RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಗಡಿ ಭಾಗಗಳಲ್ಲಿ ಕನ್ನಡ, ಮರಾಠಿ ಭಾಷೆಗಳ ಮಧ್ಯ ಸಾಮರಸ್ಯ ಕಾರ್ಯಕ್ರಮಗಳ ಆಯೋಜನೆ : ಖಾನಪ್ಪನವರ

ಗೋಕಾಕ:ಗಡಿ ಭಾಗಗಳಲ್ಲಿ ಕನ್ನಡ, ಮರಾಠಿ ಭಾಷೆಗಳ ಮಧ್ಯ ಸಾಮರಸ್ಯ ಕಾರ್ಯಕ್ರಮಗಳ ಆಯೋಜನೆ : ಖಾನಪ್ಪನವರ 

ಗಡಿ ಭಾಗಗಳಲ್ಲಿ ಕನ್ನಡ, ಮರಾಠಿ ಭಾಷೆಗಳ ಮಧ್ಯ ಸಾಮರಸ್ಯ ಕಾರ್ಯಕ್ರಮಗಳ ಆಯೋಜನೆ : ಖಾನಪ್ಪನವರ

ಗೋಕಾಕ ಜ 2: ಗಡಿ ಭಾಗಗಳಲ್ಲಿ ಕನ್ನಡವನ್ನು ಗಟ್ಟಿಗೊಳಿಸಲು ಜಿಲ್ಲೆಯ ಪ್ರತಿಯೊಬ್ಬ ಕನ್ನಡಿಗನು ಕಂಕಣಬದ್ಧವಾಗಬೇಕಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಅಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು.
ಅವರು ಸೋಮವಾರ ದಂದು ತಾಲೂಕಿನ ಕೊಳವಿ ಗ್ರಾಮದಲ್ಲಿ ನೂತನ ಕರವೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಮತ್ತು ಮರಾಠಿ ಭಾಷಿಕರ ಮದ್ಯೆ ವಿಷ ಬೀಜ ಬಿತ್ತುವ ಮತ್ತು ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕದಡಿಸುವ ಪ್ರಯತ್ನಗಳು ಕಳೆದ ಹಲವು ದಶಕಗಳಿಂದ ಕೆಲ ಪಟ್ಟಬದ್ಧ ಹಿತಾಸಕ್ತಿಗಳು ಮಾಡುತ್ತಾ ಬಂದಿವೆ. ಮುಂದಿನ ದಿನಗಳಲ್ಲಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಜಿಲ್ಲೆಯ ಗಡಿಭಾಗಗಳಲ್ಲಿ ಕನ್ನಡ, ಮರಾಠಿ ಭಾಷೆಗಳ ಮಧ್ಯ ಸಾಮರಸ್ಯ ಕಾರ್ಯಕ್ರಮಗಳನ್ನು ಆಯೋಜಿಸಲು ಎಲ್ಲ ರೀತಿಯ ಸಿದ್ದತೆಗಳನ್ನು ಪ್ರಾರಂಭಿಸಿದ್ದೇವೆ. ಜಿಲ್ಲೆಯ ಪ್ರತಿಯೊಬ್ಬ ಕನ್ನಡಿಗ ಈ ಸಾಮರಸ್ಯದ ಕಾರ್ಯಕ್ರಮಗಳಲ್ಲಿ ಬೆಂಬಲ ವ್ಯಕ್ತಪಡಿಸಿ ಗಡಿಯಲ್ಲಿ ಮರಾಠಿ ಮತ್ತು ಕನ್ನಡ ಭಾಷಿಕರ ಮದ್ಯೆ ಬಾಂಧವ್ಯ ಭದ್ರಗೊಳಿಸಲು ಮುಂದಾಗಬೇಕೆಂದು ಕರೆ ನೀಡಿದರು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪತ್ರಯ್ಯ ಸ್ವಾಮಿಗಳು ಅವರು ವಹಿಸಿ ಆರ್ಶೀವಚನ ನೀಡಿದರು. ವೇದಿಕೆ ಮೇಲೆ ಗ್ರಾ.ಪಂ. ಸದಸ್ಯ ಕೆಂಪಣ್ಣ ಯರಗಟ್ಟಿ, ಗ್ರಾಮದ ಹಿರಿಯರು ಆನಂದ ಹಟ್ಟಿಗೌಡರ, ಮಾರುತಿ ಶಿಂಗಾಡಿ, ಕರವೇ ಕಾರ್ಯದಶಿ ಸಾಧಿಕ್ ಹಲ್ಯಾಳ, ಕೃಷ್ಣಾ ಖಾನಪ್ಪನವರ, ದೀಪಕ್ ಹಂಜಿ, ಮಹಾದೇವ ಮಕ್ಕಳಗೇರಿ, ಸ್ಥಳೀಯ ಗ್ರಾಮ ಘಟಕದ ನೂತನ ಅಧ್ಯಕ್ಷ ದುಂಡಪ್ಪ ಮೆಳವಂಕಿ, ಕಿರಣ ಶಿಳನವರ, ರಾಮಣ್ಣ ತಿಗಡಿ, ಜಗದೀಶ್ ತಳವಾರ, ಸಂತೋಷ ಬೆಟಗೇರಿ, ಯಶವಂತ ಗ್ಯಾನಪ್ಪನವರ, ಮಂಜುನಾಥ ಕಂಬಾರ ಸೇರಿದಂತೆ ಇನ್ನೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts: