RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಸಚಿವ ಎಮ್.ಬಿ. ಪಾಟೀಲ ಹೇಳಿಕೆ ಖಂಡಿಸಿ ನಾಳೆ ನಗರದಲ್ಲಿ ಪಕ್ಷಾತೀತ ಪ್ರತಿಭಟನೆ : ಆಶೋಕ ಪೂಜಾರಿ

ಗೋಕಾಕ:ಸಚಿವ ಎಮ್.ಬಿ. ಪಾಟೀಲ ಹೇಳಿಕೆ ಖಂಡಿಸಿ ನಾಳೆ ನಗರದಲ್ಲಿ ಪಕ್ಷಾತೀತ ಪ್ರತಿಭಟನೆ : ಆಶೋಕ ಪೂಜಾರಿ 

ಸಚಿವ ಎಮ್.ಬಿ. ಪಾಟೀಲ ಹೇಳಿಕೆ ಖಂಡಿಸಿ ನಾಳೆ ನಗರದಲ್ಲಿ ಪಕ್ಷಾತೀತ ಪ್ರತಿಭಟನೆ : ಆಶೋಕ ಪೂಜಾರಿ

ಗೋಕಾಕ ನ 10: ನಾಡಿನ ಪ್ರಸಿದ್ಧ ಕೆ.ಎಲ್.ಇ. ಸಂಸ್ಥೆಯು ತನ್ನ ಕ್ರಿಯಾಶೀಲತೆಯಿಂದ ಹೊರದೇಶಗಳಲ್ಲಿಯೂ ವಿಸ್ತರಿಸಿ ಗುರುತಿಸುವಂತೆ ಮಾಡಿದ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರ ಕುರಿತು ಕಳೆದ ದಿ. 5ರಂದು ಹುಬ್ಬಳ್ಳಿಯಲ್ಲಿ ಜರುಗಿದ ಧಾರ್ಮಿಕ ಸಮಾವೇಶದಲ್ಲಿ ಲಘು ಶಬ್ದಗಳಿಂದ ರಾಜಕೀಯ ಪ್ರೇರಿತರಾಗಿ ಮಾತನಾಡಿದ ನೀರಾವರಿ ಸಚಿವ ಎಮ್.ಬಿ. ಪಾಟೀಲ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ ತಮ್ಮ ಹೇಳಿಕೆಯ ಕುರಿತು ಸಾರ್ವಜನಿಕ ಕ್ಷಮೆ ಕೇಳಬೇಕು ಇಲ್ಲವೇ ಮಾನ್ಯ ಮುಖ್ಯಮಂತ್ರಿಗಳು ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ನಗರದಲ್ಲಿ ನಾಳೆ ದಿ. 11ರಂದು ಪಕ್ಷಾತೀತ ಸಾರ್ವಜನಿಕ ಪ್ರತಿಭಟನೆ ನಡೆಸಲಾಗುವದೆಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ, ಕೆಎಲ್‍ಇ ನಿರ್ದೇಶಕ ಜಯಾನಂದ ಮುನವಳ್ಳಿ ಮತ್ತು ಸಮಾಜದ ಮುಖಂಡ ಸೋಮಶೇಖರ ಮಗದುಮ್ಮ ಆಗ್ರಹಿಸಿದರು.
ಗುರುವಾರದಂದು ನಗರದ ಕೆ.ಎಲ್.ಇ. ಸಂಸ್ಥೆಯ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಕೆ.ಎಲ್.ಇ. ಸಂಸ್ಥೆ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಸಾಧನೆಗೈದಿದೆ. ನಾಡಿನ, ದೇಶದ ಮತ್ತು ಪರದೇಶಗಳ ಲಕ್ಷಾಂತರ ವಿದ್ಯಾರ್ಥಿಗಳ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಈ ಸಂಸ್ಥೆಯನ್ನು ತಮ್ಮ ಕತೃತ್ವ ಶಕ್ತಿಯಿಂದ ಪ್ರಭಾಕರ ಕೋರೆ ಅವರು ಕಟ್ಟಿ ಬೆಳೆಸುವುದರ ಜೊತೆಗೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಈ ಭಾಗಕ್ಕೆ ಕೆ.ಎಲ್.ಇ. ಸಂಸ್ಥೆಯ ಡಾ|| ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ನೀಡುತ್ತಿರುವ ಸೇವೆ ಅಮೋಘವಾಗಿದೆ. ದೇಶದಾದ್ಯಂತ ಕೆ.ಎಲ್.ಇ. ಸಂಸ್ಥೆ ಅನೇಕ ಶಾಲಾ ಕಾಲೇಜುಗಳನ್ನು ಪ್ರಾರಂಭಿಸಿ ಯುವಕರ ಬದುಕಿಗೆ ದಾರಿ ತೋರಿಸುತ್ತಿದೆ.

ಇಂತಹ ಸಂಸ್ಥೆ ಮತ್ತು ಅದನ್ನು ಕಟ್ಟಿ ಬೆಳೆಸಿದ ಡಾ|| ಪ್ರಭಾಕರ ಕೋರೆ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಸಚಿವ ಎಮ್.ಬಿ. ಪಾಟೀಲ ಅವರು ಧಾರ್ಮಿಕ ಸಮಾವೇಶದಲ್ಲಿ ಪ್ರಭಾಕರ ಕೋರೆ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದು ಅತ್ಯಂತ ಖಂಡನೀಯ ಎಂದರು.

ದಿ. 11ರಂದು ನಡೆಯುವ ಪ್ರತಿಭಟನಾ ಮೆರವಣಿಗೆ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪ್ರಾರಂಭವಾಗಿ ತಹಶೀಲದಾರ ಕಾರ್ಯಾಲಯ ಇರುವ ಮಿನಿ ವಿಧಾನಸೌಧಕ್ಕೆ ತೆರಳಿ ಸರಕಾರಕ್ಕೆ ತಹಶೀಲದಾರರ ಮುಖಾಂತರ ಮನವಿ ಸಲ್ಲಿಸಲಾಗುವದೆಂದು ತಿಳಿಸಿದರು.

ಎಮ್.ಬಿ.ಪಾಟೀಲ ಅವರು ಹೇಳಲಾದ ಹೇಳಿಕೆಯ ಸಮಾವೇಶದಲ್ಲಿಯೇ ಕೂಡಲಸಂಗಮದ ಪಂಚಮಸಾಲಿ ಪೀಠದ ಶ್ರೀಗಳು ಮಾತನಾಡಿದ್ದರ ಬಗ್ಗೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿರುವ ಸಮಯದಲ್ಲಿ ಬರಿಯ ಪ್ರಭಾಕರ ಕೋರೆ ಅವರ ಹೇಳಿಕೆ ಬಗ್ಗೆ ಮಾತ್ರ ಪ್ರತಿಭಟನೆ ನಡೆಸುವದನ್ನು ನೋಡಿದರೆ ಅದರಲ್ಲಿ ರಾಜಕೀಯ ಪ್ರೇರಿತ ಪ್ರತಿಭಟನೆ ಅನಿಸುವದಿಲ್ಲವೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಸಪ್ತ ಋಷಿಗಳು ಬಹಳ ಕಷ್ಟದಿಂದ ಕಟ್ಟಿ ಬೆಳೆಸಿದ ಸಂಸ್ಥೆ ಹಾಗೂ ಅದರ ಕಾರ್ಯಾಧ್ಯಕ್ಷರ ಬಗ್ಗೆ ಹಗುರವಾಗಿ ಮಾತನಾಡುವದು ಸರಿಯಲ್ಲ ಎಂದು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಆಯ್.ವಿ. ಕೌತನಾಳಿ, ಎಸ್.ಎಸ್. ಮಿರ್ಜಿ, ಎಸ್.ಎಸ್. ಮಂತ್ರಣ್ಣವರ, ದುಂಡಪ್ಪ ಗಾಡವಿ, ಪ್ರಶಾಂತ ಕುರಬೇಟ, ಶಾಮಾನಂದ ಪೂಜೇರಿ, ಪ್ರೊ. ಅಂದಾನಿ ಇದ್ದರು.

 

ವಿ.ಸೂ. ದಯವಿಟ್ಟು ಯಾರು ಕಾಫೀ ಮಾಡಬೇಡಿ. ಸುದ್ದಿಯಲ್ಲಿ ಸ್ವಂತ ಪ್ರಯತ್ನ ಮತ್ತು ಸ್ವಂತಿಕೆ ಇರಲಿ

Related posts: