ಗೋಕಾಕ:ಕಷ್ಟ ಕಾರ್ಪಣ್ಯಗಳನ್ನು ಮೆಟ್ಟಿ ನಿಂತು ಸಾಧನೆಯ ಮೈಲಿಗಲ್ಲನ್ನು ಮುಟ್ಟಬೇಕು : ಜಯಾನಂದ ಮಾದರ
ಕಷ್ಟ ಕಾರ್ಪಣ್ಯಗಳನ್ನು ಮೆಟ್ಟಿ ನಿಂತು ಸಾಧನೆಯ ಮೈಲಿಗಲ್ಲನ್ನು ಮುಟ್ಟಬೇಕು : ಜಯಾನಂದ ಮಾದರ
ಗೋಕಾಕ ಡಿ 23: ಪ್ರತಿಭೆಯು ಸಾಧನೆಗೆ ಸ್ಪೂರ್ತಿಯಾಗಿರುತ್ತದೆ. ಸತತ ಪರಿಶ್ರಮದಿಂದ ಜ್ಞಾನದ ಅನಾವರಣಗೊಳ್ಳುತ್ತದೆ. ಸಾಧನೆಗಳಿಂದ ಜವಾಬ್ದಾರಿಗಳು ಹೆಚ್ಚುತ್ತವೆ ಎಂದು ಪ್ರಾಚಾರ್ಯ ಜಯಾನಂದ ಮಾದರ ಹೇಳಿದರು.
ಅವರು ಶನಿವಾರದಂದು ನಗರದ ಸಿದ್ಧಾರ್ಥ ಲಲಿತಕಲಾ ಮಹಾವಿದ್ಯಾಲಯದಲ್ಲಿ ಜರುಗಿದ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಧನೆಯ ಹಾದಿ ಸುಗಮವಾದುದಲ್ಲ ಕಷ್ಟ ಕಾರ್ಪಣ್ಯಗಳನ್ನು ಮೆಟ್ಟಿ ನಿಂತು ಸಾಧನೆಯ ಮೈಲಿಗಲ್ಲನ್ನು ಮುಟ್ಟಬೇಕೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಇಲ್ಲಿಯ ಎನ್.ಎಸ್.ಎಫ್ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಸದಾನಂದ ಗಾಯಕವಾಡ ಮಾತನಾಡಿ ಕಲೆಯ ಮಹತ್ವ ಬೆಲೆ ಕಟ್ಟಲಾಗದ್ದು ಪೂರ್ವ ತಯಾರಿಯಿಂದ ಗುರಿ ಮುಟ್ಟಲು ಸಾಧ್ಯವಿದೆ ಎಂದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನ ಕರ್ನಾಟಕ ಸಾಂಸ್ಕಂತಿಕ ಅಕಾಡೆಮಿಯ ರಾಜ್ಯ ಕಲಾಭೂಷಣ ಪ್ರಶಸ್ತಿಗೆ ಭಾಜನರಾದ ಬಸವರಾಜ ಗದಗಿನ ಡಿಸೆಂಬರ 30ರಿಂದ ಮುಂಬೈಯ ಪ್ರತಿಷ್ಠಿತ ಕಲಾ ಗ್ಯಾಲರಿ ಕಾಲಾ ಗೋಡಾ ಗ್ಯಾಲರಿಯಲ್ಲಿ ರಾಷ್ಟ್ರೀಯ ಮಟ್ಟದ ಏಳು ದಿನ ಸಮೂಹ ಚಿತ್ರಕಲಾ ಪ್ರದರ್ಶನಕ್ಕೆ ಹೊರಟಿರುವ ನಿಮಿತ್ಯ ಬಸವರಾಜ ಗದಗಿನ ಅವರನ್ನು ಕಾಲೇಜಿನ ಸಹಪಾಠಿಗಳಿಂದ ಸನ್ಮಾನಿಸಲಾಯಿತು.
ಸವಿತಾ ಕುಮರೇಶಿ, ಮುತ್ತವ್ವ ಪೂಜೇರಿ, ಸೈಯದ ಗಲಗಲಿ ಇದ್ದರು. ಉಪನ್ಯಾಸಕಿ ಮಾಲಾ ದಳವಾಯಿ ಶುಭ ಸಂದೇಶ ವಾಚಿಸಿದರು.
ಲಕ್ಕಪ್ಪ ಯಡ್ರಾಂವಿ ಸ್ವಾಗತಿಸಿದರು. ವಿದ್ಯಾ ತೊಂಡಿಕಟ್ಟಿ ನಿರೂಪಿಸಿದರು.ನೇತ್ರಾ ಬೆಳಗಲಿ ವಂದಿಸಿದರು.