ಗೋಕಾಕ:ಸಚಿವ ಎಂ.ಬಿ.ಪಾಟೀಲರಿಂದ ಕೀಳು ಮಟ್ಟದ ರಾಜಕೀಯ : ಈರಣ್ಣಾ ಕಡಾಡಿ ಆರೋಪ
ಸಚಿವ ಎಂ.ಬಿ.ಪಾಟೀಲರಿಂದ ಕೀಳು ಮಟ್ಟದ ರಾಜಕೀಯ : ಈರಣ್ಣಾ ಕಡಾಡಿ ಆರೋಪ
ಗೋಕಾಕ ನ 11: ಧರ್ಮದ ಹೆಸರಿನಲ್ಲಿ ಸಚಿವ ಎಂ.ಬಿ.ಪಾಟೀಲ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಈರಣ್ಣಾ ಕಡಾಡಿ ಆರೋಪಿಸಿದರು
ಅವರು ಹುಬ್ಬಳ್ಳಿಯಲ್ಲಿ ನಡೆದ ಲಿಂಗಾಯತ ಸಮಾವೇಶದಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ಕೆಎಲ್ ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದನ್ನು ಖಂಡಿಸಿ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ ಹಾಗೂ ಡಾ.ಕೋರೆ ಅಭಿಮಾನಿ ಬಳಗ ಶನಿವಾರದಂದು ಗೋಕಾಕದಲ್ಲಿ ಹಮ್ಮಿಕೊಂಡಿದ್ದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದರು
ಒಂದು ಜವಾಬ್ದಾರಿಯುತ್ತ ಸ್ಥಾನದಲ್ಲಿರುವ ನೀರಾವರಿ ಸಚಿವರಾಗಿರುವ ಪಾಟೀಲರು ತಮ್ಮ ಇಲಾಖೆಯಿಂದ ರಾಜ್ಯದ ಜನತೆಗೆ ಪೂರಕವಾದಂತ ಸಾಕಷ್ಟು ಕೆಲಸಗಳನ್ನು ಮಾಡುವುದನ್ನು ಬಿಟ್ಟು ಧಾರ್ಮಿಕ ವೇದಿಕೆಯನ್ನು ರಾಜಕೀಯವಾಗಿ ಬಳಸಿಕೊಂಡು ಡಾ.ಕೋರೆ ಅವರನ್ನು ಅವಹೇಳನ ಮಾಡಿರುವುದು ತರವಲ್ಲ ಧರ್ಮ ಮತ್ತು ಜಾತಿಯ ವಿಚಾರ ಬಂದಾಗ ಅವುಗಳನ್ನು ಸರಿ ಪಡಿಸಲು ಲಿಂಗಾಯತ ಧರ್ಮದಲ್ಲಿ ಸಾಕಷ್ಟು ವಿದ್ವಾಂಸರು ಇದ್ದಾರೆ ಎಂ.ಬಿ.ಪಾಟೀಲರು ಧರ್ಮದ ಹೆಸರಿನಲ್ಲಿ ಬೆಂಕಿ ಹಚ್ಚುವ ಕಾರ್ಯ ಮಾಡುವುದನ್ನು ಬಿಟ್ಟು ರಾಜಕೀಯ ಮಾಡಲಿ ಎಂದು ವ್ಯಂಗ್ಯವಾಡಿದ್ದರಲ್ಲದೆ ತಕ್ಷಣದಲ್ಲಿ ಪಾಟೀಲರು ಬೇಷರತ್ತಾಗಿ ಕೋರೆ ಅವರ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು
ಗೋಕಾಕದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ಪಾದಯಾತ್ರೆ ನಡೆಸಿದ ಪ್ರತಿಭಟನೆಕಾರರು ಸಚಿವ ಎಂ.ಬಿ.ಪಾಟೀಲ ಅವರ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ಅವರನ್ನು ಸಂಪುಟದಿಂದ ಕೈಬಿಡುವಂತೆ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು
ಈ ಸಂದರ್ಭದಲ್ಲಿ ಮುಖಂಡರಾದ ಅಶೋಕ ಪೂಜಾರಿ, ಜಯಾನಂದ ಮುನ್ನೋಳಿ , ಚಂದ್ರಶೇಖರ ಅಕ್ಕಿ, ಭೀಮಶಿ ಗಡಾದ, ಎಂ.ಎಲ್.ಮುತ್ತೆಣ್ಣವರ, ರಾಜು ಮುನವಳ್ಳಿ, ಚಂದ್ರಶೇಖರ ಕೊಣ್ಣೂರು, ಸೋಮಶೇಖರ ಮಗ್ದುಂ, ಆನಂದ ಗೋಟಡಕಿ, ಶಾಮಾನಂದ ಪೂಜಾರಿ, ಮರಿಲಿಂಗನವರ, ಬಸವರಾಜ ಹಿರೇಮಠ, ಶಂಕರ ಗಿಡನ್ನವರ , ರಮೇಶ ಉಟಗಿ , ಅಡಿವೆಪ್ಪಾ ಮರನಿಂಗನವರ , ಚನ್ನಬಸು ರುದ್ರಾಪುರ, ಲಕ್ಷ್ಮಣ ಹುಳ್ಳೇರ, ಎಂ.ಡಿ.ಚುನಮರಿ, ಮಹಾಂತೇಶ ಮಠಪತಿ , ಆನಂದ ಮೂಡಲಗಿ , ಈರಣ್ಣ ಅಂಗಡಿ , ಗಂಗಪ್ಪಾ ತಾಂಶಿ , ಎಸ್. ವಿ.ದೇಮಶೇಟ್ಟಿ , ಶ್ರೀಮತಿ ಅನುಪಾ ಕೌಶಿಕ , ಜಿ.ಎಂ.ಅಂದಾನಿ ಸೇರಿದಂತೆ ಮತ್ತಿತರರು ಇದ್ದರು.
(ವಿ.ಸೂ. ದಯವಿಟ್ಟು ಯಾರು ಕಾಫೀ ಮಾಡಬೇಡಿ. ಸುದ್ದಿಯಲ್ಲಿ ಸ್ವಂತ ಪ್ರಯತ್ನ ಮತ್ತು ಸ್ವಂತಿಕೆ ಇರಲಿ )