RNI NO. KARKAN/2006/27779|Tuesday, December 24, 2024
You are here: Home » breaking news » ಗೋಕಾಕ:ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ : ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ

ಗೋಕಾಕ:ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ : ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ 

ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ : ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ

ಗೋಕಾಕ ಡಿ 24 : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಮಕ್ಕಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡುವುದಕ್ಕಾಗಿ ಪಾಲಕರು ತಮ್ಮ ಅಮೂಲ್ಯವಾದ ಸಮಯವನ್ನು ಮೀಸಲಿಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು.
ಶನಿವಾರದಂದು ಸಂಜೆ ನಗರದ ಲಿಬೆರೆಲ್ ಏಜುಕೇಶನ್ ಸೊಸಾಯಿಟಿಯ ಮಯೂರ ಆಂಗ್ಲ ಮಾಧ್ಯಮ ಶಾಲೆ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಪಾಲಕರು ಟಿವಿ ಮೋಬಾಯಿಲ್‍ಗಳಿಂದ ದೂರವಿದ್ದು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ತಮ್ಮ ಅಮೂಲ್ಯವಾದ ಸಮಯವನ್ನು ಅವರೊಂದಿಗೆ ಭಾವನಾತ್ಮಕವಾಗಿ ತೊಡಗಿಸಿಕೊಳ್ಳಬೇಕು. ತಮ್ಮ ಕನಸ್ಸುಗಳನ್ನು ಮಕ್ಕಳ ಮನಸ್ಸಿನಲ್ಲಿ ಮೂಡಿಸಿ ಅವುಗಳು ನನಸ್ಸಾಗುವಂತೆ ಪ್ರಯತ್ನಿಸಬೇಕು. ಮಕ್ಕಳನ್ನು ಆಧ್ಯಾತ್ಮಿಕವಾಗಿ ಬೌದ್ಧಿಕವಾಗಿ, ಜ್ಞಾನಾತ್ಮಕವಾಗಿ ಬೆಳೆಸುವ ಜವಾಬ್ದಾರಿ ಪಾಲಕರ ಮೇಲೆ ಇದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಚೇರಮನ ಲಖನ್ ಜಾರಕಿಹೊಳಿ ಅವರು ಶಾಲೆಯ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ವೇದಿಕೆ ಮೇಲೆ ಸಂಸ್ಥೆಯ ಉಪಾಧ್ಯಕ್ಷೆ ಸಂಧ್ಯಾ ಜಾರಕಿಹೊಳಿ, ಪೂಣೆಯ ಖ್ಯಾತ ವೈದ್ಯೆ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿ ಡಾ|| ನಂದಿನಿ ತೇಲಿ, ಸಂಸ್ಥೆಯ ಕಾರ್ಯದರ್ಶಿ ಸದಾನಂದ ಕಲಾಲ, ನಿರ್ದೇಶಕ ವಿನಾಯಕ ಚಿಪ್ಪಲಕಟ್ಟಿ, ಮುಖ್ಯೋಪಾಧ್ಯಯಿನಿ ಎಸ್.ಆರ್.ಮಹೇಂದ್ರಕರ ಶಿಕ್ಷಕರಾದ ಎಮ್.ಸಿ.ವಣ್ಣೂರ ಇದ್ದರು.
ಶಿಕ್ಷಕಿ ವಿನಯ ದೊಡಮನಿ ಸ್ವಾಗತಿಸಿದರು, ಸ್ಮೀತಾ ಭಂಡಾರಿ ನಿರೂಪಿಸಿದರು, ಎಸ್.ಎಸ್.ಚೋಪಡೆ ವಂದಿಸಿದರು. ನಂತರ ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

Related posts: