RNI NO. KARKAN/2006/27779|Friday, December 13, 2024
You are here: Home » breaking news » ಚಿಕ್ಕೋಡಿ:ಬೈಕ್ ಮುಖಾಮುಖಿ ಡಿಕ್ಕಿ : ವ್ಯಕ್ತಿಯೋರ್ವ ಸ್ಥಳದಲ್ಲಿ ಸಾವು

ಚಿಕ್ಕೋಡಿ:ಬೈಕ್ ಮುಖಾಮುಖಿ ಡಿಕ್ಕಿ : ವ್ಯಕ್ತಿಯೋರ್ವ ಸ್ಥಳದಲ್ಲಿ ಸಾವು 

ಬೈಕ್ ಮುಖಾಮುಖಿ ಡಿಕ್ಕಿ : ವ್ಯಕ್ತಿಯೋರ್ವ ಸ್ಥಳದಲ್ಲಿ ಸಾವು
ಚಿಕ್ಕೋಡಿ ನ 26: ಎರೆಡು ಬೈಕಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಬಳಿ ಇರುವ ಗೋಟುರ-ಜೀವರ್ಗಿರಸ್ತೆ ಬಳಿ ಘಟನೆ ನಡೆದಿದೆ. 
ಉಮರಾಣಿ ಗ್ರಾಮದ  ಕುಮಾರ ಲಗಮಣ್ಣಾ ಪೂಜಾರಿ(22) ಮೃತ ದುರ್ದೈವಿ. ಗಾಯಾಳುವನ್ನು ನಿಡಸೋಸಿ ಗ್ರಾಮದ  ಬಸವರಾಜ ಸನದಿ ಎಂದು ಗುರುತಿಸಲಾಗಿದ್ದು. ಈತನ ಸ್ಥಿತಿ ಚಿಂತಾಜನಕವಾಗಿದೆ ಹೆಚ್ಚಿನ ಚಿಕಿತ್ಸೆಗಾಗಿ  ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಕುರಿತು ಚಿಕ್ಕೋಡಿ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts: