ಗೋಕಾಕ:ಅತಿಥಿ ಉಪನ್ಯಾಸಕರಿಂದ ಮುಖ್ಯ ಮಂತ್ರಿಗಳಿಗೆ ಮನವಿ ಅರ್ಪಣೆ
ಅತಿಥಿ ಉಪನ್ಯಾಸಕರಿಂದ ಮುಖ್ಯ ಮಂತ್ರಿಗಳಿಗೆ ಮನವಿ ಅರ್ಪಣೆ
ಗೋಕಾಕ ಡಿ 21: ಇಂದು ಗೋಕಾಕ ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಬೆಳಗಾವಿ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘ ಮನವಿ ಸಲ್ಲಿಸಿತು.
ನಗರದ ಡಾಲರ್ಸ್ ಕಾಲೋನಿ ಹತ್ತಿರ ವಿರುವ ಹೆಲಿಪ್ಯಾಡ್ ದಲ್ಲಿ ಸಂಘದ ಜಿಲ್ಲಾಧ್ಯಕ್ಷ ರಾಜು ಕಂಬಾರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಮನವಿಯಲ್ಲಿ ರಾಜ್ಯದ 412 ಕಾಲೇಜುಗಳಲ್ಲಿ 13000 ಕ್ಕಿಂತಲೂ ಹೆಚ್ಚು ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಅವರೆಲ್ಲರಿಗೂ ಸೇವಾ ಭದ್ರತೆ ನೀಡಬೇಕೆಂದು ವಿನಂತಿಸಕೊಳ್ಳಲಾಗಿದೆ. ಮನವಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿಗಳು ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ಖಜಾಂಚಿ ಕೆ.ಎನ್. ಕಾಂಬಳೆ, ಅತಿಥಿ ಉಪನ್ಯಾಸಕರ ಮುಖಂಡರಾದ ಪ್ರಕಾಶ ಮಬನೂರ, ನಿಂಗಪ್ಪ ಸಂಗ್ರೇಜಿಕೊಪ್ಪ, ಯರಿಯಪ್ಪ ಮುಂತಾದವರು ಹಾಜರಿದ್ದರು.