RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ತೀರ್ಥಕ್ಷೇತ್ರ, ಪ್ರೇಕ್ಷಣೀಯ ಸ್ಥಳಗಳಲ್ಲಿ ಹೊಸ ವರ್ಷದ ಹೆಸರಿನಲ್ಲಿ ತಪ್ಪು ಆಚರಣೆಯನ್ನು ತಡೆಯುವಂತೆ ಹಿಂದು ಜನ ಜಾಗೃತಿ ಸಮಿತಿ ಮನವಿ

ಗೋಕಾಕ:ತೀರ್ಥಕ್ಷೇತ್ರ, ಪ್ರೇಕ್ಷಣೀಯ ಸ್ಥಳಗಳಲ್ಲಿ ಹೊಸ ವರ್ಷದ ಹೆಸರಿನಲ್ಲಿ ತಪ್ಪು ಆಚರಣೆಯನ್ನು ತಡೆಯುವಂತೆ ಹಿಂದು ಜನ ಜಾಗೃತಿ ಸಮಿತಿ ಮನವಿ 

ತೀರ್ಥಕ್ಷೇತ್ರ, ಪ್ರೇಕ್ಷಣೀಯ ಸ್ಥಳಗಳಲ್ಲಿ ಹೊಸ ವರ್ಷದ ಹೆಸರಿನಲ್ಲಿ ತಪ್ಪು ಆಚರಣೆಯನ್ನು ತಡೆಯುವಂತೆ ಹಿಂದು ಜನ ಜಾಗೃತಿ ಸಮಿತಿ ಮನವಿ
ಗೋಕಾಕ ಡಿ 23 : ತೀರ್ಥಕ್ಷೇತ್ರ, ಪ್ರೇಕ್ಷಣೀಯ ಸ್ಥಳ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಡಿಸೆಂಬರ್ 31 ರಂದು ಮಧ್ಯರಾತ್ರಿ ಹೊಸ ವರ್ಷದ ಹೆಸರಿನಲ್ಲಿ ನಡೆಯುವ ತಪ್ಪು ಆಚರಣೆಯನ್ನು ತಡೆಯಬೇಕೆಂದು ಆಗ್ರಹಿಸಿ ಶನಿವಾರದಂದು ಹಿಂದು ಜನ ಜಾಗೃತಿ ಸಮಿತಿಯ ಕಾರ್ಯಕರ್ತರು ತಹಶೀಲದಾರ ಅವರಿಗೆ ಮನವಿ ಅರ್ಪಿಸಿದರು.
ಸದ್ಯ ಪಾಶ್ಚಾತ್ಯ ಸಂಸ್ಕøತಿಯ ಅಂಧಾನುಕರಣೆಯಿಂದ ನಮ್ಮ ದೇಶದಲ್ಲಿಯೂ ಹೊಸ ವರ್ಷವನ್ನು ಯುಗಾದಿಯ ಬದಲು ಡಿಸೆಂಬರ್ 31 ರಂದು ಮಧ್ಯರಾತ್ರಿ 12 ಗಂಟೆಗೆ ಆಚರಿಸಿಸುತ್ತಿರುವ ಕೆಟ್ಟ ರೂಢಿಯಾಗಿದೆ. ಈ ರಾತ್ರಿ ಯುವಕರು ಮದ್ಯಪಾನ, ಅಮುಲು ಪದಾರ್ಥಗಳ ಸೇವನೆ ಮಾಡಿ ವೇಗದಿಂದ ವಾಹನಗಳನ್ನು ಓಡಿಸುವುದರಿಂದ ಅಪಘಾತಗಳ ಪ್ರಮಾಣ ಹೆಚ್ಚಾಗುತ್ತಿವೆ. ಕೆಲವೊಂದು ಕಡೆ ದೊಡ್ಡ ಪ್ರಮಾಣದಲ್ಲಿ ಪಟಾಕಿ ಸಿಡಿಸಿ ಪ್ರದೂಷಣೆ ಮಾಡಲಾಗುತ್ತಿದೆ. ಕರ್ಕಶ ಧ್ವನಿವರ್ಧಕ ಹಚ್ಚಿ ಅದರ ತಾಳಕ್ಕೆ ಅಶ್ಲೀಲ ಅಂಗಪ್ರದರ್ಶನ ಮಾಡಿ ನೃತ್ಯ ಮಾಡಲಾಗುತ್ತದೆ.ಅವಾಚ್ಯ ಬೈಗೂಳಗಳನ್ನೂ ನೀಡ;ಆಗುತ್ತದೆ. ಯುವತಿಯರನ್ನು ಛೇಡಿಸುವ ಪ್ರಕರಣಗಳು ನಡೆದು ಕಾನೂನು ಸುವ್ಯವಸ್ಥೆ ಸಂದರ್ಭದಲ್ಲಿ ಗಂಭೀರ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದರಿಂದಾಗಿ ಪೊಲೀಸರು ಮತ್ತು ಆಡಳಿತವರ್ಗದ ಮೇಲೆ ಹೆಚ್ಚುವರಿ ಒತ್ತಡ ಬೀಳುತ್ತದೆ.ಇಂತಹ ಪ್ರಕರಣಗಳಿಂದ ಅನೇಕ ನಾಗರಿಕರು, ಸ್ತ್ರೀಯರು, ಯುವತಿಯರು ಮನೆ ಹೊರಗೆ ಹೋಗುವುದು ಕಠಿಣವಾಗಿದೆ ಮತ್ತು ರಾಷ್ಟ್ರದ ಯುವಪೀಳಿಗೆ ಅವನತಿಯ ಮಾರ್ಗದಲ್ಲಿದೆ. ಇಂತಹ ತಪ್ಪು ಪ್ರಕರಣಗಳನ್ನು ನಡೆಯದಂತೆ ರಾತ್ರಿ ಪೋಲಿಸರು ಗಸ್ತು ಪ್ರಾರಂಭಿಸಬೇಕು. ತಪ್ಪು ಆಚರಣೆ ಮಾಡುವ ಯುವಕರನ್ನು ಬಂಧಿಸಬೇಕು. ಡಿ.31ರಂದು ನಡೆಯುವ ತಪ್ಪು ಆಚರಣೆಗಳನ್ನು ಪ್ರತಿಬಂಧಿಸುವ ಆಂದೋಲನಕ್ಕೆ ಸಹಾಯ ಮಾಡಬೇಕೆಂದು ಮನವಿ ತಿಳಿಸಿದ್ದಾರೆ.
ಹಿಂದು ಜನಜಾಗೃತಿ ಸಮಿತಿಯ ಸುಧೀಶ ಹಿರೇಕರ, ಮಂಜುನಾಥ ಶಿರಾಳಕರ, ಸರಿತಾ ಮುಗಳಿ, ಕವಿತಾ ಹುಬಳಿಕರ, ಶೋಭಾ ಜರತಾರಕರ, ಸಿದ್ದನಗೌಡ ಪಾಟೀಲ, ರಾಮಸಿದ್ದ ಗಣಾಚಾರಿ, ಕುಮಾರ ತಿಗಡಿ, ಶ್ರೀಶೈಲ ಪೂಜಾರಿ, ಸಂತೋಷ ನಿಲಜಗಿ ಸೇರಿದಂತೆ ಇತರರು ಇದ್ದರು.

Related posts: