ಗೋವಾ: ಗೋವಾ ರಾಜ್ಯದಲ್ಲಿರುವ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರು ಮುಂದಾಗಬೇಕು : ಬಸವರಾಜ ಖಾನಪ್ಪನವರ
ಗೋವಾ ರಾಜ್ಯದಲ್ಲಿರುವ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರು ಮುಂದಾಗಬೇಕು : ಬಸವರಾಜ ಖಾನಪ್ಪನವರ
ಗೋವಾ (ಬಿಚೋಲಿಯಂ) ಡಿ 10 : ಗೋವಾ ರಾಜ್ಯದಲ್ಲಿರುವ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರು ಮುಂದಾಗಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು
ಅವರು ರವಿವಾರದಂದು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಹುಬ್ಬಳ್ಳಿ , ಕರ್ಮಭೂಮಿ ಕನ್ನಡ ಸಂಘ , ಬಿಚೋಲಿಯಂ ಇವರ ಸಂಯುಕ್ತ ಆಶ್ರಯದಲ್ಲಿ ಗೋವಾದ ಬಿಚೋಲಿಯಂನ ಮುನಸಿಪಾಲಿಟಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ಕರ್ನಾಟಕ ಚುಟುಕು ಸಾಹಿತ್ಯ ಪ್ರಪ್ರಥಮ ಕನ್ನಡ- ಗೋವಾ ಸಾಮರಸ್ಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು .
ಕನ್ನಡ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿರುವುದರಿಂದ ಗೋವಾ ಸರಕಾರ ಕನ್ನಡ ಶಾಲೆಗಳನ್ನು ಮುಚ್ಚಲು ಮುಂದಾಗಿದೆ . ಅದನ್ನು ತಡೆಗಟ್ಟಲು ಪ್ರತಿಯೊಬ್ಬ ಗೋವಾ ಕನ್ನಡಿಗರು ಕ್ರಿಯಾಶೀಲರಾಗಬೇಕು.ಪ್ರತಿ ವರ್ಷ ಶಾಲಾ ಪ್ರಾರಂಭದಲ್ಲಿ ಗೋವಾದಲ್ಲಿ ನೇಲೆಸಿರುವ ಪ್ರತಿಯೊಬ್ಬರ ಮನೆಗಳಿಗೆ ಭೇಟಿ ನೀಡಿ ತಮ್ಮ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಕನ್ನಡ ಶಾಲೆಗಳಲ್ಲಿ ಶಿಕ್ಷಣ ಕೊಡುವಂತೆ ಜಾಗೃತಿ ಅಭಿಯಾನ ಮಾಡಿಸಲು ಕ್ರಮ ಕೈಗೊಳ್ಳಬೇಕು ಅದಕ್ಕಾಗಿ ಪ್ರತಿ ವರ್ಷ ಕರವೇಯು 8 ದಿನಗಳ ಕಾಲ ಗೋವಾ ರಾಜ್ಯದಲ್ಲಿ ವಾಸ್ತವ್ಯ ಹೂಡಿ ಅಭಿಯಾನ ಯಶ್ವಸಿಗೊಳಿಸಲು ಎಲ್ಲ ರೀತಿಯ ಸಹಾಯ ಸಹಕಾರ ನೀಡಲು ಸಿದ್ದವಿದೆ.
ರಾಜಕೀಯ ಇಚ್ಚಾಶಕ್ತಿ ಕೊರತೆಯಿಂದ ಗೋವಾ ಕನ್ನಡಿಗರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವುಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಗೋವಾ ಕನ್ನಡಿಗರೆಲ್ಲರೂ ಒಂದಾಗಿ ಒಮ್ಮತ ಅಭ್ಯರ್ಥಿಗಳನ್ನು ಗೋವಾ ವಿಧಾನಸಭೆಗೆ ಕಳುಹಿಸಲು ಫಣ ತೊಡಬೇಕಾಗಿದೆ , ರಾಜಕೀಯವಾಗಿ ಬಲಿಷ್ಟವಾದಾಗ ಮಾತ್ರ ಗೋವಾದಲ್ಲಿ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳನ್ನು ದೂರ ಮಾಡಲು ಸಾಧ್ಯ ಆ ನಿಟ್ಟಿನಲ್ಲಿ ಗೋವಾ ಕನ್ನಡಿಗರು ಒಂದಾಗಬೇಕೆಂದು ಖಾನಪ್ಪನವರ ಹೇಳಿದರು .
ಸಮಾವೇಶದ ದಿವ್ಯಸಾನಿದ್ಯ ವಹಿಸಿ ಮಾತನಾಡಿದ ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಗುರು ಶಾಂತೇಶ ಹಿರೇಮಠದ ಶ್ರೀ ಚಂದ್ರಶೇಖರ ಸ್ವಾಮಿಗಳು ಗೋವಾ ಕನ್ನಡಿಗರಿಗೆ ಪುನರವಸತಿ ಕಲ್ಪಿಸಿಕೊಡಲು ಕರ್ನಾಟಕ ಸರಕಾರ ಹೀಗಾಗಲ್ಲೇ ಎಲ್ಲ ಕ್ರಮಗಳನ್ನು ಕೈಗೊಂಡಿದೆ ಆದರೆ ಅದನ್ನು ತ್ವರಿತಗತಿಯಲ್ಲಿ ಪಡೆದುಕೊಳ್ಳಲು ಗೋವಾ ಕನ್ನಡಿಗರು ನಿರಂತರ ಪತ್ರ ಚಳುವಳಿ ಪ್ರಾರಂಭಿಸಿ ಕರ್ನಾಟಕ ಸರಕಾರವನ್ನು ಎಚ್ಚರಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಹೇಳಿದರು .
ಕಾರ್ಯಕ್ರಮದ ಸರ್ವಾಧ್ಯಕ್ಷತೆಯನ್ನು ಇಂಚಗೇರಿ ಮಠ ಬಾಗಲಕೋಟದ ಸ .ಸ. ಡಾ.ಎ ಸಿ. ವಾಲಿಮಹಾರಾಜರು ವಹಿಸಿದರು .
ಕಾರ್ಯಕ್ರಮವನ್ನು ಬಿಚೋಲಿಯಂ ಶಾಸಕ ರಾಜೇಶ ಪಾಟ್ನೇಕರ ಉದ್ಘಾಟಿಸಿದರು.
ವೇದಿಕೆಯಲ್ಲಿ ಮಾಜಿ ಶಾಸಕ ನರೇಶ ಸಾವಳ್ , ಪ್ರೊ, ಡಿ,ಡಿ, ಮುತಾಲಿಕ ದೇಸಾಯಿ , ಕೃಷ್ಣಮೂರ್ತಿ ಕುಲಕರ್ಣಿ, ಚನ್ನಬಸಪ್ಪ ಧಾರವಾಡಶೆಟ್ರು , ಕನ್ನಡ ಕರ್ಮಭೂಮಿ ಸಂಫದ ಅಧ್ಯಕ್ಷ ಶ್ರೀ ಹನುಮಂತ ಶಿರೂರ (ರೆಡ್ಡಿ) , ಸಿ .ಎಮ. ದರ್ಬಾರೆ, ಪ್ರೊ ವೀರನಗೌಡ ಮರಿಗೌಡ , ಕರವೇಯ ಸಾಧಿಕ ಹಲ್ಯಾಳ ,ಕೃಷ್ಣಾ ಖಾನಪ್ಪನವರ , ದೀಪಕ ಹಂಜಿ , ನಯೀಮ ಬೇಯೂರ ಸೇರಿದಂತೆ ಅನೇಕರು ಇದ್ದರು
ಕಾರ್ಯಕ್ರಮವನ್ನು ಧಾರವಾಡದ ಶ್ರೀಮತಿ ಪದ್ಮಜಾ ಉಮರ್ಜಿ ನಿರೂಪಿಸಿ ವಂದಿಸಿದರು.
ನಂತರ ಕನ್ನಡ -ಗೋವಾ ಸಾಮರಸ್ಯ ಎಂಬ ವಿಷಯದಡಿ ವಿಚಾರ ಗೋಷ್ಠಿ , ಮತ್ತು ಕವಿಗೋಷ್ಠಿ, ನಡೆಯಿತು.ಈ ಗೋಷ್ಠಿಗಳಲ್ಲಿ ಧಾರವಾಡ ಹುಬ್ಬಳ್ಳಿ ಕೊಪ್ಪಳಗಳಿಂದ ಅನೇಕ ಸಾಹಿತಿ ಮತ್ತು ಕವಿಗಳು ಭಾಗವಹಿಸಿದ್ದರು.
ಸಮ್ಮೇಳನದಲ್ಲಿ ಗೋವಾ ಕನ್ನಡಿಗರಿಗೆ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸುವವುದು , ಚುಟುಕು ಸಾಹಿತ್ಯ ಪರಿಷತ್ ಗೆ ಕಸಾಪ ಗೆ ನೀಡಿರುವ ಸ್ಥಾನ ಮಾನವನ್ನು ನೀಡಲು ಆಗ್ರಹಿಸುವುದು ಹಾಗೂ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದರೊಂದಿಗೆ ನಿರಂತರ ದಾಸೋಹ ನಡೆಸುತ್ತಿರುವ ಹುಕ್ಕೇರಿಯ ಚಂದ್ರಶೇಖರ್ ಶಿವಾಚಾರ್ಯ ಸ್ವಾಮಿಗಳಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೆಕೆಂಬ ಮೂರು ಮಹತ್ವದ ನಿರ್ಣಯವನ್ನು ಕೈಗೋಳಲಾಯಿತು