ಗೋಕಾಕ:ಸ್ವಾತಂತ್ರ್ಯ ಬಂದು 70 ವರ್ಷವಾದರು ಗೋಕಾಕ ಮತಕ್ಷೇತ್ರಕ್ಕೆ ಇನ್ನು ಸ್ವಾತಂತ್ರ್ಯ ಬಂದಿಲ್ಲ : ಯಡಿಯೂರಪ್ಪ ಆರೋಪ
ಸ್ವಾತಂತ್ರ್ಯ ಬಂದು 70 ವರ್ಷವಾದರು ಗೋಕಾಕ ಮತಕ್ಷೇತ್ರಕ್ಕೆ ಇನ್ನು ಸ್ವಾತಂತ್ರ್ಯ ಬಂದಿಲ್ಲ : ಯಡಿಯೂರಪ್ಪ ಆರೋಪ
ಗೋಕಾಕ ನ 18 :ಸ್ವಾತಂತ್ರ್ಯ ಬಂದು 70 ವರ್ಷವಾದರು ಗೋಕಾಕ ಮತಕ್ಷೇತ್ರಕ್ಕೆ ಇನ್ನು ಸ್ವಾತಂತ್ರ್ಯ ಬಂದಿಲ್ಲ ಎಂದು ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು
ಇಲ್ಲಿಯ ವಾಲ್ಮೀಕಿ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ನಡೆದ ನವ ಕರ್ನಾಟಕದ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಹಣಬಲ , ತೋಳ್ಬಲ , ಬೂತ್ ಕ್ಯಾಪಚರ, ಗುಂಡಾಗಿರಿ ನೀತಿಯಿಂದ ಗೆಲುವು ಸಾಧಿಸಿದ್ದು ಗಂಡಸತನ ಅಲ್ಲಾ ಮುಂದಿನ ಚುನಾವಣೆಯಲ್ಲಿ ಪ್ರತಿ ಬೂತನಲ್ಲಿ ನಿರ್ಬೀತವಾಗಿ ಚುನಾವಣೆ ನಡೆಯಲು ವ್ಯವಸ್ಥೆ ಮಾಡಲು ಕ್ರಮ ಜರುಗಿಸಲಾಗುವುದು ಮುಂದೆ ಚಲಾವಣೆಯಾಗುವ ನಿಮ್ಮ ವೋಟು ಯಡಿಯೂರಪ್ಪ ಅವರಿಗೆ ಎಂದು ನೆನಪಿಸಿ ಮತ ಹಾಕಬೇಕು
ರಾಜ್ಯದಲ್ಲಿ ಯಾವುದೇ ಹೊಂದಾಣಿಕೆ ರಾಜ್ಯಕೀಯ ಮಾಡಲು ಕೊಡುವುದಿಲ್ಲ ಅಲ್ಲೋಬ ಇಲ್ಲೋಬ್ಬ ಶಾಸಕ ನಾಗಲು ಬಿಡುವುದಿಲ್ಲ ಹೊಂದಾಣಿಕೆ ರಾಜಕೀಯಕ್ಕೆ ಕಡಿವಾಣ ಹಾಕುತ್ತೇನೆಂದ ಬಿಎಸವಾಯ್ ಗೋಕಾಕಿನ ಗುಂಡಾ ರಾಜ್ಯಕೀಯವನ್ನು ಕಿತ್ತೆಸೆಯಬೇಕಾಗಿದೆ ಆ ದೀಸೆಯಲ್ಲಿ ಎಲ್ಲರೂ ಒಗ್ಗಟಾಗಬೇಕಾಗಿದೆ ಎಂದರಲ್ಲದೆ ಗೋಕಾಕನ್ನು ದತ್ತು ತೆಗೆದುಕೊಂಡು ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡಲು ಪ್ರಾಮಾಣಿಕ ಪ್ರಯುಮಾಡುತ್ತೇನೆ ಎಂದು ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಹೇಳಿದರು .
120 ಕೋಟಿ ಕೇಂದ್ರದಿಂದ ಗೋಕಾಕ ಕ್ಷೇತ್ರಕ್ಕೆ ಬಂದರು ಗೋಕಾಕ ಶಾಸಕರ ಇಚ್ಛಾಶಕ್ತಿ ಕೋರತೆಯಿಂದ ಹಣ ಸಧ್ಬಳಕೆ ಆಗಿಲ್ಲ ಅತ್ಯಾಚಾರಿ , ಭ್ರಷ್ಟಾಚಾರಿಗಳು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ , ಸಿದ್ದರಾಮಯ್ಯ ನವರು ಸೇರಿ ಸಚಿವ ಸಂಪುಟದ ಸಹೋದ್ಯೋಗಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಇದು ಈ ಸರಕಾರದ ನೀತಿಯಾಗಿದೆ . ಬಿಜೆಪಿ ಅಧಿಕಾಕ್ಕೆ ಬಂದ ನಂತರ ನದಿ ಜೋಡನೆ , ಕೆರೆ ತುಂಬಿಸುವ ಕಾರ್ಯ , ರೈತರಿಗೆ ಬೆಂಬಲ ಬೆಲೆ ಕೊಡುತ್ತೆವೆ ರೈತರಿಗೆ ಸುಳ್ಳು ಹೇಳಿ ಅಧಿಕಾರ ಹಿಡಿದ ಕಾಂಗ್ರೆಸ್ ಪಕ್ಷದ ಕತೆ ಮುಗಿದಿದೆ ಭಾಗ್ಯಲಕ್ಷ್ಮಿ ಯೋಜನೆಯ ಹೆಚ್ಚಿನ ಲಾಭ ಹಿಂದುಳಿದ ಮಹಿಳಿಯರಿಗೆ ನೀಡಿದ್ದೇನೆ , ಹಜಯಾತ್ರೆಕ್ಕೆ ಅನುಕೂಲ ಮಾಡಿದ್ದೇನೆ ಮುಂದಿನ ದಿನದಲ್ಲಿ ಬಿಜೆಪಿ ಗೆಲ್ಲಿಸಿ ಬಲತ್ಕಾರದಿಂದ ಮತ ಪಡೆಯುವ ಸಂಸ್ಕೃತಿಯನ್ನು ನಿಲ್ಲಿಸಬೇಕಾಗಿದೆ , ದರೋಡೆ ಮಾಡುವ ಸರಕಾರವನ್ನು ಕಿತ್ತೆಸೆಯ ಬೇಕಾಗಿದೆ , ಕಮೀಷನ್ ಏಂಜೆಟನಾಗಿರುವ ಸಿದ್ದರಾಮಯ್ಯ ಸರಕಾರದ ಕೆಲಸ ಮುಂದಿನ ಮೂರು ತಿಂಗಳು ಮಾತ್ರ ನಡೆಯಬಲ್ಲದು ಬದಲಾವಣೆಗಾಗಿ ಗೋಕಾಕ ಕ್ಷೇತ್ರವನ್ನು ಗೆಲ್ಲಬೇಕಾಗಿದೆ ಅದಕ್ಕಾಗಿ ಎಲ್ಲ ಮತದಾರರು ಮುಂದಾಗಬೇಕಾಗಿದೆ ಎಂದು ಯಡಿಯೂರಪ್ಪ ಹೇಳಿದರು
ಕೇಂದ್ರ ಸಚಿವ ಅನಂತಕುಮಾರ್ ಮಾತನಾಡಿ ರಾಜ್ಯದ ನಿದ್ದೆಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ ಗೋಕಾಕದಲ್ಲಿ ಗುಂಡಾ ರಾಜಕೀಯ ಕ್ಕೆ ಸೆಡ್ಡು ಹೊಡೆದು ಜನ ಈ ಯಾತ್ರೆಯನ್ನು ಬೆಂಬಲಿಸಿದ್ದಾರೆ ದಾದಾಗೀರಿ ರಾಜಕಾರಣದಿಂದ ಮುಕ್ತಿಹೊಂದಲು ಜನ ಫನ ತೋಡಬೇಕಾಗಿದೆ ಆ ನೀಟ್ಟಿನಲ್ಲಿ ಗೋಕಾಕ ಜನತೆ ಬಿಜೆಪಿಯನ್ನು ಬೆಂಬಲಿಸಿ ಎಂದ ಅನಂತಕುಮಾರ್ .ಸಿದ್ದರಾಮಯ್ಯ ಸರಕಾರ ದೇಶದಲ್ಲಿ ನಂ 1 ಭ್ರಷ್ಟಾಚಾರ ಸರಕಾರ ಎಂದು ಸರ್ವೇ ಮಾಡಿದಾಗ ಗೊತ್ತಾಗಿದೆ . ಅಭಿವೃದ್ಧಿಯಾಗದ ಗೋಕಾಕ ತಾಲೂಕಿನಲ್ಲಿ ರಸ್ತೆಯೇ ಇಲ್ಲಾ ಇದರ ಅಭಿವೃದ್ಧಿ ಪ್ರತಿ ವರ್ಷ ಬಿಲ್ಲಹಾಕಿ ಭ್ರಷ್ಟಾಚಾರ ಮಾಡುವ ಜನರನ್ನು ದೂರ ಮಾಡಬೇಕಾಗಿದೆ ಬಿಹಾರ ರಾಜ್ಯದ ತುಂಡಾಗಿ ಗೋಕಾಕ ಇರಬಾರದು ಅದನ್ನು ಕಿತ್ತು ಹಾಕಬೇಕು ಮುಖ್ಯ ಚುನಾವಣಾಧಿಕಾರಿಗೆ ಮನವಿ ಮಾಡಿ ಬರುವ ಚುನಾವಣೆಯನ್ನು ಬೀಗಿ ಭದ್ರತೆಯಲ್ಲಿ ನಡೆಸಲು ಕೇಂದ್ರ ಸರಕಾರ ಸಿದ್ದವಿದೆ ಎಂದು ಅನಂತಕುಮಾರ್ ಗುಡಗಿದರು . ನರೇಂದ್ರ ಮೋದಿ ಅವರ ಕಲ್ಪನೆಯಂತೆ ದೇಶದ 135 ಕೋಟಿ ಜನ ನೆಮ್ಮದಿಯಿಂದ ಬದುಕುವ ಸರಕಾರ ನಿಡಬೇಕಾಗಿದೆ ಆ ರೀತಿಯ ಸರಕಾರವನ್ನು ನಿಡಲು ಯಡಿಯೂರಪ್ಪ ನೇತೃತ್ವದ ಬಿಜೆಪಿ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದೆ ಗೋಕಾಕ ತಾಲೂಕಿನಲ್ಲಿ 10 ಜನ್ಯೋಷಧಿ ಕೇಂದ್ರ ತೆರೆಯಲು ಮುಂದಿನ ದಿನಗಳಲ್ಲಿ ಕ್ರಮ ಕೈಗೋಳಲಾಗುವುದು ಗೋಕಾಕ ಮತ ಕ್ಷೇತ್ರದಲ್ಲಿ ಕಾಲಾ ಪಾನಿ ಶಿಕ್ಷೆ ಮುಂದುವರೆಸಿ ಬೇಡಿ ಇದರಿಂದ ಹೊರಬಂದು ಗೋಕಾಕದಲ್ಲಿ ಬಿಜೆಪಿಗೆ ಬೆಂಬಲಿಸಬೇಕಾಗಿದೆ ಎಂದು ಕೇಂದ್ರ ಸಚಿವ ಅನಂತಕುಮಾಟರ್ ಹೇಳಿದರು
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಂಸದ ಸುರೇಶ ಅಂಗಡಿ ಬಿಹಾರಗಿಂತ ಕಡೆಯಾಗಿರುವ ಗೋಕಾಕ ಮತಕ್ಷೇತ್ರ ಇದನ್ನು ಬದಲಾಯಿಸಬೇಕಾಗಿದೆ ಕಳೆದ ಲೋಕಸಭಾ ಚುನಾವಣೆಯಲ್ಲಿ ನನಗೆ ಧಮ್ಮಿಕ್ಕಿ ಕೊಟ್ಟಿದರೂ ಸಹ 1 ಲಕ್ಷ್ಕೂ ಹೆಚ್ಚು ಮತನಿಡಿ ಗೆಲ್ಲಿಸಿದ್ದಿರಿ ಆ ರೀತಿ ಬರುವ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸಿ ಗೆಲ್ಲಿಸಬೇಕಾಗಿದೆ . ಗೋಕಾಕ ಮತಕ್ಷೇತ್ರವನ್ನು ಕರ್ನಾಟಕದಲ್ಲಿ ಮಾದರಿ ಕ್ಷೇತ್ರ ಮಾಡಲು ನಾವು ಫನತೋಟ್ಟಿದೇವೆ , ಗೋಕಾಕಿನ ಪೊಲೀಸ ಇಲಾಖೆ , ತಾಲೂಕಾಡಳಿತ ಜನರ ಕಾರ್ಯಮಾಡಲು ಮುಂದಾಗಬೇಕು ಅದನ್ನು ಹೊರತು ಪಡೆಸಿ ಒಂದು ಕುಟುಂಬದ ಗುಲಾಮರಾಗಿ ಕಾರ್ಯ ನಿರ್ವಹಿಸ ಬಾರದೆಂದು ಗುಡಗಿದ ಸಂಸದ ಅಂಗಡಿ ಅದು ಆಗಲ್ಲಿಲ ವೆಂದರೆ ಮುಂದಿನ ದಿನಗಳಲ್ಲಿ ನಾನೇ ಸ್ವತ ಧರಣಿ ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು
ಕೇಂದ್ರ ಸಚಿವ ರಮೇಶ ಜಿಗಜಿಣಗಿ , ಮಾಜಿ ಸಚಿವ ಉಮೇಶ ಕತ್ತಿ ,ಲಕ್ಷ್ಮಣ ಸವದಿ ,ಶ್ರೀಮತಿ ಶೋಭಾ ಕರಂದ್ಲಾಜೆ ಮಾತನಾಡಿದರು
ಬಿಜೆಪಿ ಮುಖಂಡ ಅಶೋಕ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು ಕಾರ್ಯಕ್ರಮವನ್ನು ಬಿಜೆಪಿ ಮುಖಂಡ ಅಶೋಕ ಓಸ್ವಾಲ ನಿರೂಪಿಸಿ ವಂದಿಸಿದರು
ಕಾರ್ಯಕ್ರಮಕ್ಕೂ ಮೊದಲು ನಗರದ ವಾಲ್ಮೀಕಿ ವೃತ್ತದಿಂದ ಕ್ರೀಡಾಂಗಣದ ವರೆಗೆ ಭವ್ಯ ಮೆರವಣಿಗೆ ಮೂಲಕ ಪರಿವರ್ತನಾ ಯಾತ್ರೆಗೆ ಸ್ವಾಗತ ನೀಡಲಾಯಿತು
ಬೈಲಹೊಂಗಲ ಶಾಸಕ ವಿಶ್ವನಾಥ್ ಪಾಟೀಲ , ವಿಧಾನಸಭಾ ಪರಿಷತ್ ಸದಸ್ಯ ಜಗದೀಶ್ ಕವಟಗಿಮಠ , ಮಾಜಿ ಶಾಸಕ ಎಂ.ಎಲ್ ಮುತ್ತೆನ್ನವರ , ಮಾಜಿ ಜಿ.ಪಂ ಈರಣ್ಣ ಕಡಾಡಿ , ಶ್ರೀಮತಿ ಭಾರತಿ ಮಗದುಮ್ಮ ಸ್ಥಳೀಯ ಬಿಜೆಪಿ ಮುಖಂಡರಾದ ಶಶಿಧರ ದೇಮಶೇಟ್ಟಿ , ಜಯಾನಂದ ಮುನ್ನೋಳಿ , ಗುರುಪಾದ ಕಳ್ಳಿಗುದ್ದಿ ಸೇರಿದಂತೆ ಇನ್ನೂ ಹಲವಾರು ಮುಖಂಡರು ಉಪಸ್ಥಿತರಿದ್ದರು