ಹುಕ್ಕೇರಿ:ರಾಜಾರೋಷವಾಗಿ ನಡೆಯುತ್ತಿದೆ ಅಕ್ರಮ ಮರಳುದಂಧೆ : ಕಣ್ಣಮುಚ್ಚಿ ಕುಳಿತ ಪೊಲೀಸರು
ರಾಜಾರೋಷವಾಗಿ ನಡೆಯುತ್ತಿದೆ ಅಕ್ರಮ ಮರಳುದಂಧೆ : ಕಣ್ಣಮುಚ್ಚಿ ಕುಳಿತ ಪೊಲೀಸರು
ಹುಕ್ಕೇರಿ ಡಿ 31: ಅಕ್ರಮ ಮರಳು ದಂಧೆಯ ಬಗ್ಗೆ ಸಾಕಷ್ಟು ಬಾರಿ ಪತ್ರಿಕೆಗಳಲ್ಲಿ , ಟಿವಿಗಳಲ್ಲಿ ವರದಿಗಳು ಪ್ರಸಾರ ಮತ್ತು ಪ್ರಕಟವಾಗುತ್ತಿವೆ ಆದರೂ ಮರಳು ದಂಧೆ ರಾಜಾರೋಷವಾಗಿ ನಡೆಯುತ್ತಿರುವ ಘಟನೆಗಳು ನಿರಂತರವಾಗಿ ನಡೆಯುತ್ತಿವೆ ಇದಕ್ಕೆ ಕಡಿವಾಣ ಹಾಕುವವರೆ ಅಕ್ರಮ ದಂಧೆ ನಡೆಸುವವರ ಕೈ ಜೊಡಿಸುತ್ತಿದ್ದಾರೆಂಬ ಗುಮಾನುಗಳು ಕೇಳಿ ಬರುತ್ತಿವೆ ಇದಕ್ಕೆ ಜೀವಂತ ಸಾಕ್ಷಿ ಈ ಕಿರು ವರದಿ
ಕೇವಲ ಯಮಕನಮರಡಿ ಪೊಲೀಸ್ ಠಾಣೆಯಿಂದ 4 ಕಿ ಮೀ ಅಂತರದಲ್ಲಿ ಈ ಮರಳು ಫಿಲ್ಟರ್ ದಂಧೆಕೋರರು ಮರಳನ್ನು ತೆಗೆಯುತ್ತಿದ್ದಾರೆ. ಆದರೆ, ಅಲ್ಲಿ ಪ್ರಭಾವಿ ವ್ಯಕ್ತಿಗಳೇ ಮುಂದೆ ನಿಂತು ದಂಧೆ ನಡೆಸುತ್ತಿದ್ದಾರೆ ಎನ್ನುವುದು ಸ್ಥಳೀಯರ ದೂರಾಗಿದೆ.
ಇದೆಲ್ಲಾ ಪೊಲೀಸರಿಗೆ ಗೊತ್ತಿದ್ದರೂ ಸುಮ್ಮನೆ ಕುಳಿತಿದ್ದಾರೆ ಎಂದು ಜನರು ಆರೋಪಿಸಿದ್ದಾರೆ. ಅಲ್ಲದೆ ಕುಡಿಯುವ ನೀರಿನಲ್ಲಿ ಮರಳು ಎತ್ತಲು ಯಂತ್ರ ಬಳಸುತ್ತಿರುವುದರಿಂದ ನೀರು ಕಲುಷಿತವಾಗುತ್ತಿದೆ ಎಂದು ಪರಿಸರವಾದಿಗಳು ಕಿಡಿಕಾರಿದ್ದಾರೆ