RNI NO. KARKAN/2006/27779|Friday, November 8, 2024
You are here: Home » breaking news » ಗೋಕಾಕ:ಕೌಜಲಗಿಯನ್ನು ಗೋಕಾಕ ತಾಲೂಕಿನಲ್ಲಿಯೇ ಮುಂದುವರೆಸುವಂತೆ ಒತ್ತಾಯಿಸಿ ನಾಳೆ “ಕೌಜಲಗಿ ಬಂದ್”

ಗೋಕಾಕ:ಕೌಜಲಗಿಯನ್ನು ಗೋಕಾಕ ತಾಲೂಕಿನಲ್ಲಿಯೇ ಮುಂದುವರೆಸುವಂತೆ ಒತ್ತಾಯಿಸಿ ನಾಳೆ “ಕೌಜಲಗಿ ಬಂದ್” 

ಕೌಜಲಗಿಯನ್ನು ಗೋಕಾಕ ತಾಲೂಕಿನಲ್ಲಿಯೇ ಮುಂದುವರೆಸುವಂತೆ ಒತ್ತಾಯಿಸಿ ನಾಳೆ “ಕೌಜಲಗಿ ಬಂದ್”

ಗೋಕಾಕ ಡಿ 28: ಕೌಜಲಗಿಯನ್ನು ಗೋಕಾಕ ತಾಲೂಕಿನಲ್ಲಿಯೇ ಮುಂದುವರೆಸಬೇಕು. ಮೂಡಲಗಿ ತಾಲೂಕಿಗೆ ಕೌಜಲಗಿ ಹೊಬಳಿಯನ್ನು ಸೇರ್ಪಡೆಗೊಳಿಸುವ ವದಂತಿ ಹಿನ್ನೆಲೆಯಲ್ಲಿ ಇದನ್ನು ಪ್ರತಿಭಟಿಸಿ ನಾಳೆ ಶುಕ್ರವಾರ ದಿ 29 ರಂದು ‘ಕೌಜಲಗಿ ಬಂದ್’ಗೆ ಕರೆ ನೀಡಲಾಗಿದೆ ಎಂದು ನಿಯೋಜಿತ ಕೌಜಲಗಿ ತಾಲೂಕು ಹೋರಾಟ ಚಾಲನಾ ಸಮಿತಿ ತಿಳಿಸಿದೆ.
ಕೌಜಲಗಿ ತಾಲೂಕು ರಚನೆ ಸಂಬಂಧ ಕಳೆದ 40 ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದ್ದೇವೆ. ಹಿಂದಿನ ಮೂರು ಆಯೋಗಗಳಾದ ವಾಸುದೇವರಾವ, ಹುಂಡೇಕರ ಹಾಗೂ ಗದ್ದಿಗೌಡರ ನೇತೃತ್ವದ ಸಮಿತಿಗಳು ಕೌಜಲಗಿಯನ್ನು ತಾಲೂಕು ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಆಗಿನ ಸರಕಾರಗಳಿಗೆ ವರದಿ ಸಲ್ಲಿಸಿದ್ದವು. ಆದರೆ ಎಮ್.ಬಿ ಪ್ರಕಾಶ ನೇತೃತ್ವದ ಸಮಿತಿ ಮಾತ್ರ ಕೌಜಲಗಿಯನ್ನು ತಾಲೂಕು ಕೇಂದ್ರದಿಂದ ಕೈಬಿಟ್ಟಿತ್ತು. ಆದರೂ ಹೋರಾಟ ನಿಲ್ಲಿಸಲಿಲ್ಲ. ಸೆ. 6 ರಂದು ಹೊಸದಾಗಿ ಘೋಷಿತಗೊಂಡ ಹೊಸ ತಾಲೂಕಗಳ ಪಟ್ಟಿಯಲ್ಲಿ ಕೌಜಲಗಿಯನ್ನು ಕೈಬಿಡಲಾಗಿದೆ.
ಜನೇವರಿ 1 ರಿಂದ ಗೋಕಾಕ ತಾಲೂಕನ್ನು ವಿಭಜಿಸಿ ಮೂಡಲಗಿಯನ್ನು ತಾಲೂಕು ಕೇಂದ್ರವನ್ನಾಗಿ ಸರಕಾರ ಘೋಷನೆ ಮಾಡಿದೆ. ಆದರೆ ಮೂಡಲಗಿ ಹೊಸ ತಾಲೂಕಿಗೆ ನಾವು ಯಾವುದೇ ಕಾರಣಕ್ಕೂ ಸೇರುವದಿಲ್ಲ. ಮೊದಲಿನಿಂದಲೂ ಅದರಲ್ಲೂ ಮೂಡಲಗಿಯವರಿಗಿಂತ ಹೋರಾಟ ಮಾಡಿಕೊಂಡು ಬಂದಿರುವ ನಮಗಿಗ ಕೌಜಲಗಿ ತಾಲೂಕು ಆಗಬೇಕೆಂಬುದು ಒತ್ತಾಸೆಯಾಗಿದೆ. ಕೌಜಲಗಿ ಹೊಬಳಿಯನ್ನು ಇದೀಗ ಮೂಡಲಗಿಗೆ ಸೇರ್ಪಡೆ ಮಾಡುಬಹುದೆಂಬ ವದಂತಿ ಹಬ್ಬಿದ್ದು ಇದಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ ಎಂದು ಸಮಿತಿ ತಿಳಿಸಿದೆ.
ನಮ್ಮ ಹೊಬಳಿಯನ್ನು ಸೇರಿಸಲಿಕ್ಕೆ ಬೀಡಲಾರೆವು. ಗೋಕಾಕ ತಾಲೂಕಿನ ಹಳ್ಳಿಗಳನ್ನು ಈ ಮೊದಲಿನಂತೆ ಮುಂದುವರೆಸಿಕೊಂಡು ಹೋಗಬೇಕು ಅದರಲ್ಲೂ ಕೌಜಲಗಿ ಹೊಬಳಿಯನ್ನು ಗೋಕಾಕ ತಾಲೂಕಿನಲ್ಲಿ ಮುಂದುವರೆಸಿಕೊಂಡು ಹೋಗುವಂತೆ ಒತ್ತಾಯಿಸಿ ನಾಳೆ ಶುಕ್ರವಾರ ಕೌಜಲಗಿ ಬಂದ್‍ಗೆ ಕರೆ ನೀಡಲಾಗಿದೆ ಎಂದು ಚಾಲನಾ ಸಮಿತಿ ಪ್ರಮುಖರು ತಿಳಿಸಿದ್ದಾರೆ.
ಕೌಜಲಗಿ ನಾಡ ಕಛೇರಿಯ ಉಪತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳು, ಕಂದಾಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಅರಭಾಂವಿ ಶಾಸಕರು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವದು. ಕೌಜಲಗಿ ಬಂದ್ ಕರೆಗೆ ಹೊಬಳಿ ಮಟ್ಟದ ಎಲ್ಲ ಗ್ರಾಮಗಳು, ಮುಖಂಡರು, ವರ್ತಕರು, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡ ಕೌಜಲಗಿ ಬಂದ್ ಕರೆಯನ್ನು ಯಶಸ್ವಿಗೊಳಿಸುವಂತೆ ಚಾಲನಾ ಸಮಿತಿಯ ಪದಾಧಿಕಾರಿಗಳಾದ ಮಹದೇವಪ್ಪಾ ಭೋವಿ, ಅಶೋಕ ಪರುಶೆಟ್ಟಿ, ಡಾ.ರಾಜೇಂದ್ರ ಸಣ್ಣಕ್ಕಿ, ರಾಯಪ್ಪ ಬಳೂಲದಾರ ಹಾಗೂ ಶಿವಾನಂದ ಲೋಕನ್ನವರ ಅವರು ಕೋರಿದ್ದಾರೆ.
ಕೌಜಲಗಿ ಸಂತೆ ರದ್ದು: ಮೂಡಲಗಿ ತಾಲೂಕಿಗೆ ಕೌಜಲಗಿ ಹೊಬಳಿ ಸೇರ್ಪಡೆಯನ್ನು ವಿರೋಧಿಸಿ ನಾಳೆ ಶುಕ್ರವಾರದಂದು ಕರೆ ನೀಡಲಾಗಿರುವ ಕೌಜಲಗಿ ಬಂದ್ ಹಿನ್ನೇಲೆಯಲ್ಲಿ ನಾಳೆ ನಡೆಯಬೇಕಾಗಿದ್ದ ಸಂತೆಯನ್ನು ರದ್ದು ಪಡಿಸಿದ್ದು, ಸಾರ್ವಜನಿಕರು ಸಹಕರಿಸುವಂತೆ ತಾಲೂಕು ಚಾಲನಾ ಸಮಿತಿ ಪ್ರಕಟಣೆಯಲ್ಲಿ ಕೋರಿದೆ.

Related posts: