ಘಟಪ್ರಭಾ:ಗುರುವಿನ ಅನುಗ್ರಹದಿಂದ ಮನುಷ್ಯನ ಬದುಕು ಹಸನಾಗುತ್ತದೆ : ಪೂಜ್ಯ ಶ್ರೀ ಮಹಾದೇವ ಸರಸ್ವತಿ ಮಹಾಸ್ವಾಮಿಜಿ
ಗುರುವಿನ ಅನುಗ್ರಹದಿಂದ ಮನುಷ್ಯನ ಬದುಕು ಹಸನಾಗುತ್ತದೆ : ಪೂಜ್ಯ ಶ್ರೀ ಮಹಾದೇವ ಸರಸ್ವತಿ ಮಹಾಸ್ವಾಮಿಜಿ
ಘಟಪ್ರಭಾ ಜ 1 : ಸಮೀಪದ ಸುಕ್ಷೇತ್ರ ಹುಣಶ್ಯಾಳ ಪಿಜಿ ಗ್ರಾಮದ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ನಡೆಯುತ್ತಿರುವ 19ನೇ ಸತ್ಸಂಗ ಮಹೋತ್ಸವ ಸೋಮವಾರದಂದು ಮೊದಲ ದಿನದ ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಲಿಂಗ ಯತಿರಾಜರ ಶ್ರೀ ಶಾಂಭವಿ ಮಾತೆಯ ಶ್ರೀ ಸಿದ್ಧಲಿಂಗ ಮಹಾರಾಜರ ಮೂರ್ತಿಗಳಿಗೆ ರುದ್ರಾಭಿಷೇಕ ಜರುಗಿತು.
ನಂತರ ಮುತ್ತೈದಿಯರ ಉಡಿ ತುಂಬುವ ಕಾರ್ಯಕ್ರಮ ಸುಮಂಗಲಿಯರಿಂದ ನೆರವೇರಿತು. ಮುಂಜಾನೆ ಓಂಕಾರ ಧ್ವಜಾರೋಹಣ ಹಾಗೂ ಶ್ರೀ ಸಿದ್ಧಲಿಂಗೇಶ್ವರ ರಥದ ಕಳಸಾರೋಹಣ ಆಗಮಿಸಿದ ಮಹಾತ್ಮರಿಂದ ಜರುಗಿತು.
ಬೆಳಗಾವಿಯ ಕನ್ನಡ ಮತ್ತು ಸಂಸ್ಕಂತಿ ಇಲಾಖೆ ಮತ್ತು ಗೋಕಾಕದ ಮಧುರ ಸಂಗೀತ ಬಳಗ ವತಿಯಿಂದ ಸಾಂಸ್ಕಂತಿಕ ಸಿರಿ ಕಾರ್ಯಕ್ರಮ ಮತ್ತು ಶ್ರೀ ಸಿದ್ಧಲಿಂಗ ಯತಿರಾಜರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೈಲಹೊಂಗಲದ ಶ್ರೀ ಶಿವಾನಂದಮಠದ ಪೂಜ್ಯ ಶ್ರೀ ಮಹಾದೇವ ಸರಸ್ವತಿ ಮಹಾಸ್ವಾಮಿಜಿ ಅವರು ಮಾನವ ಜನ್ಮ ದೊಡ್ಡದ್ದು ಅದನ್ನು ಮಹಾತ್ಮರ, ಜಗದ್ಗುರುಗಳ ಆಶೀರ್ವಾದ ಪಡೆದುಕೊಂಡು ತಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಈ ಭಾಗದ ಭಕ್ತರು ಶ್ರೀ ನಿಜಗುಣ ದೇವರ ಮೇಲೆ ಇಟ್ಟಿರುವ ಅಪಾರವಾದ ಪ್ರೀತಿ, ವಾತ್ಸಲ್ಯದಿಂದ ಈ ಸುಕ್ಷೇತ್ರ ಪುಣ್ಯಕ್ಷೇತ್ರವಾಗಿದೆ. ಗುರುವಿನ ಅನುಗ್ರಹದಿಂದ ಮನುಷ್ಯನ ಬದುಕು ಹಸನಾಗುತ್ತದೆ ಎಂದರು.
ಕಾರ್ಯಕ್ರಮದ ನೇತ್ರತ್ವವನ್ನು ಶ್ರೀಮಠದ ಅಧಿಪತಿ ಶ್ರೀ ನಿಜಗುಣ ದೇವರು ವಹಿಸಿದ್ದರು. ಸಸ್ತಾಪುರದ ಸದಾನಂದ ಮಹಾಸ್ವಾಮಿಜಿ ಮಾತನಾಡಿ ಪೂಜ್ಯ ಶ್ರೀ ನಿಜಗುಣ ದೇವರು ಸಂಗೀತ, ಸಾಹಿತ್ಯ, ಕಲೆಯ ಸಂಗಮವಾಗಿದ್ದಾರೆ. ಭಾರತೀಯ ಸಂಸ್ಕøತಿ ಎತ್ತಿ ಹಿಡಿಯುವ ಕಾರ್ಯ ನಿಜಗುಣ ದೇವರು ಮಾಡಿದ್ದು, ಧಾರ್ಮಿಕ ವಿಚಾರಗಳನ್ನು ಒಳಗೊಂಡ ಸತ್ಸಂಗ ಸಮ್ಮೇಳನ ಭಾರತೀಯ ಸಂಪ್ರದಾಯದಂತೆ ಕುಂಭಮೇಳ, ಉಡಿ ತುಂಬುವ ಕಾರ್ಯಗಳು ಜ್ಞಾನದ ಜ್ಯೋತಿ ಬೆಳಗಬೇಕಾದ ಅವಶ್ಯ ಇದೆ ಎಂದರು.
ಗೂಗದಡಿಯ ಸಿದ್ಧರಾಮ ಸ್ವಾಮಿಜಿ, ಬಸವರಾಜ ಚೌಗಲಾ ಸೇರಿದಂತೆ ಅನೇಕ ಮಹಾತ್ಮರು ಇದ್ದರು.
ಕಾರ್ಯಕ್ರಮವನ್ನು ಗುರುನಾಥ ಶಾಸ್ತ್ರೀ ಕರಿಕಟ್ಟಿ ಸ್ವಾಗತಿಸಿ, ನಿರೂಪಿಸಿದರು.