ಗೋಕಾಕ:ನಮ್ಮ ವ್ಯಕ್ತಿತ್ವ ಮತ್ತು ಸಂಸ್ಕಂತಿ ರೂಪಿಸಿದ ಭಾಷೆ ಕನ್ನಡ: ಎಸ್. ಎಮ್. ಪೀರಜಾದೆ
ನಮ್ಮ ವ್ಯಕ್ತಿತ್ವ ಮತ್ತು ಸಂಸ್ಕಂತಿ ರೂಪಿಸಿದ ಭಾಷೆ ಕನ್ನಡ: ಎಸ್. ಎಮ್. ಪೀರಜಾದೆ
ಗೋಕಾಕ ನ 20: ನಮ್ಮ ವ್ಯಕ್ತಿತ್ವ ಮತ್ತು ಸಂಸ್ಕಂತಿ ರೂಪಿಸಿದ್ದು ಮಾತೃ ಭಾಷೆ ಕನ್ನಡವಾಗಿದ್ದು ಕಾರಣ ಈ ನೆಲದ ಋಣ ತೀರಿಸುವ ಕೆಲಸ ನಮ್ಮಿಂದ ಆಗಬೇಕಾಗಿದೆ. ಕನ್ನಡದ ಏಕೀಕರಣ, ಸಾಹಿತ್ಯ ಮತ್ತು ಸಾಂಸ್ಕøತಿಕವಾಗಿ ದುಡಿದ ಈ ನಾಡಿನ ಮಹನೀಯರನ್ನು ಸ್ಮರಿಸುವ ಕೆಲಸ ನಡೆಯಬೇಕಾಗಿದೆ ಎಂದು ಅಬುಲ್ ಕಲಾಂ ಕಾಲೇಜಿನ ಉಪನ್ಯಾಸಕರಾದ ಎಸ್. ಎಮ್. ಪೀರಜಾದೆ ಹೇಳಿದರು.
ಅವರು ಗೋಕಾಕದ ಸತೀಶ ಶುಗರ್ಸ್ ಅಕಾಡೆಮಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ತಾಲೂಕಾ ಸಿರಿಗನ್ನಡ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಜರುಗಿದ ಉಪನ್ಯಾಸಕ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅಭಿಪ್ರಾಯಪಟ್ಟರು
“ಕನ್ನಡ ಕಾವಲು ಸಮೀತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಶಾಸ್ತ್ರೀಯ ಸ್ಥಾನಮಾನ ದೊರೆತಾಗ್ಯೂ ಕೂಡ ಕನ್ನಡ ಸಂಪೂರ್ಣ ಆಡಳಿತ ಭಾಷೆಯಾಗಿ ಇನ್ನೂ ಪ್ರಾಮಾಣಿಕವಾಗಿ ಜಾರಿಯಾಗದೆ ಇರುವುದು ನೋವಿನ ಸಂಗತಿಯಾಗಿದ್ದು ಸರಕಾರ ಈ ನಿಟ್ಟಿನಲ್ಲಿ ದೃಢ ನಿರ್ಧಾರ ಕೈಗೊಳ್ಳುವುದು ಅವಶ್ಯಕವಾಗಿದೆ.” ಎಂದು ಅಭಿಪ್ರಾಯಪಟ್ಟರು.
ಸಿದ್ದಾರ್ಥ ಲಲಿತ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಜಯಾನಂದ ಮಾದರ ಮಾತನಾಡುತ್ತಾ – “ಭಾರತದ ಸಂಸ್ಕಂತಿ ಅಭಿವೃದ್ಧಿಯಲ್ಲಿ ಕರ್ನಾಟಕದ ಪಾತ್ರ ಮಹತ್ತರವಾಗಿದ್ದು ಸಾಹಿತ್ಯಿಕ, ಧಾರ್ಮಿಕ ಹಾಗೂ ಐತಿಹಾಸಿಕವಾಗಿ ಅನೇಕ ಕನ್ನಡಿಗರು ಈ ನಾಡನ್ನು ಶ್ರೀಮಂತಗೊಳಿಸಿದ್ದಾರೆ ಎಂದು ವಿವರಿಸಿ ವರ್ಣಿಸಿದರು.”
ಸತೀಶ ಶುಗರ್ಸ್ ಅಕಾಡೆಮಿಯ ಆಡಳಿತಾಧಿಕಾರಿಗಳಾದ ಪ್ರೋ. ಆರ್. ಎಸ್. ಡುಮ್ಮಗೋಳ ಕಾರ್ಯಕ್ರಮ ಉದ್ಘಾಟಿಸಿ – “ಕನ್ನಡಪರವಾದ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಸಿರಿಗನ್ನಡ ವೇದಿಕೆಯ ಪಾತ್ರ ಮಹತ್ತರವಾಗಿದ್ದು ಕನ್ನಡ ನುಡಿ ಜಾಗೃತಗೊಳಿಸುವ ನಿಟ್ಟಿನಲ್ಲಿ ಶ್ರಮಿಸಲಿ.” ಎಂದು ಹಾರೈಸಿದರು.
ಗಾಂಧಿ ಅಕಾಡೆಮಿ ಸಂಸ್ಥಾಪಕರಾದ ಎಮ್. ಐ. ಜೋತಾವರ ಪ್ರಾಸ್ತಾವಿಕವಾಗಿ ಮಾತನಾಡುತ್ತಾ “ಕನ್ನಡ ಭಾಷೆ ಜೀವ ಭಾಷೆಯಾಗಿದ್ದು ಅದನ್ನು ಪ್ರೀತಿಸೋಣ ಹಾಗೂ ಇನ್ನುಳಿದ ಭಾಷೆಗಳನ್ನು ಗೌರವಿಸೋಣ.” ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕಾ ಸಿರಿಗನ್ನಡ ವೇದಿಕೆಯ ಅಧ್ಯಕ್ಷರಾದ ಈಶ್ವರ ಮಮದಾಪೂರ ಮಾತನಾಡುತ್ತಾ – “ ಪಾಶ್ಚಿಮಾತ್ಯೀಕರಣ ಹಾಗೂ ಜಾಗತೀಕರಣದ ಪ್ರಭಾವದಿಂದ ಧಕ್ಕೆಯಾಗುತ್ತಿದ್ದು ಕಾರಣ ನಮ್ಮ ತಾಯಿ ಭಾಷೆಯಾದ ಕನ್ನಡದ ಸಂಸ್ಕøತಿ ಮತ್ತು ಕನ್ನಡ ಪ್ರಜ್ಞೆಯನ್ನು ಉಳಿಸಿಕೊಳ್ಳುವ ಹಾಗೂ ಬೆಳೆಸುವ ಅವಶ್ಯಕತೆ ಕನ್ನಡದ ಮನಸ್ಸುಗಳ ಮೇಲೆ ಇದೆ. ಅಲ್ಲದೇ ನಾಡಿನ ಸಾಹಿತ್ಯ ಮತ್ತು ಸಾಂಸ್ಕøತಿಕ ಲೋಕಕ್ಕೆ ಗೋಕಾವಿ ನಾಡಿನ ಕೊಡುಗೆ ಅಪಾರವಾಗಿದ್ದು ಜೊತೆಗೆ ಕನ್ನಡ ನಾಡನ್ನು ಕಟ್ಟಲು ಶ್ರಮಿಸಿದ ನಾಡಿನ ಹಿರಿಯರನ್ನು ವಿದ್ಯಾರ್ಥಿಗಳಿಗೆ ಪರಿಚಿಯಿಸುವ ಕೆಲಸ ಇಂದು ನಡೆಯಬೇಕಾಗಿದೆ.” ಎಂದರು.
ಮುಖ್ಯ ಅತಿಥಿಗಳಾಗಿ ಸತೀಶ ಶುಗರ್ಸ ಅಕಾಡೆಮಿ ವಿದ್ಯಾಲಯದ ಪ್ರಾಚಾರ್ಯ ಟಿ. ಬಿ. ತಳವಾರ, ಜ್ಯೋತಿ ಕುರೇರ, ಪ್ರೇಮಾ ಜಕ್ಕನ್ನವರ, ಸುಮಾ ಮದಿಹಳ್ಳಿ, ಮಹಾನಂದಾ ಹೊಸಮನಿ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಕುಮಾರಿ ರೂಪಾ ಪಾಟೀಲರಿಂದ ಪ್ರಾರ್ಥನೆ ಮತ್ತು ಜ್ಯೋತಿ ಕುರೇರ ಹಾಗೂ ಸಂಗಡಿಗರಿಂದ ಜಯಭಾರತ ಜನನೀಯ ತನುಜಾತೆ ನಾಡಗೀತೆ ಪ್ರಸ್ತುತಪಡಿಸಲಾಯಿತು.
ಇದೇ ಸಂದರ್ಭದಲ್ಲಿ ಜ್ಯೋತಿ ಕುರೇರ, ಪ್ರೇಮಾ ಜಕ್ಕನ್ನವರ ಹಾಗೂ ಸಂಗಡಿಗರು ಕುವೆಂಪು ಮತ್ತು ಕೆ. ನಿಸಾರಅಹ್ಮದ ರಚಿತ ಕವನಗಳನ್ನು ಸುಶ್ರಾವ್ಯವಾಗಿ ಹಾಡಿ ಗಮನ ಸೆಳೆದರು.
ಉಪನ್ಯಾಸಕಿ ವ್ಹಿ. ಎಸ್. ರೆಡ್ಡಿ ಕಾರ್ಯಕ್ರಮ ನಿರೂಪಿಸಿದರು ಪ್ರೋ. ಎಸ್. ಎಂ. ಗುತ್ತಿ ಸ್ವಾಗತ ಮತ್ತು ಪರಿಚಯ ನಿರ್ವಹಿಸಿದರು ಪ್ರೋ. ಡಿ. ಎಸ್. ಹುಗ್ಗಿ ವಂದಿಸಿದರು.