ಬೆಳಗಾವಿ :ಬೆಳಗಾವಿ ಯಾರ ಅಪ್ಪನ ಸ್ವತ್ತಲ್ಲ: ಟಿ.ಎ.ನಾರಾಯಣಗೌಡ
ಬೆಳಗಾವಿ ಯಾರ ಅಪ್ಪನ ಸ್ವತ್ತಲ್ಲ: ಟಿ.ಎ.ನಾರಾಯಣಗೌಡ
ಬೆಳಗಾವಿ ನ 4: ಬೆಳಗಾವಿ ಯಾರ ಅಪ್ನನ ಸ್ವತ್ತಲ್ಲ ಅದು ಕರ್ನಾಟಕದ ಅವಿಭಾಜ್ಯ ಅಂಗ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದರು
ಅವರು ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾ ಘಟಕ ಶನಿವಾರದಂದು ನಗರದ ಮಹಾಂತೇಶ ನಗರದ ಉದ್ಯಾನವನದಲ್ಲಿ ರಾಜ್ಯೋತ್ಸವದ ನಿಮಿತ್ಯ ಹಮ್ಮಿಕೊಂಡಿದ್ದ ನಗೆ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು
ಕಳೆದ ಹಲವು ದಶಕಗಳಿಂದ ಬೆಳಗಾವಿಯ ಕನ್ನಡಿಗರು ಕನ್ನಡ ರಕ್ಷಣೆಯನ್ನು ಮಾಡುತ್ತಾ ಬಂದಿದ್ದಾರೆ ಕರಾಳ ದಿನ ಆಚರಿಸುವ ವಿರೋಧಿ ನೀತಿ ಇಲ್ಲಿಗೆ ಅಂತ್ಯವಾಗಬೇಕು ಮುಂದಿನ ಕರಾಳ ದಿನ ಮಾಡಲು ಕರವೇ ಬಿಡುವುದಿಲ್ಲ ಜಿಲ್ಲಾಡಳಿತ ಅನುಮತಿ ಕೋಟ್ಟರೆ ಕರವೇ ಸೇನ್ಯ ಬೆಳಗಾವಿ ನುಗ್ಗಿ ಎಂಇಎಸ ಗೆ ತಕ್ಕ ಬುದ್ಧಿ ಕಲಿಸುತ್ತದೆ ಇನ್ನು ಮುಂದೆ ನಮ್ಮನ್ನು ಕೆಣಕಿದರೇ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಂಇಎಸ ಸಂಘಟನೆ ವಿರುದ್ಧ ಕಿಡಿ ಕಾರಿದರು . ದೇಶದ ಅನೇಕ ರಾಜ್ಯಗಳಲ್ಲಿ ಕನ್ನಡಿಗರು ನೆಲಿಸಿ ಆ ರಾಜ್ಯದ ಭಾಷೆ ಕಲಿತು ಬದುಕುತ್ತಿದ್ದಾರೆ ಹಾಗೆಯೆ ನಿವು ಸಹ ಈ ರಾಜ್ಯದ ಭಾಷೆ ಕಲಿಯಬೇಕು ಇಲ್ಲದಿದ್ದರೆ ನಾವು ಅವರಿಗೆ ಕಲಿಸಬೇಕಾಗುತ್ತದೆ . ನಾವು ಯಾರಿಗೂ ಅಂಜುವುದಿಲ್ಲ , ಹೆದರುವುದಿಲ್ಲ ಎಲ್ಲದಕ್ಕೂ ಬೆಳಗಾವಿ ಕನ್ನಡಿಗರು ಸಿದ್ದರಿದ್ದಾರೆ . ನಾವು ಎಲ್ಲವನ್ನು ಪ್ರೀತಿಸುತ್ತೆವೆ ಹಾಗೇ ನಿವು ಕನ್ನಡವನ್ನು ಪ್ರೀತಿಸುವುದು ಕಲಿಯಿರಿ ಎಂದು ಕನ್ನಡ ವಿರೋಧಿಗಳಿಗೆ ನಾರಾಯಣಗೌಡ ಬುದ್ದಿವಾದ ಹೇಳಿದರು
ಮುಂದಿನ ದಿನಗಳಲ್ಲಿ ಬೆಳಗಾವಿ ಪಾಲಿಕೆಯಲ್ಲಿ ಕನ್ನಡ ಭಾಷೆಯ ಅಭ್ಯರ್ಥಿಗಳನ್ನು ಗೆಲ್ಲಿಸಿ ಕನ್ನಡ ಅಭ್ಯರ್ಥಿಯನ್ನೇ ಮೇಯರ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು ಎಂದು ನಾರಾಯಣಗೌಡ ಇದೇ ಸಂದರ್ಭದಲ್ಲಿ ಹೇಳಿದರು
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನಾಗನೂರ ರುದ್ರಾಕ್ಷಿ ಮಠದ ಪರಮಪೂಜ್ಯ ವಹಿಸಿ ಆರ್ಶಿವಚನ ನೀಡಿದರು
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಮಹನೀಯರನ್ನು ಸತ್ಕರಿಸಿ ಗೌರವಿಸಲಾಯಿತು
ಕಾರ್ಯಕ್ರಮದಲ್ಲಿ ಹಿರಿಯ ಹೋರಾಟಗಾರ ಸಿದ್ದನಗೌಡಾ ಪಾಟೀಲ , ಅಶೋಕ ಚಂದರಗಿ , ರಾಜು ಸೇಠ , ಸರಜೂ ಕಾಟ್ಕರ , ಕರವೇ ಜಿಲ್ಲಾಧ್ಯಕ್ಷ ಮಹಾದೇವ ತಳವಾರ , ಜಿಲ್ಲಾ ಸಂಚಾಲಕ ದೀಪಕ ಗುಡಗನಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು
ತದ ನಂತರ ಹಾಸ್ಯ ದಿಗ್ಗಜ ಪ್ರಾಣೇಶ ಮತ್ತು ತಂಡದವರಿಂದ ನಗೆ ಹಬ್ಬ ನಡೆಯಿತು