RNI NO. KARKAN/2006/27779|Thursday, November 21, 2024
You are here: Home » breaking news » ಮೂಡಲಗಿ:ಜಾತ್ರೆಗಳು ನಮ್ಮ ದೇಶದ ಸಾಂಸ್ಕಂತಿಕ ವೈಭವವನ್ನು ಎತ್ತಿ ತೋರಿಸುತ್ತಿವೆ : ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ:ಜಾತ್ರೆಗಳು ನಮ್ಮ ದೇಶದ ಸಾಂಸ್ಕಂತಿಕ ವೈಭವವನ್ನು ಎತ್ತಿ ತೋರಿಸುತ್ತಿವೆ : ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ 

ಜಾತ್ರೆಗಳು ನಮ್ಮ ದೇಶದ ಸಾಂಸ್ಕಂತಿಕ ವೈಭವವನ್ನು ಎತ್ತಿ ತೋರಿಸುತ್ತಿವೆ :ಮಾಜಿ  ಸಚಿವ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ ಡಿ 26: ಜಾತ್ರೆಗಳು ನಮ್ಮ ದೇಶದ ಸಾಂಸ್ಕಂತಿಕ ವೈಭವವನ್ನು ಎತ್ತಿ ತೋರಿಸುತ್ತಿವೆ ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸಮೀಪದ ನಾಗನೂರ ಪಟ್ಟಣದ ಹೊರವಲಯದಲ್ಲಿರುವ ಕೊರವಂಜಿ ಜಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಜಾತ್ರೆಗಳಲ್ಲಿ ಎಲ್ಲರೂ ತನು-ಮನ-ಧನದಿಂದ ಭಾಗವಹಿಸಿದರೆ ಮನಸ್ಸು ಪರಿಶುದ್ಧಗೊಳ್ಳುತ್ತದೆ. ಧಾರ್ಮಿಕ ಮನೋಭಾವನೆ ಬರಬೇಕಾದರೆ ಇಂತಹ ಜಾತ್ರೆಗಳಲ್ಲಿ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ. ನಾವು ಎಷ್ಟೇ ದೊಡ್ಡವರಾಗಿ ಬೆಳೆದರೂ ನಮ್ಮ ಆಚಾರ-ವಿಚಾರ, ಸಂಸ್ಕøತಿಯನ್ನು ಎಂದಿಗೂ ಮರೆಯಬಾರದು. ದೇಶವು ಧಾರ್ಮಿಕತೆಯಲ್ಲಿ ಪ್ರಪಂಚದಲ್ಲಿಯೇ ಮಾದರಿಯಾಗಿದೆ ಎಂದು ಹೇಳಿದರು.
ರಾಜ್ಯ ಸಹಕಾರಿ ಮಾರಾಟ ಮಂಡಳಿ ಉಪಾಧ್ಯಕ್ಷ ಬಿ.ಆರ್. ಪಾಟೀಲ ಮಾತನಾಡಿ, ನಾಗನೂರ ಪಟ್ಟಣದ ಅಭಿವೃದ್ಧಿಯಲ್ಲಿ ಬಾಲಚಂದ್ರ ಜಾರಕಿಹೊಳಿ ಅವರ ಕೊಡುಗೆ ಮಹತ್ವದ್ದಾಗಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಹಿರಿಯರಾದ ಲಕ್ಷ್ಮಣ ಪಡದಲ್ಲಿ ವಹಿಸಿದ್ದರು.
ಭಗೀರಥ ಶಿಕ್ಷಣ ಸಂಸ್ಥೆ ಅಧ್ಯಕ್ಷ ಚಂದ್ರು ಬೆಳಗಲಿ, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಸುಭಾಸ ಬೆಳಗಲಿ, ಎಪಿಎಂಸಿ ನಿರ್ದೇಶಕ ಕೆಂಚಪ್ಪ ಸಕ್ರೆಪ್ಪಗೋಳ, ಪ್ರಭಾಶುಗರ ನಿರ್ದೇಶಕ ಕೆಂಚಗೌಡ ಪಾಟೀಲ, ಪರಸಪ್ಪ ಬಬಲಿ, ದುಂಡಪ್ಪ ಪಡದಲ್ಲಿ, ಮಹಾದೇವ ಮಲಕನ್ನವರ, ಪ್ರವೀಣ ಜೋಕಿ, ಚಂದು ಸೋರಗಾಂವಿ, ಗೋವಿಂದ ಸೋರಗಾಂವಿ, ಮುಂತಾದವರು ಉಪಸ್ಥಿತರಿದ್ದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಕೊರವಂಜಿ ದೇವಸ್ಥಾನದ ನೂತನ ಕಟ್ಟಡವನ್ನು ಉದ್ಘಾಟಿಸಿದರು.

Related posts: