RNI NO. KARKAN/2006/27779|Wednesday, November 6, 2024
You are here: Home » breaking news » ಗೋಕಾಕ:ಗೋವಾ ಕನ್ನಡಿಗರಿಗೆ ಶಾಶ್ವತ ಪುನರ್‍ವಸತಿ ಕಲ್ಪಿಸಿ, ಕಳಸಾ ಬಂಡೂರಿ ಅನುಷ್ಠಾನಕ್ಕೆ ಆಗ್ರಹಿಸಿ ಕೇಂದ್ರ ಸಚಿವ ಶ್ರೀಪಾದ ನಾಯಿಕರಿಗೆ ಕರವೇ ಮನವಿ

ಗೋಕಾಕ:ಗೋವಾ ಕನ್ನಡಿಗರಿಗೆ ಶಾಶ್ವತ ಪುನರ್‍ವಸತಿ ಕಲ್ಪಿಸಿ, ಕಳಸಾ ಬಂಡೂರಿ ಅನುಷ್ಠಾನಕ್ಕೆ ಆಗ್ರಹಿಸಿ ಕೇಂದ್ರ ಸಚಿವ ಶ್ರೀಪಾದ ನಾಯಿಕರಿಗೆ ಕರವೇ ಮನವಿ 

ಗೋವಾ ಸಂಸದ , ಕೇಂದ್ರ ಸಚಿವ ಶ್ರೀಪಾದ ನಾಯಿಕ ಅವರಿಗೆ ಮನವಿ ಅರ್ಪಿಸುತ್ತಿರುವ ಕರವೇ ಕಾರ್ಯಕರ್ತರು

ಗೋವಾ ಕನ್ನಡಿಗರಿಗೆ ಶಾಶ್ವತ ಪುನರ್‍ವಸತಿ ಕಲ್ಪಿಸಿ, ಕಳಸಾ ಬಂಡೂರಿ ಅನುಷ್ಠಾನಕ್ಕೆ ಆಗ್ರಹಿಸಿ ಕೇಂದ್ರ ಸಚಿವ ಶ್ರೀಪಾದ ನಾಯಿಕರಿಗೆ ಕರವೇ ಮನವಿ

ಗೋಕಾಕ ಜ 1: ಗೋವಾ ಕನ್ನಡಿಗರಿಗೆ ಶಾಶ್ವತ ಪುನರ್‍ವಸತಿ ಕಲ್ಪಿಸಿ, ಕಳಸಾ ಬಂಡೂರಿ ಅನುಷ್ಠಾನಕ್ಕೆ ಸಹಕರಿಸುವಂತೆ ಕೋರಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ಸೋಮವಾರದಂದು ಸವದತ್ತಿ ತಾಲೂಕಿನ ಇಂಚಲ ಗ್ರಾಮಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಗೋವಾ ಸಂಸದ ಹಾಗೂ ಕೇಂದ್ರ ಆಯೂಷ್ಯ ಇಲಾಖೆಯ ಸಚಿವ ಶ್ರೀಪಾದ ನಾಯಕ ಅವರಿಗೆ ಮನವಿ ಅರ್ಪಿಸಿದರು.
ಗೋವಾ ರಾಜ್ಯದಲ್ಲಿ ವಾಸಿಸುತ್ತಿರುವ ಕನ್ನಡಿಗರಿಗೆ ಪ್ರವಾಸೋಧ್ಯಮದ ಅಭಿವೃದ್ಧಿ ನೆಪವೊಡ್ಡಿ ಪದೇ ಪದೇ ಬೈನಾ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಾಸಿಸುತ್ತಿರುವ ಗೋವಾ ಕನ್ನಡಿಗರ ಮನೆಗಳನ್ನು ತೆರವುಗೊಳಿಸುತ್ತಿರುವ ಗೋವಾ ಸರ್ಕಾರದ ಕ್ರಮ ಸರಿಯಲ್ಲ. ಕಳೆದ 4 ದಶಕಗಳಿಂದ ಗೋವಾ ರಾಜ್ಯದಲ್ಲಿ ನೆಲೆ ಕಂಡುಕೊಂಡಿರುವ ಗೋವಾ ಕನ್ನಡಿಗರನ್ನು ಅಲ್ಲಿನ ಸರ್ಕಾರ ಹಾಗೂ ಜನಪ್ರತಿನಿಧಿಗಳು ಕೇವಲ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡು ಇನ್ನುಳಿದ ಸೌಲಭ್ಯಗಳಿಂದ ವಂಚಿತ ಮಾಡುತ್ತಿರುವುದು ಖಂಡನೀಯ.
ಪ್ರಜಾಪ್ರಭುತ್ವ ಹೊಂದಿದ ಭಾರತದಲ್ಲಿ ಪ್ರಜೆಗಳು ತಮ್ಮ ಇಚ್ಚಾನುಸಾರವಾಗಿ ಯಾವುದೇ ರಾಜ್ಯದಲ್ಲಿ ನೆಲೆಸಬಹುದೆಂಬ ಕನಿಷ್ಠ ಪರಿಜ್ಞಾನವಿಲ್ಲದೇ ಗೋವಾ ಸರ್ಕಾರ ಸರ್ವಾಧೀಕಾರಿ ಧೋರಣೆ ತೋರುತ್ತಿದೆ.

 

ಗೋವಾ ರಾಜ್ಯವನ್ನು ಅವಲಂಬಿಸಿರುವ ಗೋವಾ ರಾಜ್ಯದ ಚುನಾವಣಾ ಗುರುತಿನ ಪತ್ರ, ಪಡಿತರ ಚೀಟಿ ಸೇರಿದಂತೆ ಎಲ್ಲಾ ಸವಲತ್ತುಗಳನ್ನು ಪಡೆದಿದ್ದಾರಲ್ಲದೇ ತಾವು ವಾಸಿಸುವ ಮನೆಗಳ ಕರ, ನೀರಿನ ಕರ ಮತ್ತು ವಿದ್ಯುತ್ ಬಿಲ್ಲು ಸೇರಿದಂತೆ ಎಲ್ಲ ತರಹದ ಕರಗಳನ್ನು ಗೋವಾ ಸರ್ಕಾರಕ್ಕೆ ಭರಿಸುತ್ತಿದ್ದಾರೆ.
ಆದರೆ ಗೋವಾ ಸರ್ಕಾರ ಇವರ ಮೇಲೆ ದಯೆ ತೋರದೇ ಅವರನ್ನು ಬೀದಿ ಪಾಲು ಮಾಡುತ್ತಿದೆ. ಇದರಿಂದ ಉತ್ತರಕರ್ನಾಟಕದ ವಿಜಯಪುರ, ಬಾಗಲಕೋಟ, ಕೊಪ್ಪಳ, ಧಾರವಾಡ, ಬೆಳಗಾವಿ, ಜಮಖಂಡಿ, ಹಾವೇರಿ, ಗದಗ ಮತ್ತಿತರ ಕಡೆಗಳಿಂದ ಕೂಲಿಗಾಗಿ ಗೋವಾ ರಾಜ್ಯವನ್ನು ಅವಲಂಬಿಸಿರುವ ಕನ್ನಡಿಗರ ಬಾಳು ಹಾಳಾಗುತ್ತಿದೆ. ಅದಲ್ಲದೇ ಕಳೆದ ನಾಲ್ಕು ದಶಕಗಳಿಂದ ಅನುಷ್ಠಾನಗೊಳ್ಳದೇ ನೆನೆಗುದ್ದಿಗೆ ಬಿದ್ದಿರುವ ‘ಕಳಸಾ ಬಂಡೂರಿ ನಾಲಾ ಜೋಡಣೆ’ ಯಿಂದ ಕರ್ನಾಟಕ ರಾಜ್ಯದ ಸುಮಾರು ನಾಲ್ಕು ಜಿಲ್ಲೆಯ ರೈತರು, ಜನರು ಕುಡಿಯುವ ನೀರಿನಿಂದ ವಂಚಿತವಾಗಿ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ.
ಈ ಕೂಡಲೇ ತಾವುಗಳು ಮದ್ಯಪ್ರವೇಶಿಸಿ ಗೋವಾ ಸರ್ಕಾರಕ್ಕೆ ಮನವರಿಕೆ ಮಾಡಿ ಇಲ್ಲಿಯವರೆಗೆ ತೆರವುಗೊಳಿಸಿದ ಗೋವಾ ಕನ್ನಡಿಗರಿಗೆ ಬೇರೆ ಕಡೆ ಶಾಶ್ವತ ಪುನರ್‍ವಸತಿ ಕಲ್ಪಿಸಿ, ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಸಹಕರಿಸಿ ಮಾನವೀಯತೆ ತೋರಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕವು ಸಮಸ್ತ ಕನ್ನಡಿಗರ ಪರವಾಗಿ ಈ ಮನವಿಯಲ್ಲಿ ಕೋರಿದೆ.
ಮನವಿ ಸ್ವೀಕರಿಸಿ ಮಾತನಾಡಿದ ಗೋವಾ ಸಂಸದ ಹಾಗೂ ಕೇಂದ್ರ ಸಚಿವ ಶ್ರೀಪಾದ ನಾಯಕ ಅವರು ಇವೆರಡು ಸಮಸ್ಯಗಳು ಅಂತ್ಯಂತ ಸೂಕ್ಷ್ಮವಾಗಿದ್ದು ಆದಷ್ಟು ಬೇಗ ಇವುಗಳಿಗೆ ಶಾಶ್ವತ ಪರಿಹಾರ ದೋರಕಿಸಿ ಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು ಅಲ್ಲಿಯವರೆಗೆ ಗೋವಾ ಮತ್ತು ಕರ್ನಾಟಕದ ಜನತೆ ಶಾಂತಿ ಹಾಗೂ ಸೌಹಾರ್ದತೆಯಿಂದ ಇರಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಸಾದಿಕ ಹಲ್ಯಾಳ, ದೀಪಕ ಹಂಜಿ, ಕೃಷ್ಣಾ ಖಾನಪ್ಪನವರ, ಮಹಾದೇವ ಮಕ್ಕಳಗೇರಿ ಸೇರಿದಂತೆ ಇನ್ನು ಅನೇಕರು ಉಪಸ್ಥಿತರಿದ್ದರು.

Related posts: