RNI NO. KARKAN/2006/27779|Friday, December 13, 2024
You are here: Home » breaking news » ಘಟಪ್ರಭಾ:ಹುಣಶ್ಯಾಳ ಪಿಜಿ ಗ್ರಾಮ ಪಂಚಾಯತಿಯು ಇತರೇ ಗ್ರಾಮಗಳಿಗೆ ಮಾದರಿಯಾಗಿದೆ : ಮಾಜಿ ಸಚಿವ ಬಾಲಚಂದ್ರ

ಘಟಪ್ರಭಾ:ಹುಣಶ್ಯಾಳ ಪಿಜಿ ಗ್ರಾಮ ಪಂಚಾಯತಿಯು ಇತರೇ ಗ್ರಾಮಗಳಿಗೆ ಮಾದರಿಯಾಗಿದೆ : ಮಾಜಿ ಸಚಿವ ಬಾಲಚಂದ್ರ 

ಹುಣಶ್ಯಾಳ ಪಿಜಿ ಗ್ರಾಮ ಪಂಚಾಯತಿಯು ಇತರೇ ಗ್ರಾಮಗಳಿಗೆ ಮಾದರಿಯಾಗಿದೆ : ಮಾಜಿ ಸಚಿವ ಬಾಲಚಂದ್ರ

ಘಟಪ್ರಭಾ ಡಿ 17 : ಸರ್ಕಾರದ ವಿವಿಧ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಗ್ರಾಮದಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಕೈಗೊಂಡಿರುವ ಹುಣಶ್ಯಾಳ ಪಿಜಿ ಗ್ರಾಮ ಪಂಚಾಯತಿಯು ಇತರೇ ಗ್ರಾಮಗಳಿಗೆ ಮಾದರಿಯಾಗಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರಶಂಸಿಸಿದರು.
ಸಮೀಪದ ಹುಣಶ್ಯಾಳ ಪಿಜಿ ಗ್ರಾಮದಲ್ಲಿ ಭಾನುವಾರದಂದು 64 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹುಣಶ್ಯಾಳ ಪಿಜಿ ಗ್ರಾಮದಲ್ಲಿ ಭಾನುವಾರದಂದು 64 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನೆರವೇರಿಸಿ ಮಾತನಾಡುತ್ತಿರುವುದು.

ಇಲ್ಲಿಯ ಗ್ರಾಮ ಪಂಚಾಯತಿ ಸದಸ್ಯರು ಎಲ್ಲರೂ ಒಗ್ಗೂಡಿ ಸರ್ಕಾರದ ಕಾಮಗಾರಿಗಳನ್ನು ಸ್ವತಃ ಮುಂದೆ ನಿಂತು ಅನುಷ್ಠಾನ ಮಾಡುತ್ತಿರುವುದರಿಂದ ಗುಣಮಟ್ಟದ ಕೆಲಸ ನಡೆದಿದೆ. ಗ್ರಾಮದ ಪ್ರಗತಿಪರ ಕಾರ್ಯಗಳು ನಮ್ಮ ಕ್ಷೇತ್ರದಲ್ಲಿಯೇ ಮಾದರಿಯಾಗಿದೆ. ಇತರೇ ಗ್ರಾಮಗಳು ಈ ಪಂಚಾಯತಿಯ ಕಾಮಗಾರಿಗಳನ್ನು ನೋಡಿ ಕಲಿಯಬೇಕಾಗಿದೆ ಎಂದು ಮುಕ್ತ ಕಂಠದಿಂದ ಶ್ಲಾಘಿಸಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹುಣಶ್ಯಾಳ ಪಿಜಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಹುಣಶ್ಯಾಳ ಪಿಜಿ ಗ್ರಾಮಸ್ಥರ ಬೇಡಿಕೆಗಳಿಗೆ ಹಂತ ಹಂತವಾಗಿ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕಾಲೇಜು, ಪಶು ಹಾಗೂ ಸರ್ಕಾರಿ ಆಸ್ಪತ್ರೆ ಸೇರಿದಂತೆ ಗ್ರಾಮಸ್ಥರ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದರು. ಗ್ರಾಮಾಭಿವೃದ್ಧಿಗೆ ಯುವಕರು ಟೊಂಕಕಟ್ಟಿ ಸಮಾಜದ ಅಭಿವೃದ್ಧಿಗೆ ಶ್ರಮಿಸುವಂತೆಯೂ ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜನರು.

ಸ್ಥಳೀಯ ನಿಜಗುಣ ದೇವರು ಸಾನಿಧ್ಯವಹಿಸಿ ಮಾತನಾಡುತ್ತ, ಬಾಲಚಂದ್ರ ಜಾರಕಿಹೊಳಿ ಅವರು ಕಾಮಧೇನು-ಕಲ್ಪವೃಕ್ಷವಿದ್ದಂತೆ. ಇಂತಹ ಶಾಸಕರನ್ನು ಪಡೆದಿರುವುದು ಅರಭಾವಿ ಕ್ಷೇತ್ರದ ಮತದಾರರ ಭಾಗ್ಯ. ಗೋಕಾವಿ ನಾಡು ಕಂಡ ಅಪರೂಪದ ವ್ಯಕ್ತಿ. ಎಲ್ಲ ಮಠಾಧೀಶರ, ಮತದಾರರ ಪ್ರೀತಿ-ಒಲವುನ್ನು ಗಳಿಸಿಕೊಂಡಿರುವ ಇವರು ಸೋಲಿಲ್ಲದ ಸರದಾರರಾಗಿದ್ದಾರೆ ಎಂದು ಶಾಸಕರ ಜನಪ್ರೀಯ ಕಾರ್ಯಗಳನ್ನು ಶ್ಲಾಘಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ಸಿದ್ಧಲಿಂಗ ನಗರದಲ್ಲಿ 4 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಬಾಲಚಂದ್ರ ಬಸ್ ನಿಲ್ದಾಣ, 30 ಲಕ್ಷ ರೂ. ವೆಚ್ಚದಲ್ಲಿ ನಡೆದ ಫೆವರ್ ಬ್ರಿಗ್ಸ್ ಕಾಮಗಾರಿ, 30 ಲಕ್ಷ ರೂ. ವೆಚ್ಚದ ಹುಣಶ್ಯಾಳ ಪಿಜಿ-ವಡೇರಹಟ್ಟಿ ರಸ್ತೆಯ ಕಾಮಗಾರಿಗೆ ಗಡ್ಡಿತೋಟದಲ್ಲಿ ಗುದ್ದಲಿ ಪೂಜೆ ನೆರವೇರಿಸಿದರು. ಹುಣಶ್ಯಾಳ ಪಿಜಿಯಿಂದ ಹಡಗಿನಾಳ ಗ್ರಾಮದವರೆಗೆ ನಿರಂತರ ಜ್ಯೋತಿಗೆ ಚಾಲನೆ ನೀಡಿದರು.
ಗ್ರಾಪಂ ಅಧ್ಯಕ್ಷೆ ಯಮನವ್ವ ನಾಯಿಕ, ಉಪಾಧ್ಯಕ್ಷ ಜಗದೀಶ ಹುಕ್ಕೇರಿ, ಅವ್ವಣ್ಣಾ ಡಬ್ಬನವರ, ತಾಪಂ ಸದಸ್ಯರಾದ ಬಸವರಾಜ ಹುಕ್ಕೇರಿ, ಗೋಪಾಲ ಕುದರಿ, ಪುಂಡಲೀಕ ಸುಂಕದ, ನಿಜಾಮಸಾಬ ಜಮಾದಾರ, ಮುತ್ತೆಪ್ಪ ಕುಳ್ಳೂರ, ಬಾಳಪ್ಪ ನೇಸರಗಿ, ಚನಗೌಡ ಪಾಟೀಲ, ಶಿವನಗೌಡ ಪಾಟೀಲ, ಎಚ್.ಡಿ. ಮುಲ್ಲಾ, ಗುರುನಾಥ ಅಥಣಿ, ಬಾಳಪ್ಪ ಕಟಕಟಿ, ಶಬ್ಬೀರ ತಾಂಬಿಟಗಾರ, ಬಸು ಕಾಡಾಪೂರ, ನಿಜಾಮ ನದಾಫ, ಕಲಗೌಡ ಪಾಟೀಲ, ಬಸವಂತ ಕಮತಿ, ಹನಮಂತ ತೇರದಾಳ, ಶಂಕರ ಇಂಚಲ, ಮಲೀಕ ಹುಣಶ್ಯಾಳ, ಮಹಾದೇವ ದಂಡಿನವರ, ಬಸಲಿಂಗ ಕೆಳಗಡೆ, ಶಂಕರಯ್ಯ ಗುಡಿ, ಅಜೀತ ಪಾಟೀಲ, ಮುಂತಾದವರು ಉಪಸ್ಥಿತರಿದ್ದರು.

Related posts: