RNI NO. KARKAN/2006/27779|Friday, December 13, 2024
You are here: Home » breaking news » ಬೆಳಗಾವಿ:ಗೋಕಾಕ ಮತ್ತು ಅರಭಾವಿ ಕ್ಷೇತ್ರದಲ್ಲಿ ಹಣಬಲ , ತೋಳ್ಬಲ ಮುಕ್ತ ಚುನಾವಣೆ ನಡೆಸಲು ಆಗ್ರಹ

ಬೆಳಗಾವಿ:ಗೋಕಾಕ ಮತ್ತು ಅರಭಾವಿ ಕ್ಷೇತ್ರದಲ್ಲಿ ಹಣಬಲ , ತೋಳ್ಬಲ ಮುಕ್ತ ಚುನಾವಣೆ ನಡೆಸಲು ಆಗ್ರಹ 

ಗೋಕಾಕ ಮತ್ತು ಅರಭಾವಿ ಕ್ಷೇತ್ರದಲ್ಲಿ ಹಣಬಲ , ತೋಳ್ಬಲ ಮುಕ್ತ ಚುನಾವಣೆ ನಡೆಸಲು ಆಗ್ರಹ

ಬೆಳಗಾವಿ ಡಿ 19: ಗೋಕಾಕ ಮತ್ತು ಅರಭಾವಿ ಕ್ಷೇತ್ರದಲ್ಲಿ ಹಣಬಲ , ತೋಳ್ಬಲ ಮುಕ್ತ ಚುನಾವಣೆ ನಡೆಸುವಂತೆ ಆಗ್ರಹಿಸಿ ಗೋಕಾಕ ತಾಲೂಕಿನ ಮತದಾರರ ವೇದಿಕೆ ವತಿಯಿಂದ ಇಂದು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು

ಸರಕಾರಿ ಆಡಳಿತ ಯಂತ್ರ ದುರುಪಯೋಗ ತಡೆಗೆ ಕೇಂದ್ರ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ ಕಾರ್ಯಕರ್ತರು ಗೋಕಾಕ ಮತ್ತು ಅರಭಾವಿ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಲೋಪವಾಗದಂತೆ ನೋಡಿಕೊಳ್ಳಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ
ಈ ಭಾಗದಲ್ಲಿ ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುವ ಸಿಬ್ಬಂದಿ ರಾಜಕೀಯ ವ್ಯಕ್ತಿಗಳ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆಯ ಬಿಇಓಗಳು ಈ ಭಾಗದ ತಮ್ಮ ಕೆಳಗಿನ ಸಿಬ್ಬಂದಿಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಅಶೋಕ ಪೂಜಾರಿ, ಈರಪ್ಪ ಕಡಾಡಿ, ಈಶ್ವರ ಕತ್ತಿ, ಈರಪ್ಪ ಬೆಳಕೂಡ, ಚೆನ್ನಬಸು ರುದ್ರಾಪೂರ, ಚನ್ನಪ್ಪ ಅಥಣಿ, ಗುತುಪಾದ ಕುಲಕರ್ಣಿ, ಎಂ. ಟಿ. ಪಾಟೀಲ, ಎಸ್. ಆರ್. ಸೋನವಾಲಕರ, ರಮೇಶ ಉಟಗಿ, ಲಕ್ಕನ್ನ ಸವಸುದ್ದಿ ಇತರರು ಭಾಗವಹಿಸಿದ್ದರು.

Related posts: