ಗೋಕಾಕ:“ಪದ್ಮಾವತಿ” ಚಲನ ಚಿತ್ರ ಬಿಡುಗಡೆ ಮಾಡದಂತೆ ಆಗ್ರಹ : ರಜಪೂತ ಸೇವಾ ಸಮಿತಿಯಿಂದ ಮನವಿ
“ಪದ್ಮಾವತಿ” ಚಲನ ಚಿತ್ರ ಬಿಡುಗಡೆ ಮಾಡದಂತೆ ಆಗ್ರಹ : ರಜಪೂತ ಸೇವಾ ಸಮಿತಿಯಿಂದ ಮನವಿ
ಗೋಕಾಕ ನ 20 : ಸಂಜಯ ಲೀಲಾ ಬನ್ಸಾಲಿ ನಿರ್ದೇಶನದ “ಪದ್ಮಾವತಿ” ಚಲನ ಚಿತ್ರ ಬಿಡುಗಡೆ ಮಾಡದಂತೆ ತಾಲೂಕಿನ ಧುಪದಾಳ ಗ್ರಾಮದ ರಜಪೂತ ಸೇವಾ ಸಮಿತಿ ಹಾಗೂ ಶ್ರೀ ಮಹಾರಾಣಾ ಪ್ರತಾಪಸಿಂಹ ಯುವಕ ಮಂಡಳ ನೇತ್ರತ್ವದಲ್ಲಿ ಧುಪದಾಳ ಗ್ರಾಮದ ರಜಪೂತ ಸಮಾಜದ ಅಧ್ಯಕ್ಷರು ಹಾಗೂ ಸಮಾಜ ಭಾಂದವರು ಸೋಮವಾರದಂದು ತಹಶೀಲ್ದಾರ ಜಿ.ಎಸ್.ಮಳಗಿ ಅವರಿಗೆ ಮನವಿ ಸಲ್ಲಿಸಿದರು.
ರಾಣಿ ಪದ್ಮಾವತಿ ಅವರು 16 ಸಾವಿರ ಮಹಿಳೆಯರ ಜೊತೆ ಅಗ್ನಿ ಪ್ರವೇಶ (ಜೌಹಾರ) ಮಾಡಿದ್ದರು. ಗೌರವ ಉಳಿಸಿಕೊಳ್ಳಲು ಇಂತಹ ಅಭೂತ ಪೂರ್ವ ಧೈರ್ಯ ತೋರಿದ ಮಹಿಳೆಯ ಚರಿತ್ರೆಯನ್ನು ತಿರುಚುವುದನ್ನು ನಾವು ಸಹಿಸುದಿಲ್ಲ. ಕಾರಣ ಇತಿಹಾಸವನ್ನು ತಿರುಚಿ “ಪದ್ಮಾವತಿ” ಚಲನ ಚಿತ್ರವನ್ನು ನಿರ್ದೇಶನ ಮಾಡಿದ ಸಂಜಯ್ ಲೀಲಾ ಬನ್ಸಾಲಿಯನ್ನು ತಕ್ಷಣ ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಜಪೂತ ಸಮಾಜದ ಅಧ್ಯಕ್ಷ ಜಿ.ಎಸ್.ರಜಪೂತ, ರಾಜಶೇಖರ ರಜಪೂತ, ಕೆ.ಎ.ರಜಪೂತ, ಪಿ.ಎಸ್.ರಜಪೂತ, ಆನಂದಸಿಂಗ್ ರಜಪೂತ, ಆರ್.ಪಿ.ರಜಪೂತ, ನಾಗರಾಜ ರಜಪೂತ, ಪ್ರದೀಪ ರಜಪೂತ, ಪಿ.ಬಿ.ರಜಪೂತ, ಯು.ಆರ್.ರಜಪೂತ,ಎಂ.ಆರ್.ರಜಪೂತ,ಎಸ್.ಪಿ.ರಜಪೂತ, ಪ್ರಮೋದ ಜೋಶಿ ಸೇರಿದಂತೆ ರಜಪೂತ ಸೇವಾ ಸಮಿತಿ ಹಾಗೂ ಶ್ರೀ ಮಹಾರಾಣಾ ಪ್ರತಾಪಸಿಂಹ ಯುವಕ ಮಂಡಳದ ಪದಾಧಿಕಾರಿಗಳು ಹಾಗೂ ಸಮಾಜದ ಹಿರಿಯರು ಇದ್ದರು.