RNI NO. KARKAN/2006/27779|Friday, November 8, 2024
You are here: Home » breaking news » ಗೋಕಾಕ:ಗೋಕಾಕ ಜಿಲ್ಲೆ – ಕೌಜಲಗಿ ತಾಲೂಕು ರಚನೆಯಾಗಲಿ: ಡಾ. ರಾಜೇಂದ್ರ ಸಣ್ಣಕ್ಕಿ

ಗೋಕಾಕ:ಗೋಕಾಕ ಜಿಲ್ಲೆ – ಕೌಜಲಗಿ ತಾಲೂಕು ರಚನೆಯಾಗಲಿ: ಡಾ. ರಾಜೇಂದ್ರ ಸಣ್ಣಕ್ಕಿ 

ಗೋಕಾಕ ಜಿಲ್ಲೆ – ಕೌಜಲಗಿ ತಾಲೂಕು ರಚನೆಯಾಗಲಿ: ಡಾ. ರಾಜೇಂದ್ರ ಸಣ್ಣಕ್ಕಿ

ಗೋಕಾಕ ಡಿ 15 : ಬೆಳಗಾವಿ ಜಿಲ್ಲೆಯ ಅತೀ ದೊಡ್ಡ ನಗರವಾದ ಗೋಕಾಕ ತಾಲೂಕನ್ನು ಜಿಲ್ಲೆಯನ್ನಾಗಿಸಬೇಕು. 1995 ರಲ್ಲಿ ಗೋಕಾಕ ಜಿಲ್ಲಾ ರಚನೆಗೆ ಆರಂಭಗೊಂಡ ಹೋರಾಟ ಇಂದಿಗೂ ಮುಂದುವರೆದಿದೆ. ಇದರ ಜೊತೆಗೆ ತಾಲೂಕಿನ ದೊಡ್ಡ ಪಟ್ಟಣವಾದ ಕೌಜಲಗಿಯು ತಾಲೂಕಿಗಾಗಿ 1973 ರಿಂದ ಹೋರಾಡುತ್ತಿದ್ದು ಸರಕಾರ ತಕ್ಷಣವೇ ಗೋಕಾಕನ್ನು ಜಿಲ್ಲೆಯಾಗಿ ಕೌಜಲಗಿಯನ್ನು ತಾಲೂಕಾಗಿಸಬೇಕೆಂದು ನಿಯೋಜಿತ ಕೌಜಲಗಿ ತಾಲೂಕು ಹೋರಾಟ ಚಾಲನಾ ಸಮಿತಿಯ ಅಧ್ಯಕ್ಷ ಮಹಾದೇವಪ್ಪ ಭೋವಿ, ಪ್ರಧಾನ ಕಾರ್ಯದರ್ಶಿ ಡಾ. ರಾಜೇಂದ್ರ ಸಣ್ಣಕ್ಕಿ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗೋಕಾಕ ವಕೀಲರ ಸಂಘದ ವತಿಯಿಂದ ಆರಂಭಗೊಂಡ ಜಿಲ್ಲಾ ಹೋರಾಟವು ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯಿತು. 1997 ರಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಜೆ.ಎಚ್.ಪಟೇಲರು ಗೋಕಾಕ ಮತ್ತು ಚಿಕ್ಕೋಡಿಯನ್ನು ನೂತನ ಜಿಲ್ಲೆಗಳೆಂದು ಘೋಷಿಸಿದರು. ಕಾರಾಣಾಂತರದಿಂದ ರದ್ದಾದವು. ಅದಕ್ಕೆ ಜಾರಕಿಹೊಳಿ ಕುಟುಂಬದ ವಿರೋಧವಿದೆ ಎಂದು ಅಪಪ್ರಚಾರವನ್ನು ಮಾಡಲಾಯಿತು. ಈಗ ಗೋಕಾಕ ಜಿಲ್ಲೆಯಾಗಿಸಲು ಶೂನ್ಯ ಸಂಪಾದನಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ಮತ್ತು ಜಾರಕಿಹೊಳಿ ಕುಟುಂಬದವರೇ ಮುಂದಾಗಿದ್ದಾರೆ. ಆದುದರಿಂದ ರಾಜ್ಯದ ಅತೀ ದೊಡ್ಡ ಜಿಲ್ಲೆ ಬೆಳಗಾವಿಯನ್ನು ವಿಭಜಿಸಿದರೆ ಆಡಳಿತಾತ್ಮಕವಾಗಿ ಅನುಕೂಲವಾಗುತ್ತದೆ. ಚಿಕ್ಕ ಚಿಕ್ಕ ಜಿಲ್ಲೆ ಮತ್ತು ತಾಲೂಕುಗಳನ್ನು ರಚಿಸುವುದರಿಂದ ಅಭಿವೃದ್ಧಿ ಕಾರ್ಯಗಳು ಜರುಗುತ್ತವೆ. ಆದುದರಿಂದ ಗೋಕಾಕನ್ನು ನೂತನ ಜಿಲ್ಲೆಯಾಗಿಸಬೇಕು ಮತ್ತು ಗೋಕಾಕ ತಾಲೂಕಿನ ಮೂಡಲಗಿ ಪಟ್ಟಣವನ್ನು ಈಗಾಗಲೇ ತಾಲೂಕಾಗಿಸಲಾಗಿದೆ. ಅದರಂತೆ ಗೋಕಾಕ ತಾಲೂಕಿನ ಉಳಿದ 103 ಗ್ರಾಮಗಳಲ್ಲಿ 16 ಗ್ರಾಮಗಳು ಹಾಗೂ ರಾಮದುರ್ಗ ತಾಲೂಕಿನ 17 ಮತ್ತು ಸವದತ್ತಿ ತಾಲೂಕಿನ 13 ಗ್ರಾಮಗಳನ್ನೊಳಗೊಂಡ 41 ಗ್ರಾಮಗಳಿಗೆ ಕೇಂದ್ರಿಕೃತವಾಗಿ ಕೌಜಲಗಿಯನ್ನು ತಾಲೂಕಾಗಿಸಬೇಕು. ಕೌಜಲಗಿ, ಮೂಡಲಗಿ, ಗೋಕಾಕ, ರಾಮದುರ್ಗ ಮತ್ತು ಸವದತ್ತಿ ತಾಲೂಕುಗಳನ್ನೊಳಗೊಂಡ ಗೋಕಾಕನ್ನು ಜಿಲ್ಲೆಯಾಗಿಸಿ ಈ ಭಾಗದ ಸಾರ್ವಜನಿಕರಿಗೆ ಅನುಕೂಲವಾಗಿಸಬೇಕೆಂದು ಸರಕಾರವನ್ನು ಒತ್ತಾಯಿಸಿದ್ದಾರೆ.

Related posts: