ಬೈಲಹೊಂಗಲ:ಪಂಚಮಸಾಲಿ ಶ್ರೀಗಳ ತೇಜೊವದೆ ಸಹಿಸಲ್ಲ: ಶ್ರೀಶೈಲ ಬೋಳಣ್ಣವರ
ಪಂಚಮಸಾಲಿ ಶ್ರೀಗಳ ತೇಜೊವದೆ ಸಹಿಸಲ್ಲ: ಶ್ರೀಶೈಲ ಬೋಳಣ್ಣವರ
ಬೈಲಹೊಂಗಲ ಪ 9: ಹುಬ್ಬಳ್ಳಿ ನಡೆದ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ಮಹಾಸಮಾವೇಶದಲ್ಲಿ ಕೂಡಲ ಸಂಗಮದ ಪಂಚಮಸಾಲಿ ಜಗದ್ಗುರುಗಳು ಸಮಾವೇಶ ಉದ್ಧೇಶಿಸಿ ಆಡಿದ ಮಾತುಗಳಿಂದ ಕೆಲವರಿಗೆ ನೋವಾಗಿದ್ದರಿಂದ ಶ್ರೀಗಳು ವಿಷಾದವನ್ನು ವ್ಯಕ್ತಪಡಿಸಿದ್ದಾರೆ ಆದರೆ ಕೆವರು ಪ್ರತಿಭಟನೆ, ಪತ್ರಿಕಾ ಹೇಳಿಕೆ ನೀಡುತ್ತಿರುವದು ಮತ್ತು ಪೀಠ ತ್ಯಾಗ ಮಾಡಲಿ ಎಂಬ ಹೇಳಿಕೆಗಳಿಗೆ ಜಗದ್ಗುರುಗಳು ಪೀಠತ್ಯಾಗ ಮಾಡುವ ಅವಶ್ಯಕತೆ ಇಲ್ಲಾ ಎಂದು ಬೈಲಹೊಂಗಲ ಲಿಂಗಾಯತ ಪಂಚಮಸಾಲಿ ಟ್ರಸ್ಟ್‍ನ ಅಧ್ಯಕ್ಷರಾದ ನ್ಯಾಯವಾದಿ ಶ್ರೀಶೈಲಣ್ಣಾ ಬೋಳಣ್ಣವರ ಹೇಳಿದರು.
ಅವರು ನಗರದ ಅಂಚೆಕಛೇರಿ ಹತ್ತಿರದ ಬಾಳೇಕುಂದರಗಿ ಗೆಸ್ಟ-ಹೌಸ್‍ದಲ್ಲಿ ನಡೆದ ಪತ್ರಿಕಾ ಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಕೂಡಲ ಸಂಗಮ ಶ್ರೀಗಳ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಅವರು ನೈತಿಕತೆಯ ದೃಷ್ಟಿಯಿಂದ ಹೇಳಿದ್ದಾರೆ ಹೊರತು ಯಾರಿಗೂ ನೋವು ಉಂಟುಮಾಡಲು ಹೇಳಿರುವುದಿಲ್ಲ ತಪ್ಪಾಗಿ ಅರ್ಥೈಸಿಕೊಂಡಿರುವುದಕ್ಕೆ ಶ್ರೀಗಳು ವಿಷಾದವ್ಯಕ್ತಪಡಿಸಲಾಗಿದೆ. ಆದರೆ ಅದೇ ಮಾತುಗಳನ್ನು ಹಿಡಿದು ಲಿಂಗಾಯತ ಪಂಚಮಸಾಲಿ ಶ್ರೀಗಳ ತೇಜೋವಧೆ ಮಾಡುತ್ತಿರುವುದನ್ನು ಸಮಾಜ ಸಹಿಸುವುದಿಲ್ಲ ಎಂಬುವುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕೆಂದು ಎಚ್ಛರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಹಿರಿಯ ಮುಖಂಡರಾದ ನಿವೃತ್ತ ಶಿಕ್ಷಕ ಜಿ.ಬಿ ತುರಮರಿ, ಪುರಸಭೆ ಅದ್ಯಕ್ಷ ರಾಜಶೇಖರ ಮೂಗಿ, ಜಿ.ಪಂ ಸದಸ್ಯ ಶಂಕರ ಮಾಡಲಗಿ, ಯುವ ಉದ್ಯಮಿ ಕಿರಣ ಸಾದುನವರ, ಬಿ.ಜೆ.ಪಿ ಮಂಡಳ ಅದ್ಯಕ್ಷ ಮಡಿವಾಳಪ್ಪ ಹೋಟಿ, ಮುರಿಗೆಪ್ಪ ಗುಂಡ್ಲೂರ, ಮಹೇಶ ಹರಕುಣಿ, ವಿಜಯ ಚನ್ನನವರ, ಫಕ್ಕೀರಗೌಡ ಸಿದ್ದನಗೌಡರ, ಮಹಾಂತೇಶ ಮತ್ತಿಕೊಪ್ಪ, ವಿಠ್ಠಲ ಕಡಕೋಳ, ಈರಣ್ಣ ಬೆಟಗೇರಿ, ವಿಠ್ಠಲ ಅಂದಾಣಿ, ಅಭೀಷೇಕ ಬೋಳಣ್ಣವರ ಶಿವಾನಂದ ಕೋಲಕಾರ ಹಲವಾರು ಗಣ್ಯರು ಉಪಸ್ಥಿತರಿದ್ದರು.