RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ನಾಡವಿರೋಧಿ ಶಾಸಕ ಸಂಜಯ ಪಾಟೀಲನನ್ನು ಬಿಜೆಪಿ ಪಕ್ಷದಿಂದ ವಜಾಗೊಳಿಸಿ : ಕರವೇ ಅಧ್ಯಕ್ಷ ಖಾನಪ್ಪನವರ ಆಗ್ರಹ

ಗೋಕಾಕ:ನಾಡವಿರೋಧಿ ಶಾಸಕ ಸಂಜಯ ಪಾಟೀಲನನ್ನು ಬಿಜೆಪಿ ಪಕ್ಷದಿಂದ ವಜಾಗೊಳಿಸಿ : ಕರವೇ ಅಧ್ಯಕ್ಷ ಖಾನಪ್ಪನವರ ಆಗ್ರಹ 

ನಾಡವಿರೋಧಿ ಶಾಸಕ ಸಂಜಯ ಪಾಟೀಲನನ್ನು ಬಿಜೆಪಿ ಪಕ್ಷದಿಂದ ವಜಾಗೊಳಿಸಿ : ಕರವೇ ಅಧ್ಯಕ್ಷ ಖಾನಪ್ಪನವರ ಆಗ್ರಹ

ಗೋಕಾಕ ಡಿ 11: ಕನ್ನಡಿಗರ ಜನಪ್ರತಿನಿಧಿಯಾಗಿ ಬೆಳಗಾವಿಯ ಬೆಳಗುಂದಿ ಗ್ರಾಮದಲ್ಲಿ ನಡೆದ ಮರಾಠಿ ಸಮ್ಮೇಳನದಲ್ಲಿ ಗಡಿ ವಿಚಾರ ಮರಾಠಿಗರ ಇಚ್ಚೆಯಂತೆ ಇತ್ಯರ್ಥಗೊಳ್ಳಲೆಂದು ಹೇಳಿಕೆ ನೀಡಿರುವ ನಾಡವಿರೋಧಿ ಶಾಸಕ ಸಂಜಯ ಪಾಟೀಲನನ್ನು ಬಿಜೆಪಿ ಪಕ್ಷದಿಂದ ವಜಾಗೊಳಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಅಧ್ಯಕ್ಷ ಬಸವರಾಜ ಖಾನಪ್ಪನವರ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮರಾಠಿಗರ ಮತ ಓಲೈಕೆಗಾಗಿ ರಾಷ್ಟ್ರೀಯ ಪಕ್ಷದಲ್ಲಿರುವ ರಾಜಕೀಯ ನಾಯಕರು ಕನ್ನಡ, ಕರ್ನಾಟಕವನ್ನು ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವುದು ನಾಚಿಕೆಗೇಡು ವಿಷಯ.
ಬರುವ ವಿಧಾನ ಸಭಾ ಚುನಾವಣೆಯಲ್ಲಿ ಒಂದೇ ಒಂದು ಕನ್ನಡಿಗರ ಮತ (ವೋಟ) ಇಂಥಹ ನಾಡ ವಿರೋಧಿಗಳಿಗೆ ಬಿಳ್ಳದಂತೆ ಪ್ರಚಾರಕೈಗೊಳ್ಳಲಾಗುವುದು. ಜಿಲ್ಲಾಡಳಿತ ಮತ್ತು ಪೊಲೀಸ ಇಲಾಖೆ ಸ್ವಯಂ ಪ್ರೇರಿತವಾಗಿ ಜಿಲ್ಲೆಯಲ್ಲಿ ಅಶಾಂತಿ ಹುಟ್ಟಿಸುವ ನಾಡ ವಿರೋಧಿಹೇಳಿಕೆ ನೀಡಿರುವ ಸಂಜಯ ಪಾಟೀಲರ ಮೇಲೆ ಪ್ರಕರಣ ದಾಖಲಿಸಗೊಂಡು ಅವರನ್ನು ಈ ಕೂಡಲೇ ಬಂಧಿಸಬೇಕೆಂದು ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಪೊಲೀಸ ಇಲಾಖೆಯನ್ನು ಆಗ್ರಹಿಸಿದ್ದಾರೆ.

Related posts: