RNI NO. KARKAN/2006/27779|Wednesday, December 25, 2024
You are here: Home » breaking news » ಮೂಡಲಗಿ:ಶಾಸಕ ಬಾಲಚಂದ್ರ ಮಾರ್ಗದರ್ಶನದಲ್ಲಿ ಸರ್ವಾಂಗೀಣ ಅಭಿವೃದ್ದಿ ಕೈಕೊಳ್ಳಲಾಗುತ್ತಿದೆ : ಕಮಲವ್ವಾ ಹಳಬರ

ಮೂಡಲಗಿ:ಶಾಸಕ ಬಾಲಚಂದ್ರ ಮಾರ್ಗದರ್ಶನದಲ್ಲಿ ಸರ್ವಾಂಗೀಣ ಅಭಿವೃದ್ದಿ ಕೈಕೊಳ್ಳಲಾಗುತ್ತಿದೆ : ಕಮಲವ್ವಾ ಹಳಬರ 

ಶಾಸಕ ಬಾಲಚಂದ್ರ ಮಾರ್ಗದರ್ಶನದಲ್ಲಿ ಸರ್ವಾಂಗೀಣ ಅಭಿವೃದ್ದಿ ಕೈಕೊಳ್ಳಲಾಗುತ್ತಿದೆ : ಕಮಲವ್ವಾ ಹಳಬರ
ಮೂಡಲಗಿ ನ 22: ಮೂಡಲಗಿ ಪುರಸಭೆಯ 9ನೇ ವಾರ್ಡಿನಲ್ಲಿ ಎಸ್.ಟಿ.ಪಿ.ಯೋಜನೆಯಲ್ಲಿ ಸಿ.ಸಿ ರಸ್ತೆ ಹಾಗೂ ಗಟಾರ ನಿರ್ಮಾಣಕ್ಕೆ ಬುಧವಾರದಂದು ಪುರಸಭೆ ಉಪಾಧ್ಯಕ್ಷ ರವೀಂದ್ರ ಸೋನವಾಲ್ಕರ ಚಾಲನೆ ನೀಡಿದರು.

ಪುರಸಭೆ ಅಧ್ಯಕ್ಷೆ ಕಮಲವ್ವಾ ಹಳಬರ ಮಾತನಾಡಿ, ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಸರ್ವಾಂಗೀಣ ಅಭೀವೃದ್ದಿ ಕೈಕೊಳ್ಳಲಾಗುತ್ತಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಬಿ.ಬಿ.ಗೋರೋಶಿ ಮಾತನಾಡಿ, ಈ ಕಾಮಗಾರಿಯು ಸುಮಾರು 7ಲಕ್ಷ ರೂ ಗಳಲ್ಲಿ ಸಿ.ಸಿ ರಸ್ತೆ ಹಾಗೂ ಗಟಾರ ನಿರ್ಮಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಲಕ್ಷ್ಮವ್ವಾ ಶೆಕ್ಕಿ, ರಾಮಣ್ಣ ಹಂದಿಗುಂದ, ಪ್ರಕಾಶ ಈರಪ್ಪನವರ, ಈರಪ್ಪ ಬನ್ನೂರ, ಹುಸೇನ ಶೇಖ, ರಮೇಶ ಸಣ್ಣಕ್ಕಿ, ಡಾ.ಎಸ್.ಎಸ್.ಪಾಟೀಲ, ಡಿಎಸ್‍ಎಸ್ ಮುಖಂಡರಾದ ಶಾಬು ಸಣ್ಣಕ್ಕಿ, ಸುರೇಶ ಸಣ್ಣಕ್ಕಿ ಮಹಾದೇವ ಶೆಕ್ಕಿ, ನಂಜುಂಡಿ ಸರ್ವಿ, ಶಿವಾನಂದ ಹಳಬರ, ಚಾಂದ ದೇಸಾಯಿ ಉಪಸ್ಥಿತರಿದ್ದರು.

Related posts: