ಮೂಡಲಗಿ:ಪ್ರಪಂಚದಲ್ಲಿ ಭಾರತ ವಿವಿಧತೆಯಲ್ಲಿ ಏಕತೆಗೆ ಹೆಸರಾಗಿದೆ : ಶಾಸಕ ಬಾಲಚಂದ್ರ
ಪ್ರಪಂಚದಲ್ಲಿ ಭಾರತ ವಿವಿಧತೆಯಲ್ಲಿ ಏಕತೆಗೆ ಹೆಸರಾಗಿದೆ : ಶಾಸಕ ಬಾಲಚಂದ್ರ
ಮೂಡಲಗಿ ಜ 4 : ಪ್ರಪಂಚದಲ್ಲಿ ಭಾರತ ವಿವಿಧತೆಯಲ್ಲಿ ಏಕತೆಗೆ ಹೆಸರಾಗಿದೆ. ಸಾವಿರಾರು ಜಾತಿಗಳು, ನೂರಾರು ಧರ್ಮಗಳು ಈ ದೇಶದಲ್ಲಿದ್ದರೂ ಎಲ್ಲರೂ ಪರಸ್ಪರ ಸಹೋದರತ್ವ ಮನೋಭಾವನೆಯಿಂದ ಬದುಕುತ್ತಿರುವುದು ಏಕತೆಯ ಸಂದೇಶವೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಬುಧವಾರ ಸಂಜೆ ಇಲ್ಲಿಗೆ ಸಮೀಪದ ಗುಜನಟ್ಟಿ ಗ್ರಾಮದ ನಿಂಗಮ್ಮಾದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಗುಜನಟ್ಟಿ ಗ್ರಾಮದ ಅಭಿವೃದ್ಧಿಗೆ ಕಳೆದ ವರ್ಷ ಸುವರ್ಣ ಗ್ರಾಮ ಯೋಜನೆಯನ್ನು ಅನುಷ್ಠಾನ ಮಾಡಿದ್ದು, 75 ಲಕ್ಷ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಶಾಲಾ ಕೊಠಡಿಗಳನ್ನು ದುರಸ್ತಿಗೊಳಿಸಲಾಗಿದೆ. ಸಾರ್ವಜನಿಕರಿಗೆ ಶಾಶ್ವತ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲಾಗಿದೆ. ಜೊತೆಗೆ ಪಿಡಬ್ಲೂಡಿ ಇಲಾಖೆಯಿಂದ ಟಿಎಸ್‍ಪಿ ಯೋಜನೆಯಡಿ ಗುಜನಟ್ಟಿ ಗ್ರಾಮದ ಪರಿಶಿಷ್ಟ ಪಂಗಡದ ಕೂಡು ರಸ್ತೆಗೆ 50 ಲಕ್ಷ ರೂ.ಅನುದಾನ ಶೀಘ್ರದಲ್ಲಿಯೇ ಬರಲಿದೆ ಎಂದು ಹೇಳಿದರು.
ಈ ಮೊದಲು ಮಸಗುಪ್ಪಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿದ್ದ ಗುಜನಟ್ಟಿ ಗ್ರಾಮ ಪ್ರತ್ಯೇಕ ಗ್ರಾಮ ಪಂಚಾಯತಿಯಾಗಿ ರೂಪುಗೊಂಡಿದ್ದರಿಂದ ಸರ್ಕಾರದಿಂದ ಅಭಿವೃದ್ಧಿಗೆ ಹೆಚ್ಚೆಚ್ಚು ಹಣ ಬರುತ್ತಿದೆ. ಅಭಿವೃದ್ಧಿ ಹಿನ್ನೆಲೆಯಲ್ಲಿ ಇಲ್ಲಿನ ಕಾರ್ಯಕರ್ತರು ತಮ್ಮಲ್ಲಿರುವ ಚಿಕ್ಕಪುಟ್ಟ ವ್ಯತ್ಯಾಸಗಳನ್ನು ಮರೆತು ಎಲ್ಲರೂ ಒಂದಾಗಬೇಕಿದೆ. ಮನಸ್ತಾಪಗಳು ಏನೇ ಇದ್ದರೂ ಅವುಗಳನ್ನು ಬದಿಗಿಟ್ಟು ಗುಜನಟ್ಟಿ ಗ್ರಾಮದ ವಿಕಾಸಕ್ಕೆ ಶ್ರಮಿಸುವಂತೆ ಕಾರ್ಯಕರ್ತರಿಗೆ ಸಲಹೆ ಮಾಡಿದರು.
ಪ್ರಭಾಶುಗರ ನಿರ್ದೇಶಕ ಕೃಷ್ಣಪ್ಪ ಬಂಡ್ರೊಳ್ಳಿ, ತಾಪಂ ಮಾಜಿ ಸದಸ್ಯ ಸಾಬಪ್ಪ ಬಂಡ್ರೊಳ್ಳಿ, ಲಕ್ಷ್ಮಣ ಬಂಡ್ರೊಳ್ಳಿ, ರಾಮಪ್ಪ ಅರಭಾವಿ, ಪವಾಡೆಪ್ಪ ಕುರಿಬಾಗಿ, ಸಿದ್ಧಾರೂಢ ಮುಕ್ಕನ್ನವರ, ರವಿ ಶಿರಗನ್ನವರ, ಬಸವರಾಜ ಬಂಡ್ರೊಳ್ಳಿ, ಮಾಯಪ್ಪ ಬಂಡ್ರೊಳ್ಳಿ, ಹಣಮಂತ ರೊಡ್ಡಲಕ್ಕನ್ನವರ, ಮಲ್ಲಪ್ಪ ಬಂಡ್ರೊಳ್ಳಿ, ಭೀಮಪ್ಪ ನಾವಿ, ಸಿದ್ದು ಜಮನಾಳ, ಮುಂತಾದವರು ಉಪಸ್ಥಿತರಿದ್ದರು.