RNI NO. KARKAN/2006/27779|Saturday, October 19, 2024
You are here: Home » breaking news » ಘಟಪ್ರಭಾ:ಅಧ್ಯಕ್ಷೆಯಾಗಿ ಶ್ರೀಮತಿ ಪೂಜೇರಿ ಉಪಾಧ್ಯಕ್ಷೆಯಾಗಿ ಶ್ರೀಮತಿ ಚೌಕಶಿ ಅವಿರೋಧ ಆಯ್ಕೆ

ಘಟಪ್ರಭಾ:ಅಧ್ಯಕ್ಷೆಯಾಗಿ ಶ್ರೀಮತಿ ಪೂಜೇರಿ ಉಪಾಧ್ಯಕ್ಷೆಯಾಗಿ ಶ್ರೀಮತಿ ಚೌಕಶಿ ಅವಿರೋಧ ಆಯ್ಕೆ 

ಅಧ್ಯಕ್ಷೆಯಾಗಿ  ಶ್ರೀಮತಿ ಪೂಜೇರಿ ಉಪಾಧ್ಯಕ್ಷೆಯಾಗಿ ಶ್ರೀಮತಿ ಚೌಕಶಿ ಅವಿರೋಧ ಆಯ್ಕೆ

ಘಟಪ್ರಭಾ ಡಿ 8: ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿಯ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಶುಕ್ರವಾರದಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಸುಜಾತಾ ಸುರೇಶ ಪೂಜೇರಿ ಹಾಗೂ ಉಪಾಧ್ಯಕ್ಷೆಯಾಗಿ ಕಸ್ತೂರಿ ಕೆಂಪಣ್ಣ ಚೌಕಶಿ ಅವಿರೋಧವಾಗಿ ಆಯ್ಕೆಯಾದರು.
ಕಳೆದ ಕೆಲ ದಿನಗಳ ಹಿಂದೆ ಅಧ್ಯಕ್ಷೆ ಪಾರವ್ವ ಮೇತ್ರಿ ಹಾಗೂ ಉಪಾಧ್ಯಕ್ಷೆ ಮಾಲನ ದಳವಾಯಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಸಚಿವ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಈ ಅವಿರೋಧ ಆಯ್ಕೆ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಸುಜಾತಾ ಪೂಜೇರಿ ಉಪಾಧ್ಯಕ್ಷರ ಸ್ಥಾನಕ್ಕೆ ಕಸ್ತೂರಿ ಚೌಕಶಿ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಗೋಕಾಕ ತಹಶೀಲ್ದಾರ ಜಿ.ಎಸ್. ಮಾಳಗಿ ಅವರು ಅವಿರೋಧ ಆಯ್ಕೆಯಾಗಿದೆ ಎಂದು ಘೋಷಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಕಾಂತು ಯತ್ತಿನಮನಿ, ಮುಖಂಡರಾದ ಡಿ.ಎಂ.ದಳವಾಯಿ, ಸುಭಾಶ ಹುಕ್ಕೇರಿ, ಪಂ.ಪಂ ಸದಸ್ಯರಾದ ಸಲೀಮ ಕಬ್ಬೂರ, ಮಲ್ಲು ಕೋಳಿ, ವಿಕ್ರಮ ದಳವಾಯಿ, ರಾಮಪ್ಪ ನಾಯಿಕ, ನಾಗರಾಜ ಚಚಡಿ, ಸರಸ್ವತಿ ಕುಲಗೋಡ, ಇಮ್ರಾನ ಬಟಕುರ್ಕಿ, ಲಕ್ಷ್ಮೀ ತುಕ್ಕಾನಟ್ಟಿ, ಗಂಗಾಧರ ಬಡಕುಂದ್ರಿ, ಮಾರುತಿ ಹುಕ್ಕೇರಿ, ಪಾರವ್ವ ಮೇತ್ರಿ, ಮಾಲನ ದಳವಾಯಿ, ಶ್ರೀದೇವಿ ಕೋಗನೂರ, ಪ್ರವೀಣ ಮಟಗಾರ, ಈರಗೌಡ ಕಲಕುಟಗಿ, ಪ.ಪಂ ಮುಖ್ಯಾಧಿಕಾರಿ ಕೆ.ಬಿ.ಪಾಟೀಲ, ಗ್ರಾಮ ಲೆಕ್ಕಾಧಿಕಾರಿ ಎಂ.ಎಸ್.ಗಡಕರಿ ಸೇರಿದಂತೆ ಸರ್ವ ಸದಸ್ಯರು ಸಿಬ್ಬಂದಿ ವರ್ಗ ಇದ್ದರು.

Related posts: