RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ: ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಪೋಟೊ ಶೂಟಗೆ ಸಿನಿ ಟಚ್ ನೀಡುತ್ತಿರುವ ಗೋಕಾಕಿನ ಯಮಕನಮರಡಿ ಬ್ರದರ್ಸ

ಗೋಕಾಕ: ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಪೋಟೊ ಶೂಟಗೆ ಸಿನಿ ಟಚ್ ನೀಡುತ್ತಿರುವ ಗೋಕಾಕಿನ ಯಮಕನಮರಡಿ ಬ್ರದರ್ಸ 

 ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಪೋಟೊ ಶೂಟಗೆ ಸಿನಿ ಟಚ್     ನೀಡುತ್ತಿರುವ ಗೋಕಾಕಿನ ಯಮಕನಮರಡಿ ಬ್ರದರ್ಸ

ವಿಶೇಷ ಲೇಖನ : ಸಾಧಿಕ ಎಮ್. ಹಲ್ಯಾಳ,  (ಸಂಪಾದಕರು) 

ಮದುವೆ ಸಮಾರಂಭದಲ್ಲಿ ಪೋಟೊಗಳಿಗೆ ಗಂಭೀರವಾಗಿ ಪೋಸ್ ನೀಡುವ ದಂಪತಿಗಳ ಚಿತ್ರಗಳು ಇರುವ ಪೋಟೊಗಳು ಇಂದು ತೆರೆ ಮರೆಗೆ ಸರೆದಿವೆ. ಆಧುನಿಕ ತಂತ್ರಜ್ಞಾನದ ಯುಗದ ಸೆಳುವಿಗೆ ಸಿಲುಕಿದಂತೆ ಪ್ರಸ್ತುತ ಎಲ್ಲವು ಬದಲಾಗಿದೆ. ಇದಕ್ಕೆ ಪೋಟೊಗ್ರಾಫಿ ವೃತ್ತಿಯೂ ಕೂಡಾ ಹೊರತಾಗಿಲ್ಲ. ಮದುವೆ ಸಂದರ್ಭದ ಪೋಟೊಗಳು ಮತ್ತು ಹನಿಮೂನಿಗೆ ತೆರಳಿದ ಸಂದರ್ಭಗಳಲ್ಲಿ ತಗೆದ ಪೋಟೊಗಳನ್ನು ನೋಡಿದ್ದೇವೆ. ಆದರೆ ಇದೀಗ ಎಲ್ಲವೂ ಬದಲಾಗಿದೆ ಯುವಜನತೆ ಮದುವೆಗಿಂತಲೂ ಮೊದಲು ತಮ್ಮ ಭಾವಿ ಸಂಗಾತಿಯೊಡನೆ ಪೋಟೊ ತಗೆಸಿಕೊಳ್ಳುವ ಕ್ರೇಜ್ ಹೆಚ್ಚುತ್ತಿದೆ. ಅದುವೆ ಪ್ರೀ, ವೆಡ್ಡಿಂಗ್ ಶೂಟ್, ಮದುವೆ ಆದ ನಂತರ ಎಲ್ಲಾ ಶಾಸ್ತ್ರೋತ ಮುಗಿಸಿ ಅತ್ಯಂತ ಹಾಯಾಗಿ ಪೋಟೊಗಳಿಗೆ ಪೋಸ್ ನೀಡಿ ಅವೀಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗುವುದೇ ಪೋಸ್ಟ್ ವೆಡ್ಡಿಂಗ್ ಶೂಟ. 
ಸೊಷಿಯಲ್ ಮಿಡಿಯಾ ಪ್ರೀಯರಾದ ಈಗಿನ ಯಂಗಸ್ಟರ್ಸ್‍ಗೆ ಇಂತ ಪ್ರೀ, ವೆಡ್ಡಿಂಗ್ ಮತ್ತು ಪೋಸ್ಟ್ ವೆಡ್ಡಿಂಗ್ ಶೂಟ್‍ಗಳು ಬೇಕೆ ಬೇಕು. ತಾವು ತಮ್ಮ ಬಾಳಸಂಗಾತಿಯನ್ನು ಎಷ್ಟು ಪ್ರೀತಿಸುತ್ತೇವೆ ಎಂದು ಸಮಾಜಕ್ಕೆ ತೋರಿಸಲು ಇಂತಹ ಪೋಟೊ ತಗೆಸಿಕೊಂಡು ಸಾಮಾಜಿಕ ಜಾಲತಾಣಗಳಿಗೆ ಅಪಲೋಡ್ ಮಾಡುತ್ತಾರೆ. ಅಲ್ಲದೇ ವೆಡ್ಡಿಂಗ್ ಕಾರ್ಡ ಮತ್ತು ವೆಡ್ಡಿಂಗ್ ಪೋಸ್ಟಗಳಲ್ಲಿ ಇಂತಹ ಪ್ರೀ, ವೆಡ್ಡಿಂಗ್‍ಗಳದೆ ಕಾರಬಾರು. ಮದುವೆ ಹಾಲಗಳಲ್ಲಿಯೂ ಸಹ ಪ್ರೀ, ವೆಡ್ಡಿಂಗ್ ಪೋಟೊಗಳನ್ನು ಸ್ಕ್ರೀನಿಂಗ್ ಮಾಡಲಾಗುತ್ತದೆ.
ಈ ಎಲ್ಲ ಬದಲಾವಣೆಗಳನ್ನು ಕಂಡ ಗೋಕಾಕಿನ ಪೋಟೊಗ್ರಾಫರ್ ಎಲ್.ಡಿ.ಎಸ್.ಪೋಟೊ ಸ್ಟುಡಿಯೋ ಮಾಲಿಕ ಗುರುರಾಜ, ಚಂದ್ರಶೇಖರ ಯಮಕನಮರಡಿ ಕಳೆದು ಸುಮಾರು 2 ವರ್ಷಗಳಿಂದ ಪ್ರೀ ಮತ್ತು ಪೋಸ್ಟ ವೆಡ್ಡಿಂಗ್‍ಗಳಿಗೆ ಹೆಚ್ಚಿನ ಆಧ್ಯತೆ ನೀಡಿ ತನ್ನ ಪೋಟೊಗ್ರಾಫಿ ಕಮಾಲನಿಂದ ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿಯನ್ನು ಸಾಧಿಸಿದ್ದಾರೆ.
ಮದುವೆ ಪೋಟೊಗಳಿಗೆ ಹೊಸ ಲುಕ್ : 
ಎಲ್ಲ ವಿಧಿ ವಿಧಾನ ಮತ್ತು ಸಂಪ್ರದಾಯದಂತೆ ನಡೆಯುವ ಮದುವೆಗಳಲ್ಲಿ ಎಲ್ಲವೂ ಮತ್ತು ಎಲ್ಲರೂ ಇರುತ್ತಾರೆ. ಈ ಎಲ್ಲಾ ಕ್ಷಣಗಳನ್ನು ಶೂಟ್ ಮಾಡಲಾಗಿರುತ್ತೆ. ಆದರೆ ಸಮತಿಂಗ್ ಚೇಂಜ ಇರಬೇಕು ಎಂದು ಎಲ್ಲ ವಧು-ವರರು ಭಾವಿಸಿರುತ್ತಾರೆ. ಭಾರವಾದ ಮದುವೆಯ ಉಡುಗೆಗಳನ್ನು ತೊಟ್ಟು ಪೂಜಾ ವಿಧಿ-ವಿಧಾನಗಳಲ್ಲಿ ಭಾಗಿಯಾಗಿ ಸುಸ್ತಾಗಿರುವ ವಧು-ವರರು ಪೋಟೊಗಳಿಗೆ ಭಾವನಾತ್ಮಕ ಪೋಸ್‍ಗಳನ್ನು ನೀಡುವುದು ಕಷ್ಟಸಾಧ್ಯ. ನಗುವ ಪೋಟೊಗಳಿಗೆ ಫ್ರೀಯಾಗಿ ಪೋಸ್ ನೀಡುವ ಮನಸಿದ್ದರೂ ಸಹ ನೀಡಲಾರದ ಅನೀವಾರ್ಯತೆ. ಗಂಭೀರವಾಗಿ ಪೋಸ್ ಕೊಡುವ ಪೋಟೊಗಳು ಅಷ್ಟಾಗಿ ಯಾರು ಇಷ್ಟ ಪಡುವುದಿಲ್ಲ ಇದರ ಬದಲಾಗಿ ತಾವು ಮದುವೆಯ ಮುಂಚೆ ಸಂಗಾತಿಯೊಡನೆ ಕಳೆದ ಕ್ಷಣಗಳನ್ನು ಮತ್ತು ಮದುವೆಯ ನಂತರ ಫ್ರೀಯಾಗಿ ಕಳೆಯುವ ಮಧುರ ಕ್ಷಣಗಳನ್ನು ನೆನಪಿಸುವ ಪೋಟೊಗಳನ್ನು ವಧು-ವರರು ಇಷ್ಟಪಡುತ್ತಿದ್ದಾರೆ. ಇದರಿಂದ ಮದುವೆ ಪೋಟೋಗಳಲ್ಲಿ ಹೋಸ ಲುಕ್ ಹುಟ್ಟಿಕೊಂಡಿದೆ.

ಫ್ರೀ ಮತ್ತು ಪೋಸ್ಟ್ ವೆಡ್ಡಿಂಗನ ವಿವಿಧ ಭಂಗಿಯ ಪೋಟೊಗಳು

 

ಸಿನಿಟಚ್ : 

ಈಗ ನಡೆದಿರುವ ಟ್ರೆಂಡ್ ಈ ಪ್ರೀ, ವೆಡ್ಡಿಂಗ್ ಮತ್ತು ಪೋಸ್ಟ್ ವೆಡ್ಡಿಂಗ್ ಶೂಟಗಳು ಕೂಡಾ ಯಾವುದೇ ಸಿನೆಮಾ ಸ್ಟೈಲ್‍ಗಳಿಗಿಂತ ಕಡಿಮೆಯಾಗಿರುವುದಿಲ್ಲ. ಇದರಲ್ಲಿ ಭಾವಿ ದಂಪತಿಗಳು ಮತ್ತು ನವ ದಂಪತಿಗಳು ತಮ್ಮ ಇಷ್ಟವಾಗುವ ಅಥವಾ ಪೋಟೊಗ್ರಾಫರ ನಿಗಧಿಪಡಿಸುವ ಯಾವುದಾದರೂ ಸುಂದರ ಸ್ಥಳದಲ್ಲಿ ತಮಗೆ ಇಷ್ಟವಾಗುವ ರೀತಿಯಲ್ಲಿ ಪೋಟೊಗೆ ಪೋಸ್ ನೀಡುತ್ತಾರೆ. ನದಿ ದಡದಲ್ಲಿ ಒಬ್ಬರ ಕಣ್ಣುಗಳು ಒಬ್ಬರನ್ನು ನೋಡುತ್ತಾ ಕೈ-ಕೈ ಮಿಲಾಯಿಸಿಕೊಂಡು, ಬೀಚಗಳ ಮರಳು ರಾಶಿಯಲ್ಲಿ ಗಾಳಿಯಲ್ಲಿ ಮುತ್ತಿಕ್ಕುವ, ನೆಲದಿಂದ ಜಿಗಿಯುವ, ಉದ್ಯಾನವನದಲ್ಲಿ ಸಂಗಾತಿಯನ್ನು ಬಾಹುಗಳಲ್ಲಿ ಅಲಂಗಿಸಿಕೊಳ್ಳುವ, ಪ್ರಪೋಸ್ ಮಾಡುವ ಉಧ್ಯಾನದಲ್ಲ್ಲಿ ಕುಳಿತು ಪ್ರಣಯಪಕ್ಷಿಗಳಂತೆ ಪೋಸ್ ಕೊಟ್ಟು ಪೋಟೊ ತೆಗೆಸಿಕೊಳ್ಳುವ ಟ್ರೆಂಡ್ ಈಗಿನದು. ಇದಕ್ಕೆ ಗೋಕಾಕಿನ ಗುರು ಯಮಕನಮರಡಿ ಅವರು ಸಿನಿಟಚ್ ನೀಡಿ ಅದ್ಭುತ ಪೋಟೊಗ್ರಾಫಿ ನಡೆಸುತ್ತಿದ್ದಾರೆ. ಸ್ಥಳೀಯವಾಗಿರುವ ಪ್ರವಾಸಿ ತಾಣಗಳನ್ನು ಅವಶ್ಯಕತೆಗೆ ತಕ್ಕಂತೆ ಬಳಸಿಕೊಂಡು ಸಿನಿಮಿಯ ರೀತಿಯಲ್ಲಿ ಸಂಗಾತಿಗಳಿಗೆ ಪೋಸ್ ನೀಡಲು ಹೇಳಿ ಸಖತ್ತಾಗಿ ಪೋಟೊ ಕ್ಲಿಕ್ಕಿಸುತ್ತಿದ್ದಾರೆ. ಇವರ ಫ್ರೀ, ವೆಡ್ಡಿಂಗ್ ಮತ್ತು ಪೋಸ್ಟ್ ವೆಡ್ಡಿಂಗ್ ಪೋಟೊಗ್ರಾಫಿಯನ್ನು ನೋಡಿ ಜಿಲ್ಲೆಯ, ರಾಜ್ಯದ ವಿವಿಧ ಭಾಗಗಳಿಂದ ಇವರಿಗೆ ಮದುವೆ ಅಹ್ವಾನಗಳು ಬರುತ್ತಿವೆ. ಹೀಗೆ ತಗೆದ ಪೋಟೊಗಳನ್ನು ಗುರು ಅವರು ಸಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಸಾಕಷ್ಟು ಜನಪ್ರೀತಿಯನ್ನು ಗಳಿಸುತ್ತಿದ್ದಾರೆ.
ಗ್ರಾಮೀಣ ಪ್ರದೇಶಗಳಿಗೆಯೂ ಲಗ್ಗೆ :

ಈ ಮೊದಲು ಕೆಲವರು ಮೆಟ್ರೋನಗರ ವಾಸಿಗಳಿಗೆ ಮಾತ್ರ ಸೀಮಿತವಾಗಿದ್ದ ಪ್ರೀ, ವೆಡ್ಡಿಂಗ್ ಮತ್ತು ಪೋಸ್ಟ್ ವೆಡ್ಡಿಂಗ್ ಶೂಟಗಳು ಗ್ರಾಮೀಣ ಪ್ರದೇಶಗಳಿಗೂ ಸಹ ಕಾಲಿಟ್ಟಿವೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಮೈಸೂರು, ಹುಬ್ಬಳ್ಳಿ, ಬೆಳಗಾವಿದಂತಹ ಜಿಲ್ಲೆಗಳ ಸಣ್ಣ ಊರುಗಳ ಪೋಟೊಗ್ರಾಫರಗಳಿಗೂ ಪ್ರೀ, ವೆಡ್ಡಿಂಗ್ ಮತ್ತು ಪೋಸ್ಟ್ ವೆಡ್ಡಿಂಗ್ ಶೂಟನ ಆರ್ಡರಗಳು ಬರುತ್ತಿವೆ. ಬೆಳಗಾವಿ ಜಿಲ್ಲೆಯಲ್ಲಿ ಮೊದಲಿಗನಾಗಿ ಎಲ್.ಡಿ.ಎಸ್.ಸ್ಟುಡಿಯೋ ಮಾಲೀಕರಾದ ಗುರು ಯಮಕನಮರಡಿ ಅವರು ಅತ್ಯಾಧುನಿಕ ತಂತ್ರಜ್ಞಾನವುಳ್ಳ ಪೋಟೋ ಕ್ಯಾಮರಾ, ಲೆನ್ಸ್, ವಿಡಿಯೋ ಕ್ಯಾಮರಾ, ಡ್ರೋನ್ ನಂತಹ ಉಪಕರಣಗಳ ಜೊತೆ ಲೈಟಿಂಗ್ ಕ್ಯಾಮರಾ ಟ್ರೈಪ್ಯಾಡ್ ಪ್ಲ್ಯಾಶಗಳನ್ನು ಬಳಸಿ ಪ್ರೀ, ವೆಡ್ಡಿಂಗ್ ಮತ್ತು ಪೋಸ್ಟ್ ವೆಡ್ಡಿಂಗ್ ಪೋಟೊಗ್ರಾಫಿಯನ್ನು ಮಾಡಿ ಜನರ ಮನದ ಮಾತಾಗಿದ್ದಾರೆ. ಇವರಿಗೆ ಸಹೋದರ ಶಂಕರ ಯಮಕನಮರಡಿ ವಿಡಿಯೋ ಶೂಟಿಂಗ್‍ನಲ್ಲಿ ಸಾಥ ನೀಡುತ್ತಿದ್ದು ಡ್ರೋನ್ ಕ್ಯಾಮರಾ ಮತ್ತು 5ಡಿ ಕ್ಯಾಮರಾ ಬಳಸಿ ಸಿನಿಮಾವನ್ನು ನಾಚಿಸುವ ರೀತಿಯಲ್ಲಿ ಶೂಟಿಂಗ್ ಮಾಡಿ ಮದುವೆ ಮನೆಯವರ ಮೆಚ್ಚುಗೆ ಪಾತ್ರರಾಗಿ ಸಾಮಾಜಿಕ ಜಾಲತಾಣ ಪೇಸಬುಕ್ಕ್‍ನಲ್ಲಿ ತುಂಬಾ ಜನಪ್ರೀಯತೆಯನ್ನು ಗಳಿಸಿದ್ದಾರೆ. ಇದರ ಜೊತೆಗೆ ಸಹೋದರ ಶಂಕರ ಅವರು “ನೀರನ್ನು ಮಿತವಾಗಿ ಬಳಿಸಿ” ಪರಿಸರವನ್ನು ಸಂರಕ್ಷಿಸಿ ಎಂಬ ಸಾಮಾಜಿಕ ಕಳಕಳಿಯುಳ್ಳ ಶಾಟ್ ಮೂವಿಗಳನ್ನು ಮಾಡಿ ಸಾಮಾಜಿಕ ಕಳಕಳಿಯನ್ನು ಪ್ರದರ್ಶಿಸುತ್ತಿದ್ದಾರೆ ಗೋಕಾಕಿನ ಯಮಕನಮರಡಿ ಬ್ರದರ್ಸ.

ಒಟ್ಟಾರೆಯಾಗಿ ಹಳೆಯ ಸಂಪ್ರದಾಯಗಳಿಗೆ ಹೊಸ ಲುಕ್ ನೀಡಿ ಪೋಟೊಗಳಿಗೆ ಸಿನಿಮಿಯ ಟಚ್ ನೀಡಿ ಎಲ್ಲರ ಮನ ಗೆಲ್ಲುತ್ತಿರುವ ಗೋಕಾಕಿನ ಪೋಟೊಗ್ರಾಫರ್ ಯಮಕನಮರಡಿ ಸಹೋದರರ ಈ ಪಯನ ಹೀಗೆ ಮುಂದೆ ಸಾಗಲಿ ಎಂದು ಆಶಿಸೋಣ.

 

ಪೋಸ್ಟ್ ವೆಡ್ಡಿಂಗ ಪೋಟೊಗೆ ಪೋಸ ನೀಡಿರುವ ನವ ದಂಪತಿಗಳು

 

 ಗುರು ಯಮಕನಮರಡಿ ಪೋಟೊಗ್ರಾಫರ ::

“ಪ್ರೀ, ವೆಡ್ಡಿಂಗ್ ಮತ್ತು ಪೋಸ್ಟ್ ವೆಡ್ಡಿಂಗ್ ಪೋಟೋ ಶೂಟಿಗೆ ಸ್ಪೇಷಲ್ ಲೈಟಿಂಗ್ ಸ್ಪೇಶಲ್ ಲೋಕೇಶನ್ ಬೇಕಾಗುತ್ತದೆ. ಪೋಟೊಗಳಲ್ಲಿ ಪೋಸ್ ನೀಡಲು ದಂಪತಿಗಳಿಗೆ ಹೆಚ್ಚಾಗಿ ನಾವೇ ನಿರ್ದೇಶನ ಮಾಡುತ್ತೇವೆ. ಕೆಲವೊಮ್ಮೆ ದಂಪತಿಗಳೇ ತಮಗಿಷ್ಟವಾದ ರೀತಿಯಲ್ಲಿ ಪೋಸ್‍ಗಳನ್ನು ನೀಡಿ ಪೋಟೊಗಳನ್ನು ತೆಗೆಸಿಕೊಳ್ಳುತ್ತಾರೆ. ಇದರ ವೆಚ್ಚಗಳ ವೆಡ್ಡಿಂಗ್ ಪ್ಯಾಕೇಜನಲ್ಲಿಯೇ ಸೇರಿರುತ್ತದೆ. ಇದಕ್ಕಾಗಿ ರೂ. 50 ಸಾವಿರ ರಿಂದ 75 ಸಾವಿರ ವರೆಗೆ ವೆಚ್ಚ ಬರುತ್ತದೆ.”.

ಶಂಕರ ಯಮಕನಮರಡಿ ವಿಡಿಯೋಗ್ರಾಫರ್ :

“ಮದುವೆಗೆ ಒಂದು ತಿಂಗಳ ಮೊದಲೇ ಪ್ರೀ ಮತ್ತು ಪೋಸ್ಟ್ ವೆಡ್ಡಿಂಗ್‍ಗಳ ಪೋಟೋ ಶೂಟ ಮಾಡಲು ಆರ್ಡರ್ ಬುಕ್ ಆಗಿರುತ್ತದೆ. ಮದುವೆಗೆ 8-10 ದಿನದ ಮೊದಲೇ ಪ್ರೀ, ವೆಡ್ಡಿಂಗ್ ವಿಡಿಯೋ ಮಾಡಲಾಗುತ್ತೆ. ಹೆಚ್ಚಿನವರ ಸಿನಿಮಿಯ ರೀತಿಯಲ್ಲಿ ಪೋಸ್ ನೀಡಲು ಇಚ್ಛೆ ಪಡುತ್ತಾರೆ. ಇದು ಈಗಿನ ಹೊಸ ಟ್ರೆಂಡ್. ಕಾಲ ಬದಲಾದಂತೆ ನಾವು ಪೋಟೊ ಮತ್ತು ವಿಡಿಯೋ ಶೂಟಿಂಗಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತೇವೆ “.

Related posts: