್ರಮೋದಮಯಿ ಮಾತಾಜಿ, ಕೈವಲ್ಯಮಯಿ ಮಾತಾಜಿ, ರೂಪಮಯಿ ಮಾತಾಜಿ, ವಿನಾಯಕ ಚಿಪ್ಪಲಕಟ್ಟಿ, ಮಲ್ಲಿಕಾರ್ಜುನ ಈಟಿ, ರಂಗನಾಥ ಚಿಪ್ಪಲಕಟ್ಟಿ, ರಾಮಕೃಷ್ಣ ಆಶ್ರಮದ ಸದಸ್ಯರು, ಭಕ್ತಾಧಿಗಳು ಇದ್ದರು.

Related posts: