ಗೋಕಾಕ:ಕನ್ನಡ ಭಾಷೆಯನ್ನು ಘಟ್ಟಿ ಗೊಳಿಸುವ ಜವಾಬ್ದಾರಿ ಯುವಕರ ಮೇಲಿದೆ : ಕರವೇ ಅಧ್ಯಕ್ಷ ಖಾನಪ್ಪನವರ
ಕನ್ನಡ ಭಾಷೆಯನ್ನು ಘಟ್ಟಿ ಗೊಳಿಸುವ ಜವಾಬ್ದಾರಿ ಯುವಕರ ಮೇಲಿದೆ : ಕರವೇ ಅಧ್ಯಕ್ಷ ಖಾನಪ್ಪನವರ
ಗೋಕಾಕ ನ 5: ಕನ್ನಡ ಭಾಷೆಯನ್ನು ಘಟ್ಟಿ ಗೊಳಿಸುವ ಜವಾಬ್ದಾರಿ ಇಂದಿನ ಯುವ ಜನಾಂಗದ ಮೇಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು
ಅವರು ರವಿವಾರದಂದು ಕರ್ನಾಟಕ ರಕ್ಷಣಾ ವೇದಿಕೆ ತೆಳಗಿನಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಕನ್ನಡಿಗರು ಅಭಿಮಾನ ಶೂನ್ಯ ವಾಗುತ್ತಿರುವುದರಿಂದ ಕನ್ನಡದ ಭಾಷೆ ಬೆಳೆಯಬೇಕಾದ ವೇಗದಲ್ಲಿ ಬೆಳೆಯುತ್ತಿಲ್ಲಾ ಯುವಕರು ಎಚ್ಚೆತ್ತುಕೊಂಡು ಕನ್ನಡದ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಬೇಕು ಆ ನೀಟ್ಟಿನಲ್ಲಿ ಕರವೇ ಗೋಕಾಕ ತಾಲೂಕಾ ಘಟಕದಿಂದ ಮುಂಬರುವ ದಿನಗಳಲ್ಲಿ ತಾಲೂಕಿನಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕನ್ನಡವನ್ನು ಘಟ್ಟಿ ಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದೆಂದು ಖಾನಪ್ಪನವರ ಹೇಳಿದರು
ಈ ಸಂದರ್ಭದಲ್ಲಿ ಕಾರ್ಯದರ್ಶಿ ಸಾಧಿಕ ಹಲ್ಯಾಳ , ಸ್ಥಳೀಯ ಘಟಕದ ಅಧ್ಯಕ್ಷ ಲಕ್ಷ್ಮಣ ಗೊರಗುದ್ದಿ , ಉಪಾಧ್ಯಕ್ಷ ಸಿದ್ದಪ್ಪ ಬಡಕುರಿ , ದೆವೇಂದ್ರಪ್ಪಾ ಖಂಡಪನ್ನವರ , ರಮೇಶ ಹೂಲೆಪ್ಪಗೊಳ , ಮಾರುತಿ ತೋಳಿ , ಮಹಾದೇವ ಕರಡಿಗುದ್ದಿ , ಶ್ರೀಕಾಂತ್ ಪಡೆಪ್ಪಗೊಳ , ಶ್ರೀಕಾಂತ ಬುಗಡಿಕಟ್ಟಿ , ಪರಸಪ್ಪ ಮಾಳಗಿ , ಬಾಳಪ್ಪ ಕೀಲಾರಿ , ಬಸಪ್ಪ ಕರಡಿಗುದ್ದಿ , ಸಿದ್ರಮಪ್ಪ ಪೂಜೇರಿ , ನಿಲಪ್ಪ ಸಂಬಾಳಿ , ಸನ್ನಿಗಪ್ಪ ಕೋಪ್ಪದ , ಬಾಳೇಶ ತೊಳಿ , ಸೇರಿದಂತೆ ಅನೇಕರು ಉಪಸ್ಥಿತರಿದ್ದರು